ಪಾಕ್‌ನ ಶೇ.87 ಭೂ ಪ್ರದೇಶದ ಮೇಲೆ ಭಾರತ ದೃಷ್ಟಿ

Team Udayavani, Mar 1, 2019, 12:30 AM IST

ಜ.17ರಂದು ಪ್ರಧಾನಮಂತ್ರಿ ಕಚೇರಿಯಲ್ಲಿ ಸಹಾಯಕ ಸಚಿವರಾಗಿರುವ ಡಾ.ಜಿತೇಂದ್ರ ಸಿಂಗ್‌ ಒಂದು ಮಾತು ಹೇಳಿದ್ದರು -“ಪಾಕಿಸ್ಥಾನದಲ್ಲಿರುವ ಪ್ರತಿಯೊಂದು ಮನೆಗಳಲ್ಲಿ ಏನಾಗುತ್ತದೆ ಎನ್ನುವುದನ್ನು ಇಣುಕಿ ನೋಡುವ ಸಾಮರ್ಥ್ಯವನ್ನು ಭಾರತ ಹೊಂದಿದೆ’. ಈ ಮಾತುಗಳ ನಿಜವಾದ ಅರ್ಥ ಗೊತ್ತಾದದ್ದೇ ಫೆ. 26ಕ್ಕೆ ವಾಯುಪಡೆ ಪಾಕ್‌ ಮೇಲೆ ದಾಳಿಯಿಂದ‌. ಇಸ್ರೋದ ಉಪಗ್ರಹಗಳಿಂದಾಗಿ ಪಾಕಿಸ್ಥಾನ ದ ಒಟ್ಟು ಭೂಪ್ರದೇಶದ ಶೇ.87ರಷ್ಟು  ವಿವರ ಭಾರತದ ಬಳಿಯಿದೆ. 

8.8 ಲಕ್ಷ ಚಕಿಮೀ ಪಾಕಿಸ್ಥಾನ ದ ಹೊಂದಿರುವ ಭೂಪ್ರದೇಶದ ವಿಸ್ತೀರ್ಣ
7.7 ಲಕ್ಷ ಚಕಿಮೀ ಇಸ್ರೋ ಉಪಗ್ರಹಗಳು ಪರಿಶೀಲನೆ ಸಾಮರ್ಥ್ಯ

ಮೈಕ್ರೋಸ್ಯಾಟ್‌-ಆರ್‌
2019 ಜ.24- ಉಡಾವಣೆಯಾದ ದಿನ
ಪಿಎಸ್‌ಎಲ್‌ವಿ-ಸಿ44- ಉಡಾವಣಾ ರಾಕೆಟ್‌
ಭೂ ಪರಿವೀಕ್ಷಣೆ- ಸ್ಯಾಟಲೈಟ್‌ ವಿಶೇಷತೆ
ಡಿಆರ್‌ಡಿಒ ಪ್ರಯೋಗಶಾಲೆ- 
ಸ್ಯಾಟಲೈಟ್‌ ಸಿದ್ಧಪಡಿಸಿದವರು
ಏನು ಉಪಯೋಗ?
ರಾತ್ರಿಯ ವೇಳೆಯ ಚಿತ್ರ ಸೆರೆಹಿಡಿದು, ಕಳುಹಿಸುತ್ತದೆ.
ಹಲವು ರೀತಿಯ ಯೋಜನೆಗಳ ಜಾರಿ ಮತ್ತು ಉಸ್ತುವಾರಿಗೆ ನೆರವು

ಎಚ್‌ವೈಎಸ್‌ಐಎಸ್‌ ಹೈಪರ್‌- ಸ್ಪೆಕ್ಟ್ರಲ್‌ ಇಮೇಜಿಂಗ್‌ ಸ್ಯಾಟಲೈಟ್‌
2018 ನ.28-  ಉಡಾವಣಾ ದಿನ
ಪಿಎಸ್‌ಎಲ್‌ವಿ-ಸಿ43- ಉಡಾವಣಾ ರಾಕೆಟ್‌
ಏನು ಉಪಯೋಗ?
ಮಣ್ಣಿನ ಮೇಲ್ಭಾಗದಿಂದ ಕೆಲ ಸೆಂಟಿಮೀಟರ್‌ ಆಳದಲ್ಲಿರುವ ವಸ್ತುಗಳ ಪರಿಶೀಲನೆ ನಡೆಸುತ್ತದೆ.
ವಿಶೇಷವಾಗಿ ಸುಧಾರಿತ ಸ್ಫೋಟಕ (ಐಇಡಿ), ನೆಲಬಾಂಬ್‌ಗಳನ್ನು ಪತ್ತೆಹಚ್ಚುತ್ತದೆ.

ಐಆರ್‌ಎನ್‌ಎಸ್‌ಎಸ್‌ (IRNSS) ಉಪಗ್ರಹಗಳು
ಯಾವ ವಿಭಾಗದ್ದು?- ದಿಕ್ಸೂಚಿ (Navigation) ಉಪಗ್ರಹಗಳು. ಈ ಪೈಕಿ 9ನ್ನು ಉಡಾಯಿಸಲಾಗಿದೆ. 7 ಈಗಾಗಲೇ ಕಕ್ಷೆಯಲ್ಲಿವೆ. 
ಯಾವಾಗ ಉಡಾವಣೆ?
    2013 ಜು.1- ಮೊದಲ ಉಡಾವಣೆ
    2018 ಏ.12- ಕೊನೆಯ ಉಡಾವಣೆ
1,600 ಕಿಮೀ- ಗಡಿಯಿಂದ ಇಷ್ಟು ದೂರದ ವರೆಗಿನ ವ್ಯಾಪ್ತಿ
ಏನು ಉಪಯೋಗ?
ಕ್ಷಿಪಣಿಗಳ ಉಡಾವಣೆ ಸೇರಿದಂತೆ ಅತ್ಯಂತ ಸೂಕ್ಷ್ಮ, ರಹಸ್ಯ ಮಾಹಿತಿಯನ್ನು ಸಂಗ್ರಹಿಸಿ ನೀಡುತ್ತದೆ.

ಜಿಸ್ಯಾಟ್‌-7ಎ
2018 ಡಿ.19- ಉಡಾವಣೆಯ ದಿನ
ಜಿಎಸ್‌ಎಲ್‌ವಿ-ಎಫ್11- ಉಡಾವಣಾ ರಾಕೆಟ್‌
ಯಾವ ವಿಭಾಗದ್ದು?- ಐಎಎಫ್ಗಾಗಿ 2ನೇ ಸಂಪರ್ಕ ಉಪಗ್ರಹ
ಏನು ಉಪಯೋಗ?
ರೇಡಾರ್‌ ಮತ್ತು ಏರ್‌ಬೇಸ್‌ (ವಾಯುನೆಲೆ) ಮತ್ತು ಏರ್‌ಬೋರ್ನ್ ಅರ್ಲಿ ವಾರ್ನಿಂಗ್‌ ಆ್ಯಂಡ್‌ ಕಂಟ್ರೋಲ್‌ ಏರ್‌ಕ್ರಾಫ್ಟ್ ಫಾರ್‌ ಸರ್ವಿಲೆನ್ಸ್‌ ನಡುವೆ ಸಂಪರ್ಕ.
ವಿಮಾನಗಳ ನಡುವೆ ಕ್ಷಣ ಕ್ಷಣದ ಸಂಪರ್ಕ, ದೂರದಿಂದ ಬರುವ ಹಡಗು, ವಿಮಾನಗಳ ಬಗ್ಗೆ ಮಾಹಿತಿ
ಡ್ರೋನ್‌ಗಳಿಗೆ ಫೋಟೋ, ವಿಡಿಯೋ ತೆಗೆದು ಅದನ್ನು ಭೂಮಿಯಲ್ಲಿರುವ ಕೇಂದ್ರಕ್ಕೆ ಕಳುಹಿಸಲು ನೆರವು
ದೂರದಲ್ಲಿರುವ ಶತ್ರು ನೆಲೆಗಳನ್ನು ಸರಿಯಾಗಿ ಪತ್ತೆ ಹಚ್ಚಲು ಮಾನವ ರಹಿತ ವಿಮಾನ (ಯುಎವಿ)ಗಳಿಗೆ ಸಹಾಯ

ಕಾಟೋಸ್ಯಾಟ್‌ (CARTOSAT) ಉಪಗ್ರಹಗಳು
ಯಾವ ವಿಭಾಗ
ದ್ದು? - ದೂರ ಸಂವೇದಿ (Remote sensing) ಉಪಗ್ರಹಗಳು. ಈ ಪೈಕಿ 5 ಮಿಲಿಟರಿ ಉಪಯೋಗಕ್ಕಾಗಿ.
ಯಾವಾಗ ಉಡಾವಣೆ?
    2005- ಮೊದಲ ಉಡಾವಣೆ
    2017- ಕೊನೆಯ ಉಡಾವಣೆ
ಏನು ಉಪಯೋಗ?
ಸೇನಾ ಪಡೆಗಳ ಕೋರಿಕೆಯ ಮೇರೆಗೆ ಅಗತ್ಯದ ಫೋಟೋಗಳನ್ನು ಪೂರೈಸುತ್ತದೆ.

ಜಿಸ್ಯಾಟ್‌-7
2013 ಆ.30- ಉಡಾವಣೆಯ ದಿನ
ಆ್ಯರೀನ್‌-5- ಉಡಾವಣಾ ರಾಕೆಟ್‌
ಯಾವ ವಿಭಾಗದ್ದು?- ಭಾರತೀಯ ನೌಕಾಪಡೆಗಾಗಿನ ಸಂಪರ್ಕ ಉಪಗ್ರಹ
ಏನು ಉಪಯೋಗ?
ಭಾರತೀಯ ಭೂಪ್ರದೇಶವನ್ನೂ ಒಳಗೊಂಡಂತೆ ವಿಸ್ತಾರವಾಗಿರುವ ಸಮುದ್ರ ಪ್ರದೇಶದ ವ್ಯಾಪ್ತಿಯಲ್ಲಿ ಸಂವಹನ ನಡೆಸಲು ನೆರವು.

https://beta.udayavani.com/articles/special/mahashivratri-2019

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ