“ಪಡ್ಡೆಹುಲಿ’ಯಲ್ಲಿ ಬಸವಣ್ಣನ ವಚನ

Team Udayavani, Mar 5, 2019, 6:07 AM IST

ಯುವ ನಟ ಶ್ರೇಯಸ್‌ ಅಭಿನಯದ “ಪಡ್ಡೆಹುಲಿ’ ಚಿತ್ರದಲ್ಲಿ ಬಸವಣ್ಣನವರ ವಚನಗಳನ್ನು ಬಳಸಿಕೊಂಡಿದ್ದು, ಹಾಡಿನ ರೂಪದಲ್ಲಿರುವ ವಚನಗಳನ್ನು ಆಲಿಸಿರುವ ನಾಡಿನ ಶಿವಶರಣರು, ಮಠಾಧೀಶರು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌, ಅವರು ಬಸವಣ್ಣನವರ “ಕಳಬೇಡ ಕೊಲಬೇಡ’, “ಲೋಕದ ಡೊಂಕ ನೀವೇಕೆ ತಿದ್ದುವಿರಿ’ ವಚನಗಳಿಗೆ ಹೊಸ ಶೈಲಿಯ ಸಂಗೀತ ಸ್ಪರ್ಶ ಕೊಟ್ಟು, ಈಗಿನ ಯುವಕರಿಗೆ ಆಪ್ತವೆನಿಸುವಂತೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಮಹಾಶಿವರಾತ್ರಿ ದಿನದಂದು ಹಾಡಿನ ರೂಪದಲ್ಲಿ ಹೊರಬಂದಿರುವ ಬಸವಣ್ಣನವರ ವಚನಗಳಿಗೆ ಎಲ್ಲೆಡೆ ಮೆಚ್ಚುಗೆಯೂ ಸಿಕ್ಕಿದೆ. 

ಅಂದಹಾಗೆ, ಸೋಮವಾರ ಚಿತ್ರತಂಡ ಲಿರಿಕಲ್‌ ವಿಡಿಯೋ ಬಿಡುಗಡೆ ಮಾಡಿದೆ. ಈಗಿನ ಯುವಕರಲ್ಲಿ ಬಸವಣ್ಣನವರ ವಚನಗಳ ಬಗ್ಗೆ ಇನ್ನಷ್ಟು ಆಸಕ್ತಿ ಮೂಡಿಸುವಂತಹ ಕೆಲಸ ಈ ಹಾಡಿನಿಂದ  ಆಗಲಿದೆ ಎಂಬ ನಂಬಿಕೆ ಚಿತ್ರತಂಡದ್ದು.

ಇನ್ನು, ವಚನಗಳಿಗೆ ಹಾಡಿನ ಧ್ವನಿಯಾಗಿರುವುದು ನಾರಾಯಣ ಶರ್ಮಾ. ಅವರ ಕಂಠದಲ್ಲಿ ಎರಡು ವಚನಗಳು ಚೆನ್ನಾಗಿ ಮೂಡಿಬಂದಿವೆ. ಈಗಿನ ಪೀಳಿಗೆ ಕೂಡ ಗುನುಗುವಂತಹ ಹಾಡು ಕೊಟ್ಟಿರುವ ಚಿತ್ರತಂಡಕ್ಕೆ ನಾಡಿನ ಮಠಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಗೀತ ನಿರ್ದೇಕ ಅಜನೀಶ್‌ ಲೋಕನಾಥ್‌ ಅವರು ಎರಡು ವಚನಗಳಿಗೆ ಎಲ್ಲೂ ಧಕ್ಕೆಯಾಗದಂತೆ ರೀಮಿಕ್ಸ್‌ ಮಾಡಿ ಹೊಸತನ ಕಟ್ಟಿಕೊಟ್ಟಿದ್ದಾರೆ.

ಬಸವಣ್ಣನವರ ವಚನಕ್ಕೆ ವಿಶಿಷ್ಟ ರಾಗ, ಧ್ವನಿ ಮತ್ತು ಆಲಾಪ ಒದಗಿಸುವ ಮೂಲಕ ಕೇಳುಗರಲ್ಲೊಂದು ಹೊಸತನ ಹುಟ್ಟುಹಾಕಿರುವ ಚಿತ್ರತಂಡ, ಚಿತ್ರವನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಅಂದಹಾಗೆ, ಚಿತ್ರವನ್ನು ಗುರುದೇಶಪಾಂಡೆ ನಿರ್ದೇಶನ ಮಾಡಿದ್ದಾರೆ. ರಮೇಶ್‌ ರೆಡ್ಡಿ  ನಂಗ್ಲಿ  ಈ ಚಿತ್ರದ ನಿರ್ಮಾಪಕರು.

https://beta.udayavani.com/cinema/balcony-sandalwood-news/ready-for-release-of-prk-kavaludaari

ಈ ವಿಭಾಗದಿಂದ ಇನ್ನಷ್ಟು

  • ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಬಿಝಿಯಾಗುತ್ತಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ರಶ್ಮಿಕಾ ನಟಿಸಿರುವ "ಗೀತಾ ಗೋವಿಂದಂ' ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌...

  • ಕನ್ನಡದಲ್ಲಿ ಈಗಾಗಲೇ ಹಲವು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ "ಮೋಕ್ಷ' ಎಂಬ ಸಿನಿಮಾ ಕೂಡ ಬರುತ್ತಿದೆ. ಸದ್ದಿಲ್ಲದೆಯೇ...

  • ನಟ ಪುನೀತ್‌ರಾಜಕುಮಾರ್‌ ಭಾನುವಾರ ತಮ್ಮ ಕುಟುಂಬ ವರ್ಗ ಹಾಗೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಕೋರಲು...

  • ಸಾಮಾನ್ಯವಾಗಿ ನಗರಗಳಲ್ಲಿ ವಾಸಿಸುವ ಜನರಿಗೆ "ವೀಕೆಂಡ್‌' ಅನ್ನೋದು ತುಂಬಾ ರಿಲ್ಯಾಕ್ಸ್‌ ಎನಿಸುವ ಪದ. ಅದರಲ್ಲೂ "ವೀಕೆಂಡ್‌' ಬಂದರಂತೂ ಅವರ ಖುಷಿಗೆ ಪಾರವೇ ಇರೋದಿಲ್ಲ....

  • ಈಗಂತೂ ಕನ್ನಡದಲ್ಲಿ ಸಾಕಷ್ಟು ವಿಭಿನ್ನ ಎನಿಸುವ ಶೀರ್ಷಿಕೆ ಇರುವ ಚಿತ್ರಗಳು ಬರುತ್ತಿವೆ. ಸೆಟ್ಟೇರುತ್ತಲೂ ಇವೆ. ಆ ಸಾಲಿಗೆ "ಎ ಫಿಲ್ಮ್ ಬೈ ಪ್ರವೀಣ್‌' ಕೂಡ ಒಂದು....

ಹೊಸ ಸೇರ್ಪಡೆ