ಪ್ರೊ ಕಬಡ್ಡಿಯಿಂದ ಆಟಗಾರರಿಗೆ ಅನುಕೂಲ

Team Udayavani, Feb 8, 2019, 5:45 AM IST

ಸುಬ್ರಹ್ಮಣ್ಯ: ಸಾಮಾನ್ಯ ಕ್ರೀಡಾ ಪಟುವಿಗೆ ಇಂದು ಉತ್ತಮ ವೇದಿಕೆ ಸಿಗುತ್ತಿದೆ. ಪ್ರೊ ಕಬಡ್ಡಿ ಬಂದ ಬಳಿಕ ವಂತೂ ಕಬಡ್ಡಿಗೆ ಮತ್ತಷ್ಟು ಮನ್ನಣೆ ದೊರೆ ತಿದೆ. ಕಬಡ್ಡಿ ಜನಪ್ರಿಯವಾಗುವ ಜತೆಗೆ ಆಟಗಾರರ ಆರ್ಥಿಕ ಸ್ಥಿತಿಯೂ ಸುಧಾರಿ ಸುತ್ತಿದೆ ಎಂದು ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್‌ ಕುಮಾರ್‌ ರೈ ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕಾಲೇಜು ಮೈದಾನದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್‌ ಕಾಲೇಜು ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು. ಕಠಿನ ಶ್ರಮ, ಶಿಸ್ತು, ಗುರಿಯೊಂದಿಗೆ ಮುನ್ನಡೆದಾಗ ಆಟಗಾರ ಯಶಸ್ವಿಯಾಗಲು ಸಾಧ್ಯ. ಪ್ರೊ ಕಬಡ್ಡಿ ಆಟಗಾರರಿಗೆ ಜೀವನವನ್ನು ನೀಡಿದೆ ಎಂದು ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆಲ್ಲ ಗ್ರಾಮೀಣ ಕ್ರೀಡಾಪಟುಗಳಿಗೆ ಅವಕಾಶ ದೊರಕುತಿರಲಿಲ್ಲ. ಇಂದು ವಿಪುಲ ಅವಕಾಶಗಳು ಸಿಗುತ್ತಿವೆ ಎಂದು ಹೇಳಿದರು. ವೇದಿಕೆಯಲ್ಲಿ ನಿವೃತ್ತ ದೈ.ಶಿ. ಶಿಕ್ಷಕ ತುಕಾರಾಮ್‌ ಯೇನೆಕಲ್ಲು, ತಾ.ಪಂ. ಸದಸ್ಯ ಅಶೋಕ್‌ ನೆಕ್ರಾಜೆ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಮಾಧವ ಡಿ., ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯೆ ವಿಮಲಾ ರಂಗಯ್ಯ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮೋಹನದಾಸ್‌ ರೈ, ದೈ.ಶಿ. ನಿರ್ದೇಶಕ ದಿನೇಶ್‌ ಕೆ. ವೇದಿಕೆಯಲ್ಲಿದ್ದರು.

ಕಾಲೇಜು ಪ್ರಾಂಶುಪಾಲ ಪ್ರೊ| ರಂಗಯ್ಯ ಶೆಟ್ಟಿಗಾರ್‌ ಪ್ರಸ್ತಾವಿಸಿ, ಸ್ವಾಗತಿಸಿದರು. ಉಪಪ್ರಾಂಶುಪಾಲ ಪ್ರೊ| ಮಂಜುನಾಥ್‌ ಭಟ್ ವಂದಿಸಿದರು. ಉಪನ್ಯಾಸಕ ವಿನ್ಯಾಸ್‌ ಹೊಸೋಳಿಕೆ ವಂದಿಸಿದರು.

ಸಮ್ಮಾನ
ಬಲೂನ್‌ ಹಾರಿಬಿಡುವ ಮೂಲಕ ಕಬಡ್ಡಿ ಆಟಗಾರ ಪ್ರಶಾಂತ್‌ ರೈ ಅವರು ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿದರು. ಖ್ಯಾತ ಕಬಡ್ಡಿ ಆಟಗಾರ, ಬೆಂಗಾಲ್‌ ವಾರಿಯರ್ ತಂಡದ ನಿತಿನ್‌ ಗೌಡ ಮತ್ತು ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್‌ಕುಮಾರ್‌ ರೈ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ