ಕರಾವಳಿ: ಗರಿಷ್ಠ ಉಷ್ಣಾಂಶ ಹೆಚ್ಚಳ

Team Udayavani, Feb 8, 2019, 5:29 AM IST

ಮಹಾನಗರ: ಕರಾವಳಿ ಪ್ರದೇಶದಲ್ಲಿ ಸಾಮಾನ್ಯವಾಗಿ ಮಾರ್ಚ್‌ ಮೊದಲ ವಾರದಿಂದ ಸೆಕೆ ಪ್ರಾರಂಭವಾಗುತ್ತದೆ. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಫೆಬ್ರವರಿ ಮೊದಲ ವಾರವೇ ಸೆಕೆಯ ಅನುಭವವಾಗುತ್ತಿದೆ.

ಜಿಲ್ಲೆಯ ಸರಾಸರಿ ಉಷ್ಣಾಂಶದಲ್ಲಿ ಪ್ರತೀ ದಿನ ಏರಿಳಿತ ಕಂಡುಬರುತ್ತಿದ್ದು, ಗರಿಷ್ಠ ತಾಪಮಾನ ಸುಮಾರು 37 ಡಿಗ್ರಿ ಸೆಲ್ಸಿಯಸ್‌ ತಲುಪುತ್ತಿದೆ. ಹವಾಮಾನ ಇಲಾಖೆಯ ತಜ್ಞರ ಪ್ರಕಾರ ಇನ್ನೂ, ಕೆಲವು ದಿನಗಳ ಕಾಲ ಇದೇ ರೀತಿ ವಾತಾವರಣ ಮುಂದುವರಿಯಲಿದೆ.

ಉರಿಯುತ್ತಿರುವ ಬಿಸಿಲಿನಿಂದ ಹೈರಾ ಣಾದ ಮಂದಿ ತಂಪು ಪಾನೀಯದ ಮೊರೆ ಹೋಗುತ್ತಿದ್ದಾರೆ. ಇದರಿಂದ ಪಾನೀಯ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಎಳನೀರು ಮಾರಾಟ, ಜ್ಯೂಸ್‌ ಸೆಂಟರ್‌, ಕಲ್ಲಂಗಡಿ ಮಾರಾಟ ಹೆಚ್ಚಳವಾಗಿದೆ. ಕೆಲವು ಕಡೆಗಳಲ್ಲಿ ಕಲ್ಲಂಗಡಿ, ಅನಾನಾಸು, ಮುಳ್ಳು ಸೌತೆ ಸಹಿತ ಮೊದಲಾದವುಗಳನ್ನು ಹೋಳು ಗಳಾಗಿ ಮಾಡಿ ಪ್ಲಾಸ್ಟಿಕ್‌ ಗ್ಲಾಸ್‌ಗಳಲ್ಲಿ ಇಟ್ಟು ಮಾರಾಟ ಮಾಡಲಾಗುತ್ತಿದೆ.

ಬೆಲೆ ಏರಿಕೆ
ನಗರದ ಕೆಲವು ಅಂಗಡಿಗಳಲ್ಲಿ ಎಳ ನೀರಿನ ಬೆಲೆ ಕೂಡ ಏರಿಕೆಯಾಗಿದೆ. ಈ ಹಿಂದೆ ಊರಿನ ಎಳನೀರಿಗೆ 30 ರೂ. ಇತ್ತು ಇದೀಗ 32 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹೈಬ್ರೀಡ್‌ ಎಳನೀರು ಬೆಲೆ 35 ರೂ.ಗೆ ಏರಿಕೆಯಾಗಿದೆ.

ಅವಧಿಗೂ ಮುನ್ನ ಸೆಕೆ
ಸಾಮಾನ್ಯವಾಗಿ ಮಾರ್ಚ್‌ ತಿಂಗಳಿನಿಂದ ಕರಾವಳಿ ಪ್ರದೇಶದಲ್ಲಿ ಸೆಕೆ ಪ್ರಾರಂಭವಾಗುತ್ತದೆ. ಆದರೆ, ವಾತಾ ವರಣದಲ್ಲಿ ಮೇಲ್ಮೆ ೖಸುಳಿಗಾಳಿ ಇರುವ ಕಾರಣದಿಂದಾಗಿ ಸೆಕೆ ಅವಧಿಗೂ ಮುನ್ನ ಆರಂಭವಾಗಿದೆ. ಜತೆಗೆ ಗರಿಷ್ಠ ಉಷ್ಣಾಂಶ ಪ್ರಮಾಣದಲ್ಲೂ ಏರಿಕೆಯಾ ಗುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಸೆಕೆ ಮತ್ತು ಮೋಡಕವಿದ ವಾತಾವರಣ ಇದೇ ರೀತಿ ಮುಂದುವರಿಯಲಿದೆ. 
– ಗವಾಸ್ಕರ್‌ ಸಾಂಗ,
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ
ಕೇಂದ್ರ ವಿಜ್ಞಾನಿ

ತಂಪು ಪಾನೀಯಕ್ಕೆ ಬೇಡಿಕೆ
ಸೆಕೆ ಪ್ರಾರಂಭವಾಗುತ್ತಿದ್ದಂತೆ ತಂಪುಪಾನಿಯಗಳಿಗೆ ಬೇಡಿಕೆ ಪ್ರಾರಂಭವಾಗಿದೆ. ಕೆಲವೊಂದು ಕಡೆಗಳಲ್ಲಿ ತಂಪು ಪಾನಿಯಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ.
– ವಿಶ್ವನಾಥ,ಎಳನೀರು ವ್ಯಾಪಾರಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ