ಬಜೆಟ್‌ನಿಂದ ನಿಮ್ಮ ಜಿಲ್ಲೆಗಳ ನಿರೀಕ್ಷೆ ಏನು?

Team Udayavani, Feb 7, 2019, 12:30 AM IST

ಇದು ಶುಕ್ರವಾರ ಮಂಡನೆಯಾಗಲಿರುವ ರಾಜ್ಯ ಬಜೆಟ್‌ ಮೇಲೆ ಜಿಲ್ಲೆಗಳು ಇಟ್ಟಿರುವ ನಿರೀಕ್ಷೆಯ ಚಿತ್ರಿಕೆ. ಹಿಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಲವೇ ಕೆಲವು ಜಿಲ್ಲೆಗಳಿಗೆ ಆದ್ಯತೆ ಕೊಟ್ಟರು ಎಂಬ ಆರೋಪ ಎದುರಿಸಿದ್ದರು. ಹಾಗಾಗಿಯೇ, ಈ ಬಾರಿ ಆ ಅನ್ಯಾಯ ಸರಿದೂಗಬಹುದು ಎಂಬ ಕಾರಣಕ್ಕೆ ಎಲ್ಲ ಜಿಲ್ಲೆಗಳೂ ಕೊಂಚ ಜಾಸ್ತಿ ನಿರೀಕ್ಷೆಯನ್ನೇ ಇಟ್ಟುಕೊಂಡಿವೆ. ಬಜೆಟ್‌ ಮಂಡನೆ ವೇಳೆ ಈ ನಿರೀಕ್ಷೆಯ ಪಟ್ಟಿಯನ್ನು  ಪಕ್ಕದಲ್ಲಿಟ್ಟುಕೊಂಡು  ನಿಮ್ಮ ನಿಮ್ಮ ಜಿಲ್ಲೆಯ ನಿರೀಕ್ಷೆ ಈಡೇರಿತೇ ಎಂದು ನೀವೇ ಪರೀಕ್ಷಿಸಿಕೊಳ್ಳಿ ಈ ಬಾರಿ ಜಿಲ್ಲಾವಾರು ಹಂಚಿಕೆ ಹೇಗಾಗಿದೆ ಎಂದು.

ಚಿಕ್ಕಮಗಳೂರು
ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಗ್ರಾಮಗಳಿಗೆ ಶಾಶ್ವತ 
ಕುಡಿಯುವ ನೀರಿನ ವ್ಯವಸ್ಥೆ
ಮೂಡಿಗೆರೆ ತಾಲೂಕಿನ ಕಳಸಾ ಹೋಬಳಿಗೆ 
ಪ್ರತ್ಯೇಕ ತಾಲೂಕು ಸ್ಥಾನಮಾನ 
ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ

ಕೊಪ್ಪಳ
ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ
ಇಸ್ರೇಲ್‌ ಮಾದರಿ ಕೃಷಿ ಯೋಜನೆ
ಟಿಬಿ ಡ್ಯಾಮ್‌ ಹೂಳೆತ್ತುವ ಅಥವಾ 
ಸಮನಾಂತರ ಜಲಾಶಯ ನಿರ್ಮಾಣ ಯೋಜನೆ
ಕುಕನೂರು, ಕಾರಟಗಿ ಹಾಗೂ ಕನಕಗಿರಿ 
ಹೊಸ ತಾಲೂಕುಗಳು ಕಾರ್ಯಾರಂಭ 

ಬಾಗಲಕೋಟೆ
ಗುಳೆ ತಪ್ಪಿಸಲು ಕೈಗಾರಿಕೆ ಸ್ಥಾಪನೆ
ಮಲಪ್ರಭಾ ಎಡದಂಡೆ, ಘಟಪ್ರಭಾ 
ಬಲದಂಡೆ ಕಾಲುವೆಗಳಿಂದ ಸುಮಾರು 
1.56 ಲಕ್ಷ ಎಕರೆ ಭೂಮಿಗೆ ನೀರಾವರಿ 
ನವಿಲುತೀರ್ಥ ಡ್ಯಾಂನಿಂದ ಎಂಎಲ್‌ಬಿಸಿ, ಹಿಡಕಲ್‌ ಡ್ಯಾಂನಿಂದ ಜಿಎಲ್‌ಬಿಸಿ ಕಾಲುವೆಗೆ ನೀರಾವರಿ
ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದಲ್ಲಿ ನೇಕಾರರಿಗೆ ಕಚ್ಚಾವಸ್ತು ಪೂರೈಕೆಯಿಂದ ಹಿಡಿದು, ಉತ್ಪಾದಿಸಿದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ

ಬಳ್ಳಾರಿ
ಕೃಷಿ ಪದವಿ ಕಾಲೇಜು ಆರಂಭ
ಎರಡನೇ ಬೆಳೆಗೆ ನೀರಿನ ಕೊರತೆ 
ಎದುರಿಸುತ್ತಿರುವ ರೈತರಿಗೆ ಪರ್ಯಾಯ 
ವ್ಯವಸ್ಥೆಯ ಬಗ್ಗೆ ಗಟ್ಟಿ ನಿರ್ಧಾರ 
ಹಂಪಿಯಲ್ಲಿ ಪ್ರವಾಸೋದ್ಯಮ 
ವಿಶ್ವವಿದ್ಯಾಲಯ  ಸ್ಥಾಪನೆಗೆ ಅನುದಾನ
ಹಗರಿಯಲ್ಲಿ ಶತಮಾನೋತ್ಸವ 
ಪೂರೈಸಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ 
ಕೃಷಿ ಪದವಿ ಕಾಲೇಜು ಸ್ಥಾಪನೆ

ಬೆಳಗಾವಿ
ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಕಚೇರಿಗಳ ಸ್ಥಳಾಂತರ ಮಾಡಬೇಕು. ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಹಾಗೂ ಹೊಸ ಕೈಗಾರಿಕೆಗಳ ಸ್ಥಾಪನೆ
ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ ಆದ್ಯತೆ. ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗೆ ಅನುದಾನ
ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆ ಪೂರ್ಣಗೊಳಿಸಿ ಎಲ್ಲ ಹಳ್ಳಿಗಳಿಗೆ ನೀರಾವರಿ ಸೌಲಭ್ಯ
ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯದ ಹೂಳೆತ್ತುವುದು.

ಚಿತ್ರದುರ್ಗ
ಎಲ್‌ಇಡಿ ಲೈಟ್‌ ಉತ್ಪಾದನಾ ಘಟಕಕ್ಕೆ ಅನುದಾನ
ಇಸ್ರೇಲ್‌ ಮಾದರಿ ಕೃಷಿಗೆ ಕಾರ್ಯಯೋಜನೆ 
ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು
ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಪೂರ್ಣ  

ಗದಗ
ಮಹದಾಯಿ, ಕಳಸಾ- ಬಂಡೂರಿ 
ಯೋಜನೆ ಸಾಕಾರ ನಿರೀಕ್ಷೆ 
ಗಜೇಂದ್ರಗಡ ಮತ್ತು ಲಕ್ಷೆಶ್ವರ ಹೊಸ 
ತಾಲೂಕುಗಳ ಪೂರ್ಣ ಕಾರ್ಯಾರಂಭ. 
ದೇಶದ ಪ್ರಥಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಸ್ವಂತ ಕ್ಯಾಂಪಸ್‌ ಸ್ಥಾಪನೆ 
ರೋಣ ತಾಲೂಕಿಗೆ ಕುಡಿಯುವ ನೀರು 
ಕಲ್ಪಿಸಲಿರುವ ಕೃಷ್ಣಾ “ಬಿ’ ಸ್ಕೀಂ, ಬೆಣ್ಣೆಹಳ್ಳ ನೀರಿನ ಬಳಕೆ
ಧಾರವಾಡ ವಿಶ್ವವಿದ್ಯಾಲಯದ ಗದಗ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ

ಕೊಡಗು
ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಜಿಲ್ಲೆಯ ಪುನರ್‌ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್‌
ಪ್ರವಾಸೋದ್ಯಮ ಚೇತರಿಕೆಗೆ ಅಗತ್ಯ ಕ್ರಮ
ಕುಶಾಲನಗರ, ಪೊನ್ನಂಪೇಟೆ ತಾಲೂಕು ಘೋಷಣೆ

ಹಾವೇರಿ
ಇಸ್ರೇಲ್‌ ಮಾದರಿಯಲ್ಲಿ ಜಿಲ್ಲೆಯ 
5000ಹೆಕ್ಟೇರ್‌ ಪ್ರದೇಶಗಳಿಗೆ ನೀರಾವರಿ.
ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಹೆಚ್ಚಿನ 
ಅನುದಾನ, ಪ್ರತ್ಯೇಕ ಕೆಎಂಎಫ್‌ ಘಟಕ.
ರಾಣಿಬೆನ್ನೂರಿನಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ನಿರ್ಮಿಸಲು ಯೋಜಿಸಿರುವ ಮುದೇನೂರ ಬಳಿಯ ಬ್ಯಾರೇಜ್‌ಗೆ ಅನುದಾನ, 
ಹಾನಗಲ್ಲ ಭಾಗದಲ್ಲಿ ಮಾವು ಸಂಸ್ಕರಣಾ ಘಟಕ, ಸ್ಪೈಸ್‌ ಪಾರ್ಕ್‌ ಸ್ಥಾಪನೆ, ರಾಣಿಬೆನ್ನೂರ ಜಿಂಕೆವನ ಅಭಿವೃದ್ಧಿಗೆ ಅನುದಾನ, 

ವಿಜಯಪುರ
ಮುದ್ದೇಬಿಹಾಳ ಒಳಚರಂಡಿ ಯೋಜನೆ, ಕೃಷಿ ಸಂಶೋಧನಾ ಕೇಂದ್ರ, ಕುರಿ ರೋಗ ತಪಾಸಣಾ ಕೇಂದ್ರ  ಸ್ಥಾಪನೆ
ಇಸ್ರೇಲ್‌ ಮಾದರಿ ಯೋಜನೆ ದ್ರಾಕ್ಷಿ ತವರು, 
ಲಿಂಬೆ ಕಣಜ ವಿಜಯಪುರ ಜಿಲ್ಲೆಗೆ ಆದ್ಯತೆ 
ಬರಗಾಲದಲ್ಲಿ ಲಿಂಬೆ ಬೆಳೆ ಉಳಿವಿಗೆ 
ಟ್ಯಾಂಕರ್‌ ನೀರು ಪೂರೈಕೆಗೆ ಅನುದಾನ ನೀಡಿಕೆ
ರೂಢಗಿ ಕ್ರಾಸ್‌, ತಾಳಿಕೋಟೆ ಬಳಿ 
ವಿದ್ಯುತ್‌ ಉಪ ಕೇಂದ್ರ ಸ್ಥಾಪನೆ 

ಉತ್ತರ ಕನ್ನಡ
ಕಾರವಾರ ವಾಣಿಜ್ಯ ಬಂದರಿನ ಎರಡನೇ
ಹಂತದ ವಿಸ್ತರಣೆ ಯೋಜನೆ ಕಾರ್ಯರೂಪ 
ಕುಮಟಾ, ಕಾರವಾರಗಳಲ್ಲಿ  ಮಿನಿ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಅನುದಾನ
ಬಂದರುಗಳ ಅಭಿವೃದ್ಧಿ ಹಾಗೂ 
ಪ್ರವಾಸಿತಾಣಗಳಿಗೆ ಹೆಚ್ಚಿನ ಸೌಲಭ್ಯ
ಮೀನು ರಫ್ತಿಗೆ ಅನುಕೂಲವಾಗುವಂತೆ ಮೀನು ಸಂಸ್ಕರಣಾ ಘಟಕ 

ಧಾರವಾಡ
ಮನೆಮನೆಗೆ ಮಲಪ್ರಭಾದಿಂದ ನೀರು ಪೂರೈಸುವ 12 ಸಾವಿರ ಕೋಟಿ ರೂ.ಯೋಜನೆ .
ಅರ್ಧದಲ್ಲೇ ನಿಂತಿರುವ 100 ಕೋಟಿ ರೂ.ಗಳಿಗೂ ಅಧಿಕ ಮೊತ್ತದ 26ಕ್ಕೂ ಹೆಚ್ಚು ಯೋಜನೆಗಳ ಕಾಮಗಾರಿಗೆ ಮೋಕ್ಷ 
ಜಿಲ್ಲೆಗೆ ಕನಿಷ್ಠ 500 ಕೋಟಿ ರೂ.ಗಳ 
ವಿಶೇಷ ಅನುದಾನ ನೀಡಬೇಕು
ಶಾಶ್ವತ ಏತ ನೀರಾವರಿ ಯೋಜನೆ,ಕಾಳಿ,
ಬೆಣ್ಣಿಹಳ್ಳದ ನೀರು ಬಳಕೆಗೆ ಘೋಷಣೆ

ಕಲಬುರಗಿ
ತೊಗರಿ ಭಾವಾಂತರ ಯೋಜನೆ 
ಅಡಿ ಸೇರ್ಪಡೆಗೆ ಕ್ರಮ 
371ನೇ ವಿಧಿಯಡಿ ಪರಿಣಾಮಕಾರಿ 
ಜಾರಿ-ಖಾಲಿ ಹುದ್ದೆಗಳ ಭರ್ತಿ
ಹೈ.ಕ ಪ್ರದೇಶ ಅಭಿವೃದ್ಧಿ (ಎಚ್‌ಕೆಆರ್‌ಡಿಬಿ) ಮಂಡಳಿಗೆ ಸರ್ಕಾರ ಘೋಷಿಸಿದ ಮೊತ್ತದಲ್ಲಿ ಮಂಡಳಿಗೆ ಇನ್ನೂ 2385 ಕೋಟಿ ರೂ. ಬಿಡುಗಡೆ ನಿರೀಕ್ಷೆ 
ಕಾಳಗಿ, ಶಹಾಬಾದ, ಯಡ್ರಾಮಿ, 
ಕಮಲಾಪುರ ನೂತನ ತಾಲೂಕುಗಳ 
ಪೂರ್ಣ ಪ್ರಮಾಣದ ಕಾರ್ಯಾರಂಭ 

ಕೋಲಾರ
ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳಿಗೆ 
ನೀರು ಹರಿಸಬೇಕು ಹಾಗೂ  ಮೂರನೇ 
ಹಂತದ ಶುದ್ಧೀಕರಣಕ್ಕೆ ಒಪ್ಪಿಗೆ
ಹೈನುಗಾರರಿಗೆ ಪ್ರತಿ ಲೀಟರ್‌ 
ಹಾಲಿಗೆ ಬೆಂಬಲ ಬೆಲೆ
ಟೊಮೆಟೋ, ರೇಷ್ಮೆ ಧಾರಣೆ ಕುಸಿದಾಗ 
ಬೆಲೆ ಸ್ಥಿರೀಕರಿಸಿ ರೈತಾಪಿ ವರ್ಗಕ್ಕೆ ಧಾರಣೆ ನೀರಿಕ್ಷೆ
ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು ಕಾಲಮಿತಿ ಘೋಷಣೆ

ಮಂಡ್ಯ
ಮೈಷುಗರ್‌ಗೆ ಪರ್ಯಾಯವಾಗಿ 
ಅತ್ಯಾಧುನಿಕ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ
ವಿ.ಸಿ.ಫಾರಂನಲ್ಲಿ ಪಶು ವೈದ್ಯಕೀಯ ಕಾಲೇಜು 
ಮಂಡ್ಯದಲ್ಲಿ ತರಕಾರಿ ಹಾಗೂ ಕೃಷಿ 
ಉತ್ಪನ್ನಗಳ ಸಂರಕ್ಷಣೆಗೆ ಶೀತಲೀಕರಣ ಘಟಕ
ಮಂಡ್ಯಕ್ಕೆ ಮಹಾನಗರ ಪಾಲಿಕೆ ಸ್ಥಾನಮಾನ

ಉಡುಪಿ
ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ
ಉಡುಪಿ ನಗರಕ್ಕೆ ವಾರಾಹಿಯಿಂದ 
ಕುಡಿಯುವ ನೀರಿನ ಯೋಜನೆ
ಮೀನುಗಾರಿಕಾ ಬೋಟುಗಳ 
ಸಬ್ಸಿಡಿ ಡೀಸೆಲ್‌ ಪ್ರಮಾಣ ಹೆಚ್ಚಳ
ಕುಂದಾಪುರದಿಂದ ಗಂಗೊಳ್ಳಿಗೆ ಸೇತುವೆ ನಿರ್ಮಾಣ

ಚಾಮರಾಜನಗರ
ನಗರಕ್ಕೆ ಕಾವೇರಿ 2ನೇ ಹಂತ ಯೋಜನೆ ಜಾರಿ
5,000 ನಿವೇಶನಗಳ ನವನಗರ ನಿರ್ಮಾಣ
ನಗರದಲ್ಲಿ ಹೈಟೆಕ್‌ ಬಸ್‌ನಿಲ್ದಾಣ ನಿರ್ಮಾಣ
ಹನೂರು ಮತ್ತು ಕೊಳ್ಳೇಗಾಲ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ 

ಬೆಂಗಳೂರು ಗ್ರಾಮಾಂತರ
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
ಮೂರು ತಾಲೂಕುಗಳ ಬರ ನಿರ್ವಹಣೆಗೆ ಸೂಕ್ತ ಅನುದಾನ
ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ

ತುಮಕೂರು
ಹೇಮಾವತಿ ನಾಲೆ ಅಭಿವೃದ್ಧಿಗೆ ವಿಶೇಷ ಅನುದಾನ
ಪಾವಗಡಕ್ಕೆ ತುಂಗಭದ್ರ ಡ್ಯಾಂನಿಂದ 
ಕುಡಿಯುವ ನೀರು ಒದಗಿಸುವ ಯೋಜನೆ
ತೆಂಗು ವಿಶೇಷ ಆರ್ಥಿಕ ವಲಯ ಘೋಷಣೆ
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭಕ್ಕೆ ಹಣ

ರಾಮನಗರ
ರಾಮನಗರ ಮತ್ತು ಚನ್ನಪಟ್ಟಣ ನಗರಗಳ 
ನಡುವೆ ಬೃಹತ್‌ ಕೃಷಿ ಮಾರುಕಟ್ಟೆ ನಿರ್ಮಾಣ
ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್‌ ರೇಷ್ಮೆ ಗೂಡು ಮಾರುಕಟ್ಟೆ,  ಮಾವು ಸಂಸ್ಕರಣ ಘಟಕ
ಕನಕಪುರಕ್ಕೆ ಮೆಡಿಕಲ್‌ ಕಾಲೇಜು ಮಂಜೂರು
ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಮೇಕೆದಾಟು ಶಾಶ್ವತ ಯೋಜನೆ

ಮೈಸೂರು
ಮೈಸೂರು ನಗರಕ್ಕೆ ಸಮರ್ಪಕ 
ಕುಡಿಯುವ ನೀರು ಒದಗಿಸಲು ಯೋಜನೆ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಆದಿವಾಸಿಗಳ ಕುಟುಂಬಗಳಿಗಾಗಿ 
ಹೊಸ ಹಾಡಿಗಳ ನಿರ್ಮಾಣ
ದಸರಾ ಪ್ರಾಧಿಕಾರ ರಚನೆ
ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ 
ಆದಿವಾಸಿ ಕುಟುಂಬಗಳಿಗೆ ನೆರವು 

ಹಾಸನ
ಹಾಸನ ಹೊರ ವರ್ತುಲ ರಸ್ತೆ ಕಾಮಗಾರಿಗೆ ಅನುದಾನ
ಸ್ನಾನಗೃಹ, ನೆಲಹಾಸು ಉತ್ಪಾದನಾ ಘಟಕ ಸ್ಥಾಪನೆ
ಹಾಸನ ವೈದ್ಯಕೀಯ ಕಾಲೇಜಿನ ವಿವಿಧ 
ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು

ಬೆಂಗಳೂರು 
ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿದ 110 ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸಲು ಯೋಜನೆ 
ಸ್ಮಾರ್ಟ್‌ಸಿಟಿ ಯೋಜನೆಗೆ 
ಅನುದಾನ ವಿಶೇಷ ಅನುದಾನ
ಎಲೆಕ್ಟ್ರಾನಿಕ್‌ ಸಿಟಿ ಹಾಗೂ ವಿಮಾನ ನಿಲ್ದಾಣ ಸೇರಿದಂತೆ ಉಳಿದ ಭಾಗಗಳಿಗೂ ನಮ್ಮ 
ಮೆಟ್ರೋ ಸೇವೆ ವಿಸ್ತರಣೆ 
ರಾಜಕಾಲುವೆ ತಡೆಗೋಡೆ ನಿರ್ಮಾಣ 
ಹಾಗೂ ಹೂಳೆತ್ತಲು ವಿಶೇಷ ಅನುದಾನ
ಫೆರಿಫೆರಲ್‌ ಹೊರ ವರ್ತುಲ ರಸ್ತೆ ಹಾಗೂ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗಳಿಗೆ ಅನುದಾನ 
ಮಾಲಿನ್ಯ ನಿಯಂತ್ರಣ ತಡೆಯುವ ಎಲೆಕ್ಟ್ರಿಕ್‌ 
ವಾಹನ ಬಳಕೆಗೆ ಮಹತ್ವ ನೀಡುವುದು

ಚಿಕ್ಕಬಳ್ಳಾಪುರ
ಎತ್ತಿನಹೊಳೆ, ಹೆಬ್ಟಾಳ ನಾಗವಾರ ಸಂಸ್ಕರಿತ 
ತ್ಯಾಜ್ಯ ನೀರಾವರಿ ಯೋಜನೆಗಳ ಜಾರಿ
ವೈದ್ಯಕೀಯ ಕಾಲೇಜು ಆರಂಭದ ನಿರೀಕ್ಷೆ
ಮೊಬೈಲ್‌ ಬಿಡಿಭಾಗಗಳ 
ಉತ್ಪಾದನಾ ಘಟಕ ಘೋಷಣೆ
ಕೆರೆ, ಕುಂಟೆ ಮತ್ತಿತರ 
ಜಲಮೂಲಗಳ ಸಂರಕ್ಷಣೆಗೆ ಒತ್ತು 

ದಕ್ಷಿಣ ಕನ್ನಡ
ಕೃಷಿ, ಬೀಡಿ, ಮೀನುಗಾರಿಕೆಗೆ 
ಪರ್ಯಾಯ ಉದ್ಯೋಗ ಮೂಲ ಸೃಷ್ಟಿಸಲು ಕ್ರಮ
ಮಂಗಳೂರು ನಗರವನ್ನು ರಾಜ್ಯದ ಎರಡನೇ ಐಟಿ ನಗರವಾಗಿ ರೂಪಿಸುವ ಪ್ರಸ್ತಾವನೆ 
ವಸತಿ ಯೋಜನೆಗಳ ಅನುಷ್ಟಾನಕ್ಕೆ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳಲ್ಲಿ ಸರಕಾರಿ ಜಾಗವನ್ನು ಕಾದಿರಿಸುವುದು. 

ರಾಯಚೂರು
ನವಲಿ ಮತ್ತು ಕವಿತಾಳ ಬಳಿ ಸಮನಾಂತರ ಜಲಾಶಯ ಹಾಗೂ ಆಲಮಟ್ಟಿ ಜಲಾಶಯದ 
ಎತ್ತರ ಹೆಚ್ಚಳ ಯೋಜನೆ 
ಬೇಸಿಗೆ ಬವಣೆ ನೀಗಿಸಲು ಕೆರೆಗಳ ಪುನಶ್ಚೇತನ 
ರಾಯಚೂರು ಪ್ರತ್ಯೇಕ ವಿವಿ 
ಎಚ್‌ಕೆಆರ್‌ಡಿಬಿಗೆ ಅನುದಾನ  ಹೆಚ್ಚಳ 

ಯಾದಗಿರಿ
ಮೆಡಿಕಲ್‌ ಮತ್ತು ಇಂಜಿನಿಯರಿಂಗ್‌ 
ಕಾಲೇಜುಗಳ ಬೇಡಿಕೆ 
ಸುರಪುರ ಸೇರಿದಂತೆ ಗ್ರಾಮೀಣ ಭಾಗದದ ಕುಡಿಯುವ ನೀರಿನ ಸಮಸ್ಯೆ ಪರಿಹಾರ 
ಇಸ್ರೇಲ್‌ ಮಾದರಿ ಕೃಷಿ ಯೋಜನೆ ಜಾರಿ

ಶಿವಮೊಗ್ಗ
ತಾಯಿನಾಡು ಭದ್ರತಾ ವಿಶ್ವವಿದ್ಯಾಲಯ ಆರಂಭ
ಬಹುವರ್ಷಗಳ ಬೇಡಿಕೆಯಾದ 
ವಿಮಾನ ನಿಲ್ದಾಣ ಕಾಮಗಾರಿ ಆರಂಭದ ನಿರೀಕ್ಷೆ
ಶಿವಮೊಗ್ಗ- ಹರಿಹರ, ಶಿವಮೊಗ್ಗ- ಶಿಕಾರಿಪುರ 
ರೈಲ್ವೆ ಯೋಜನೆ, ರೈಲ್ವೆ ಅಂಡರ್‌ಪಾಸ್‌, 
ಮೇಲ್ಸೇತುವೆ ಕಾಮಗಾರಿಗಳಿಗೆ ಅನುದಾನ
ಭದ್ರಾವತಿಯ ಎಂಪಿಎಂ ಕಾರ್ಖಾನೆ ಪುನಾರಂಭ
ಹೊಸಹಳ್ಳಿ ಏತ ನೀರಾವರಿ ಯೋಜನೆಗೆ  ಆದ್ಯತೆ.

ದಾವಣಗೆರೆ
ಹರಪನಹಳ್ಳಿ ತಾಲೂಕಿನ 60 ಕೆರೆಗೆ 
ತುಂಗಭದ್ರಾ ನೀರು ತುಂಬಿಸುವ ಯೋಜನೆ
ಸೂಪರ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆ
ಸ್ಮಾರ್ಟ್‌ಸಿಟಿ ಯೋಜನೆ 
ಕಾಮಗಾರಿ ಚುರುಕಿಗೆ ಅನುದಾನ
ದಾವಣಗೆರೆ ಹಾಲು ಒಕ್ಕೂಟ (ದಾಮುಲ್‌), ಪೊಲೀಸ್‌ ಪಬ್ಲಿಕ್‌ ಶಾಲೆ, ಸಾಫ್ಟ್‌ವೇರ್‌ ಪಾರ್ಕ್‌

ಬೀದರ್‌
ಕೃಷಿ ಯಂತ್ರೋಪಕರಣ ಉತ್ಪಾದನಾ ಘಟಕ ಸ್ಥಾಪನೆ 
ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಸಹಕಾರಿ ಸ್ವಾಮ್ಯದ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ  ಪುನಶ್ಚೇತನ
ಚಿಟ್ಟಗುಪ್ಪಾ, ಕಮಲನಗರ ಹಾಗೂ 
ಹುಲಸೂರ್‌ ನೂತನ ತಾಲೂಕು ಕಾರ್ಯಾರಂಭ
ಪಾಪನಾಶ ಕೆರೆ ಅಭಿವೃದ್ಧಿಗೆ ವಿಶೇಷ ಅನುದಾನ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ