‘ಒಂದು ಮಾತಲಿ ನೂರು ಹೇಳಲೇ’: ಪ್ರೇಮಿಗಳ ದಿನಕ್ಕೆ ‘ಪಡ್ಡೆಹುಲಿ’ ಗಿಫ್ಟ್

Team Udayavani, Feb 12, 2019, 3:14 PM IST

ಗಂಡುಗಲಿ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಪ್ರಪ್ರಥಮ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ಪಡ್ಡೆ ಹುಲಿ’ ಚಿತ್ರತಂಡ ಮುಂಬರುವ ವ್ಯಾಲೈಂಟೈನ್ಸ್ ಡೇಗಾಗಿ ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡಿದೆ. ಇದು ಪ್ರೇಮಿಗಳ ದಿನಕ್ಕೆ ಪ್ರೇಮಿಗಳಿಗೆ ಸ್ಪೆಷಲ್ ಗಿಫ್ಟ್ ಆಗುವುದರಲ್ಲಿ ಸಂಶಯವಿಲ್ಲ.

ನಾಯಕ ಶ್ರೇಯಸ್ ಹಾಗೂ ನಾಯಕಿ ನಿಶ್ವಿಕಾ ನಾಯ್ಡು ‘ಒಂದು ಮಾತಲಿ ನೂರು ಹೆಳಲೇ..’ ಎಂಬ ರೊಮ್ಯಾಂಟಿಕ್ ಹಾಡನ್ನು ರಿಚ್ ಆಗಿ ಚಿತ್ರೀಕರಿಸಲಾಗಿದ್ದು, ಕಾಲೇಜು ಹುಡುಗಿಯ ಹಿಂದೆ ಸುತ್ತುವ ಯುವ ಪ್ರೇಮಿಯಾಗಿ ಶ್ರೇಯಸ್ ಮುದ್ದಾಗಿ ಕಾಣಿಸುತ್ತಾರೆ.


ನಾಗಾರ್ಜುನ ಶರ್ಮಾ ಅವರ ಸಾಹಿತ್ಯ ಈ ಹಾಡಿಗಿದೆ. ಸರಿಗಮಪ ಖ್ಯಾತಿಯ ಸಂಜೀತ್ ಹೆಗ್ಡೆ ಈ ಹಾಡನ್ನು ರೊಮ್ಯಾಂಟಿಕ್ ಫೀಲ್ ನಲ್ಲಿ ಹಾಡಿದ್ದು ಸಂಜಿತ್ ಸ್ವರ ಕೇಳುಗರನ್ನು ಮೋಡಿ ಮಾಡುತ್ತದೆ. ಈ ಚಿತ್ರದ ಹಾಡಿನ ಪ್ರಾರಂಭದಲ್ಲಿ ಸ್ಯಾಂಡಲ್ ವುಡ್ ನಟಿಯರು ಶುಭಕೋರಿದ್ದು, ಪ್ರೇಮಿಗಳ ಕೆಲವೊಂದು ಅಮೂಲ್ಯ ಟಿಪ್ಸ್ ಗಳನ್ನೂ ನೀಡಿದ್ದಾರೆ.

ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಗುರು ದೇಶಪಾಂಡೆ ಅವರು ನಿರ್ದೇಶಿಸುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ