ರಕ್ಷಿತಾ ಸಹೋದರ ಲಾಂಚ್‌ಗೆ ವೇದಿಕೆ ಸಿದ್ಧ

Team Udayavani, Mar 5, 2019, 6:08 AM IST

ನಿರ್ದೇಶಕ ಪ್ರೇಮ್‌ ತಮ್ಮ  ಹೊಸ ಸಿನಿಮಾದ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಈ ಬಾರಿ ಅವರು ಹೊಸ ಹುಡುಗನನ್ನು ಲಾಂಚ್‌ ಮಾಡುತ್ತಿದ್ದಾರೆ. ಅದು ಬೇರಾರು ಅಲ್ಲ, ರಕ್ಷಿತಾ ಅವರ ಸಹೋದರ ಅಭಿಷೇಕ್‌. ಅಭಿಷೇಕ್‌ ಅವರ ಲಾಂಚ್‌ಗೆ ಭರ್ಜರಿ ವೇದಿಕೆ ಸಿದ್ಧವಾಗಿದೆ. ಪ್ರೇಮ್‌ ಕೂಡಾ ತುಂಬಾನೇ ತಲೆಕೆಡಿಸಿಕೊಂಡು ತಮ್ಮ ಕುಟುಂಬದ ಹುಡುಗನನ್ನು ಲಾಂಚ್‌ ಮಾಡುವ ತಯಾರಿಯಲ್ಲಿದ್ದಾರೆ. ಈ  ಚಿತ್ರ ಮಾರ್ಚ್‌ 31 ರಂದು ಸೆಟ್ಟೇರುತ್ತಿದೆ.

ಅಂದೇ ಚಿತ್ರದ ಟೈಟಲ್‌ ಹಾಗೂ ಫ‌ಸ್ಟ್‌ಲುಕ್‌ ಬಿಡುಗಡೆಯಾಗಲಿದೆ. ಎಲ್ಲಾ ಓಕೆ, ಮಾರ್ಚ್‌ 31 ರಂದೇ ಯಾಕೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ರಕ್ಷಿತಾ ಅವರ ಹುಟ್ಟುಹಬ್ಬ. ತಮ್ಮ ಹುಟ್ಟುಹಬ್ಬದಂದೇ ಸಹೋದರನ ಸಿನಿಮಾ ಲಾಂಚ್‌ ಆಗಬೇಕೆಂಬುದು ರಕ್ಷಿತಾ ಆಸೆ. ಆ ಆಸೆಗೆ ತಕ್ಕಂತೆ ಪ್ರೇಮ್‌ ಅದೇ ದಿನ ಲಾಂಚ್‌ ಮಾಡಲು ಸಿದ್ಧತೆ ನಡೆಸಿದ್ದಾರೆ. ಅಭಿಷೇಕ್‌ ಕೂಡಾ ಸಿನಿಮಾಕ್ಕೆ ಬೇಕಾದ ಸಾಕಷ್ಟು ತಯಾರಿ ನಡೆಸಿದ್ದಾರೆ.

ನಟನೆ, ಫೈಟ್‌, ಡ್ಯಾನ್ಸ್‌ … ಹೀಗೆ ಎಲ್ಲದರಲ್ಲೂ ಪಕ್ಕಾ ಆಗಿದ್ದಾರೆ. ಇದಕ್ಕಿಂತ ಹೆಚ್ಚಾಗಿ “ದಿ ವಿಲನ್‌’ ಸಿನಿಮಾ ಸೆಟ್‌ನಲ್ಲಿ ಅಭಿಷೇಕ್‌ ನಟನೆ ಕಲಿತಿದ್ದಾರಂತೆ. ಅದು ಹೇಗೆ ಎಂದು ನೀವು ಕೇಳಬಹುದು. “ದಿ ವಿಲನ್‌’ ಚಿತ್ರದಲ್ಲಿನ ಸುದೀಪ್‌ ಪಾತ್ರದ ನಟನೆಯನ್ನು ಸುದೀಪ್‌ ಮಾಡುವ ಮೊದಲು ಅಭಿಷೇಕ್‌ ಮಾಡುತ್ತಿದ್ದರಂತೆ. ಸ್ವತಃ ಸುದೀಪ್‌ ಕೂಡಾ ಅಭಿಷೇಕ್‌ ಬೆನ್ನುತಟ್ಟಿ, “ಮೊದಲು ನೀನು ಮಾಡಿ ತೋರಿಸು’ ಎನ್ನುತ್ತಿದ್ದರಂತೆ. ಹಾಗಾಗಿ, ಪ್ರೇಮ್‌ ಸೆಟ್‌ನಲ್ಲೇ ಅಭಿಷೇಕ್‌ ನಟನೆಯನ್ನು ಕಲಿತಿದ್ದಾರೆನ್ನಬಹುದು. 

ಎಲ್ಲಾ ಓಕೆ, ಚಿತ್ರದಲ್ಲಿ ನಾಯಕಿ ಯಾರು ಎಂದು ನೀವು ಕೇಳಬಹುದು. ಏಕೆಂದರೆ ಈಗಾಗಲೇ ಸುಧಾರಾಣಿ ಪುತ್ರಿ ಈ ಚಿತ್ರಕ್ಕೆ ನಾಯಕಿಯಾಗುತ್ತಾರೆಂದು ಸುದ್ದಿಯಾಗಿತ್ತು. ಆದರೆ, ಪ್ರೇಮ್‌, ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ ಎನ್ನುತ್ತಾರೆ. “ಇಲ್ಲಿವರೆಗೆ ನಾನು ನಾಯಕಿ ವಿಚಾರದಲ್ಲಿ ಯಾರೊಂದಿಗೂ ಮಾತುಕತೆ ನಡೆಸಿಲ್ಲ. ಈ ಬಾರಿ ಪಕ್ಕಾ ಕನ್ನಡದ ಹುಡುಗಿಯನ್ನೇ ನಾಯಕಿಯನ್ನಾಗಿಸುತ್ತೇನೆ.

ಹೊಸ ಮುಖಗಳಿಗೆ ಮೊದಲ ಆದ್ಯತೆ’ ಎನ್ನುವುದು ಪ್ರೇಮ್‌ ಮಾತು. ಈ ಸಿನಿಮಾವನ್ನು ಪ್ರೇಮ್‌ ಹಾಗೂ ರಕ್ಷಿತಾ ತಮ್ಮ ಹೋಂಬ್ಯಾನರ್‌ನಲ್ಲೇ ನಿರ್ಮಿಸುತ್ತಿದ್ದಾರೆ. ಎಲ್ಲಾ ಓಕೆ, ಯಾಕೆ ಪ್ರೇಮ್‌ ತಮ್ಮ ಹೋಂಬ್ಯಾನರ್‌ನಲ್ಲೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆಂದು ನೀವು ಕೇಳಬಹುದು. ಅದಕ್ಕೂ ಪ್ರೇಮ್‌ ಉತ್ತರಿಸುತ್ತಾರೆ. “ವಿಲನ್‌ ನಂತರ ಒಂದಷ್ಟು ಮಂದಿ ನಿರ್ಮಾಪಕರು, ಮುಂಬೈನ ಕೆಲವು ಕಂಪೆನಿಗಳು ಸಿನಿಮಾ ಮಾಡುವಂತೆ ಕೇಳಿಕೊಂಡವು.

ಆದರೆ, ನಾನೇ ಬೇಡ ಎಂದೆ. ನಮ್ಮದೇ ಬ್ಯಾನರ್‌ನಲ್ಲಿ ಮಾಡುವ ಎಂದು. ಒಳ್ಳೆಯದು, ಕೆಟ್ಟದು ಏನೇ ಇದ್ದರೂ ನಮಗೆ ಇರಲಿ. ಆರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಕಾಸು ಬಂದ ನಂತರ ಯಾರಿಗೂ ಆಸಕ್ತಿ ಇರುವುದಿಲ್ಲ. ಹಾಗಾಗಿ, ಈ ಸಿನಿಮಾವನ್ನು ನಮ್ಮದೇ ಬ್ಯಾನರ್‌ನಲ್ಲಿ ಮಾಡುವ ಎಂದು ನಿರ್ಧರಿಸಿದ್ದೇನೆ. ಮುಂದೆಯೂ ಅಷ್ಟೇ, ನಮ್ಮ ಬ್ಯಾನರ್‌ನಲ್ಲೇ ಒಂದಷ್ಟು ಸಿನಿಮಾ ಮಾಡುವ ಆಲೋಚನೆ ಇದೆ’ ಎನ್ನುತ್ತಾರೆ ಪ್ರೇಮ್‌. 

https://beta.udayavani.com/cinema/balcony-sandalwood-news/release-to-gosi-gang

ಈ ವಿಭಾಗದಿಂದ ಇನ್ನಷ್ಟು

  • ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಬಿಝಿಯಾಗುತ್ತಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ರಶ್ಮಿಕಾ ನಟಿಸಿರುವ "ಗೀತಾ ಗೋವಿಂದಂ' ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌...

  • ಕನ್ನಡದಲ್ಲಿ ಈಗಾಗಲೇ ಹಲವು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ "ಮೋಕ್ಷ' ಎಂಬ ಸಿನಿಮಾ ಕೂಡ ಬರುತ್ತಿದೆ. ಸದ್ದಿಲ್ಲದೆಯೇ...

  • ನಟ ಪುನೀತ್‌ರಾಜಕುಮಾರ್‌ ಭಾನುವಾರ ತಮ್ಮ ಕುಟುಂಬ ವರ್ಗ ಹಾಗೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಕೋರಲು...

  • ಸಾಮಾನ್ಯವಾಗಿ ನಗರಗಳಲ್ಲಿ ವಾಸಿಸುವ ಜನರಿಗೆ "ವೀಕೆಂಡ್‌' ಅನ್ನೋದು ತುಂಬಾ ರಿಲ್ಯಾಕ್ಸ್‌ ಎನಿಸುವ ಪದ. ಅದರಲ್ಲೂ "ವೀಕೆಂಡ್‌' ಬಂದರಂತೂ ಅವರ ಖುಷಿಗೆ ಪಾರವೇ ಇರೋದಿಲ್ಲ....

  • ಈಗಂತೂ ಕನ್ನಡದಲ್ಲಿ ಸಾಕಷ್ಟು ವಿಭಿನ್ನ ಎನಿಸುವ ಶೀರ್ಷಿಕೆ ಇರುವ ಚಿತ್ರಗಳು ಬರುತ್ತಿವೆ. ಸೆಟ್ಟೇರುತ್ತಲೂ ಇವೆ. ಆ ಸಾಲಿಗೆ "ಎ ಫಿಲ್ಮ್ ಬೈ ಪ್ರವೀಣ್‌' ಕೂಡ ಒಂದು....

ಹೊಸ ಸೇರ್ಪಡೆ