ಏಶ್ಯದ ಅತ್ಯಂತ ಹಳೆಯ,ಗಿನ್ನೆಸ್‌ ದಾಖಲೆಯ ‘ಗಜ ಮುತ್ತಜ್ಜಿ’ ಇನ್ನಿಲ್ಲ

Team Udayavani, Feb 6, 2019, 10:34 AM IST

ತಿರುವನಂತಪುರ : ಏಶ್ಯದ ಅತ್ಯಂತ ಹಳೆಯ ಮತ್ತು ಗಿನ್ನೆಸ್‌ ದಾಖಲೆಗೆ ಸೇರಿದ್ದ  80 ವರ್ಷದ ಸಾಕಾನೆ ದಾಕ್ಷಾಯಿಣಿ, ಪಪ್ಪನಮ್‌ಕೋಡೆ ಸಮೀಪದ ಶುಶ್ರೂಷಾ ಕೇಂದ್ರದಲ್ಲಿ  ಕೊನೆಯುಸಿರೆಳೆಯಿತು.

ಸಾಕಾನೆ ದಾಕ್ಷಾಯಿಣಿಗೆ ವಾರ್ಧಕ್ಯ ಮತ್ತು ಅನಾರೋಗ್ಯ ಕಾಡುತ್ತಿತ್ತು; ಪರಿಣಾಮವಾಗಿ ಅದು ನಿನ್ನೆ ಮಂಗಳವಾರ ಪ್ರಾಣ ಬಿಟ್ಟಿತು ಎಂದು ಅದರ ಮಾಲಕನಾಗಿರುವ ತಿರುವಾಂಕೂರು ದೇವಸ್ವ ಮಂಡಳಿ ತಿಳಿಸಿದೆ.

2016ರಲ್ಲಿ ದಾಕ್ಷಾಯಿಣಿಗೆ ‘ಗಜ ಮುತ್ತಜ್ಜಿ’ ಎಂಬ ಬಿರುದನ್ನು ನೀಡಲಾಗಿತ್ತು ಮತ್ತು ಆ ಮೂಲಕ ಅದು ಏಶ್ಯದ ಅತ್ಯಂತ ಹಳೆಯ ಸಾಕಾನೆ ಎಂಬ ಕೀರ್ತಿಯೊಂದಿಗೆ ಗಿನ್ನೆಸ್‌ ದಾಖಲೆಗೆ ಸೇರಿತ್ತು.

ಅಂಚೆ ಇಲಾಖೆ ‘ಗಜ ಮುತ್ತಜ್ಜಿ’ ದಾಕ್ಷಾಯಿಣಿ ಬಗ್ಗೆ ಪೋಸ್ಟಲ್‌ ಕವರ್‌ ಹೊರತಂದಿತ್ತು. 

ದೇವಸ್ಥಾನದ ಮೆರವಣಿಗೆಗಳಲ್ಲಿ ದಾಕ್ಷಾಯಿಣಿಗೆ ವಿಶೇಷ ಸ್ಥಾನಮಾನ ಇತ್ತು. ತಿರುವಾಂಕೂರಿನ ಪದ್ಮನಾಭ ಸ್ವಾಮಿ ದೇವಸ್ಥಾನದ ಅರಟ್ಟು  ಮೆರವಣಿಗೆಯಲ್ಲಿ ದಾಕ್ಷಾಯಿಣಿ ಈಗ ಮೂರು ವರ್ಷ ಹಿಂದಿನ ವರೆಗೂ ಭಾಗವಹಿಸುತ್ತಿದ್ದಳು.

ಇಂದು ಸಂಜೆಯ ದಾಕ್ಷಾಯಿಣಿಯ ಅಂತ್ಯ ಕ್ರಿಯೆ ನಡೆಯುವ ನಿರೀಕ್ಷೆ ಇದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ