ಯೋಧರಿಗೆ ಹಾಡಿನ ನಮನ

Team Udayavani, Mar 6, 2019, 5:42 AM IST

ಗೀತರಚನೆಕಾರ ವಿ.ನಾಗೇಂದ್ರ ಪ್ರಸಾದ್‌ ಅವರು ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೊಂದು ಗೀತೆ ಬರೆಯುವ ಮೂಲಕ ಅವರಿಗೆ ಗೌರವದ ನಮನ ಸಲ್ಲಿಸಿದ್ದಾರೆ. ಹೌದು, “ಯೋಧ ಶಿವ’ ಶೀರ್ಷಿಕೆಯಡಿ ಬರೆದಿರುವ ಹಾಡನ್ನು ಯೋಧರಿಗಾಗಿಯೇ ಬರೆದಿದ್ದು, ಮಹಾಶಿವರಾತ್ರಿ ಮುನ್ನ ದಿನ ಯೋಧರಿಗೆ ಆ ಹಾಡನ್ನು ಅರ್ಪಿಸಿದ್ದಾರೆ. ಸಾಹಿತ್ಯದ ಜೊತೆಗೆ ಸಂಗೀತವನ್ನೂ ನೀಡಿರುವ ನಾಗೇಂದ್ರಪ್ರಸಾದ್‌ ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. 

“ಉಗ್ರನನ್ನು ಗರ್ಭದಲ್ಲೇ ಸುಟ್ಟು ಹಾಕಬೆಕು, ಉಗ್ರನನ್ನು ಫ್ರೆಂಡು ಅಂದ್ರೆ ಮಟ್ಟ ಹಾಕಬೇಕು, ಯೋಧನೆ ಉಗ್ರರೂಪ ತಾಳಬೇಕು ನೀನೇ…’ ಎಂದು ಕೇಳಿಬರುವ ಹಾಡಲ್ಲಿ ಕಿಚ್ಚು ಇದೆ, ಶಿವನ ರೂಪ ತಾಳಿ ಉಗ್ರರನ್ನು ಮಟ್ಟಹಾಕಬೇಕು ಎಂಬ ಕಿಚ್ಚುಹಚ್ಚಿಸುವ ಪದಪುಂಜಗಳಿವೆ. ಶಿವನ ತ್ರಿಶೂಲದಂತೆಯೇ ಯೋಧರ ಗನ್ನು ಎಂಬಂತೆ ಬಿಂಬಿಸಿರುವ ಹಾಡು ಕೇಳಿದವರಿಗೆ ದೇಶಪ್ರೇಮ ಇನ್ನಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ.

ಸಾವಿರಾರು ಹಾಡುಗಳನ್ನು ಬರೆದಿರುವ ನಾಗೇಂದ್ರಪ್ರಸಾದ್‌ ಅವರು, ಪ್ರೀತಿಯಿಂದಲೇ ಯೋಧರಿಗಾಗಿ ಬರೆದ “ಯೋಧ ಶಿವ’ ಹಾಡಿಗೆ ಮೆಚ್ಚುಗೆ ಸಿಕ್ಕಿದೆ. ಅಷ್ಟೇ ಅಲ್ಲ, ಪುಲ್ವಾಮಾದಲ್ಲಿ ದೇಶ ಸೇವೆ ಸಲ್ಲಿಸುತ್ತಿರುವ ಕರ್ನಾಟಕದ ಮೂಲದ ಯೋಧ ಸಿದ್ಧಲಿಂಗಪ್ಪ, “ಯೋಧ ಶಿವ’ ಹಾಡು ಕೇಳಿ, ಮೆಚ್ಚುಗೆ ಪಟ್ಟು, ವಾಟ್ಸಾಪ್‌ ಮೂಲಕ ಪ್ರೀತಿಯ ಮಾತುಗಳನ್ನಾಡಿ ಕಳುಹಿಸಿದ್ದಾರೆ.

https://beta.udayavani.com/cinema/balcony-sandalwood-news/childrens-dream-of-civil-service-academy

ಈ ವಿಭಾಗದಿಂದ ಇನ್ನಷ್ಟು

  • ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಬಿಝಿಯಾಗುತ್ತಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ರಶ್ಮಿಕಾ ನಟಿಸಿರುವ "ಗೀತಾ ಗೋವಿಂದಂ' ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌...

  • ಕನ್ನಡದಲ್ಲಿ ಈಗಾಗಲೇ ಹಲವು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ "ಮೋಕ್ಷ' ಎಂಬ ಸಿನಿಮಾ ಕೂಡ ಬರುತ್ತಿದೆ. ಸದ್ದಿಲ್ಲದೆಯೇ...

  • ನಟ ಪುನೀತ್‌ರಾಜಕುಮಾರ್‌ ಭಾನುವಾರ ತಮ್ಮ ಕುಟುಂಬ ವರ್ಗ ಹಾಗೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಕೋರಲು...

  • ಸಾಮಾನ್ಯವಾಗಿ ನಗರಗಳಲ್ಲಿ ವಾಸಿಸುವ ಜನರಿಗೆ "ವೀಕೆಂಡ್‌' ಅನ್ನೋದು ತುಂಬಾ ರಿಲ್ಯಾಕ್ಸ್‌ ಎನಿಸುವ ಪದ. ಅದರಲ್ಲೂ "ವೀಕೆಂಡ್‌' ಬಂದರಂತೂ ಅವರ ಖುಷಿಗೆ ಪಾರವೇ ಇರೋದಿಲ್ಲ....

  • ಈಗಂತೂ ಕನ್ನಡದಲ್ಲಿ ಸಾಕಷ್ಟು ವಿಭಿನ್ನ ಎನಿಸುವ ಶೀರ್ಷಿಕೆ ಇರುವ ಚಿತ್ರಗಳು ಬರುತ್ತಿವೆ. ಸೆಟ್ಟೇರುತ್ತಲೂ ಇವೆ. ಆ ಸಾಲಿಗೆ "ಎ ಫಿಲ್ಮ್ ಬೈ ಪ್ರವೀಣ್‌' ಕೂಡ ಒಂದು....

ಹೊಸ ಸೇರ್ಪಡೆ