ಹಿರಿಯರು, ದಿವ್ಯಾಂಗರಿಗೆ ನೆಲಮಹಡಿಯಲ್ಲೇ ಮತಗಟ್ಟೆ

Team Udayavani, Apr 10, 2018, 6:40 AM IST

ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ 41,314 ಸ್ಥಳಗಳಲ್ಲಿ ಮತದಾನ ನಡೆಯಲಿದ್ದು, ಅದಕ್ಕಾಗಿ 1,850 ಹೆಚ್ಚುವರಿ ಮತಗಟ್ಟೆಗಳು ಸೇರಿ ಒಟ್ಟು 58,546 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ವಿಶೇಷವೆಂದರೆ ಈ ಎಲ್ಲ ಮತಗಟ್ಟೆಗಳು ನೆಲ ಮಹಡಿಯಲ್ಲೇ ಇರಲಿವೆ.

ಆದ್ದರಿಂದ ಹಿರಿಯ ನಾಗರಿಕರು, ದಿವ್ಯಾಂಗರು, ಮಹಿಳೆಯರು ಆತಂಕಪಡುವ ಅವಶ್ಯಕತೆಯಿಲ್ಲ.ಈಗಾಗಲೇ ಎಲ್ಲ ಮತಗಟ್ಟೆಗಳಲ್ಲಿ ಮೂಲಸೌಕರ್ಯ ಗಳನ್ನು ಒದಗಿಸಲು ಚುನಾವಣಾ ಆಯೋಗ ಕ್ರಮಗಳನ್ನು ಕೈಗೊಂಡಿದೆ. ರ್‍ಯಾಂಪ್‌, ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಒದಗಿಸುವ ಕೆಲಸ ಶೇ.100ರಷ್ಟು ಆಗಿದೆ.

ಶೌಚಾಲಯಗಳು ಶೇ.99.86 ಮತ್ತು ವೇಟಿಂಗ್‌ ರೂಂ ಅಥವಾ ಶೆಡ್‌ಗಳು ಶೇ.85ರಷ್ಟು ಮತಗಟ್ಟೆಗಳಲ್ಲಿವೆ. ಉಳಿದ ಮೂಲಸೌಕರ್ಯಗಳನ್ನು ಕಾಲಮಿತಿಯೊಳಗೆ ಒದಗಿಸುವಂತೆ ಆಯೋಗ ಸರ್ಕಾರಕ್ಕೆ ನಿರ್ದೇಶಿಸಿದೆ.

ಎಲ್ಲ ಮತದಾನ ಕೇಂದ್ರಗಳಲ್ಲಿ “ಓಟರ್‌ ಅಸಿಸ್‌ಟೆನ್ಸ್‌ ಬೂತ್‌’ ಸಹ ಸ್ಥಾಪಿಸಲಾಗುತ್ತದೆ. ಇದನ್ನು ಆಯಾ ಮತಗಟ್ಟೆ ಅಧಿಕಾರಿಗಳೇ ನೋಡಿಕೊಳ್ಳುತ್ತಾರೆ. ಈ ಬೂತ್‌ಗಳಲ್ಲಿ ಅಕರಾದಿಯಲ್ಲಿ (ಅಲ್ಫಾಬೆಟಿಕಲ್‌ ಆರ್ಡರ್‌)ಮತದಾರರ ಪಟ್ಟಿ ಲಭ್ಯವಿರುತ್ತದೆ. ಆ ಮತಗಟ್ಟೆಯ ಮತದಾರರು ತಮ್ಮ ಹೆಸರು ಹುಡುಕಲು ಇದರಿಂದ ಅನುಕೂಲವಾಗಲಿದೆ.

ಮಿಂಚಿನ ನೋಂದಣಿಗೆ ಉತ್ತಮ ಪ್ರತಿಕ್ರಿಯೆ: ಭಾನುವಾರದಿಂದ ಚುನಾವಣಾ ಆಯೋಗ ಆರಂಭಿಸಿರುವ “ಮಿಂಚಿನ ನೋಂದಣಿ’ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಒಟ್ಟು 6.45 ಲಕ್ಷ ಅರ್ಜಿಗಳು ಸ್ವೀಕಾರಗೊಂಡಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ