ಪೊಲೀಸ್‌ ಕಾರ್ಯಾಚರಣೆ: 147 ಪ್ರಕರಣ ದಾಖಲು

Team Udayavani, Mar 6, 2019, 5:49 AM IST

ಮಹಾನಗರ: ಬಸ್‌ಗಳಲ್ಲಿ ಕರ್ಕಶ ಹಾರ್ನ್ ಗಳು ಹಾಗೂ ಬ್ರೆಕ್‌ ಲೈಟ್‌ ರಹಿತ ವಾಹನಗಳ ವಿರುದ್ಧ ನಗರ ಪೊಲೀಸರು ಮಂಗಳವಾರ ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಒಟ್ಟು 147 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಕರ್ಕಶ ಹಾರ್ನ್ ಗಳು ಹಾಗೂ ವಾಹನಗಳಲ್ಲಿ ಬ್ರೆಕ್‌ಲೈಟ್‌ ಇಲ್ಲದಿರುವ ಪ್ರಕರಣಗಳಲ್ಲಿ ಒಟ್ಟು 14,700 ರೂ. ದಂಡ ವಿಧಿಸಲಾಗಿದೆ.

ಮಂಗಳೂರು ನಗರ ಸಹಾಯಕ ಪೊಲೀಸ್‌ ಆಯುಕ್ತ (ಸಂಚಾರಿ) ಮಂಜುನಾಥ ಶೆಟ್ಟಿ ಅವರ ನೇತೃತ್ವದಲ್ಲಿ ನಗರದ ಲಾಲ್‌ಬಾಗ್‌, ಸುರತ್ಕಲ್‌,ನಂತೂರು, ಉಳ್ಳಾಲ ಸಹಿತ ವಿವಿಧೆಡೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ಸಂದರ್ಭ ಬಸ್‌ಗಳನ್ನು ತಪಾಸಣೆ ನಡೆಸಿ ಕರ್ಕಶ ಹಾರ್ನ್ಗಳನ್ನು ಅಳವಡಿಸಿದ್ದ ಸುಮಾರು 112 ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸಿ ಒಟ್ಟು 11,200 ರೂ. ದಂಡ ವಿಧಿಸಲಾಯಿತು.

ಇದೇ ಸಂದರ್ಭ ಬ್ರೆಕ್‌ಲೈಟ್‌ ಇಲ್ಲದ ಬಸ್‌ ಗಳ ವಿರುದ್ಧವೂ ಕ್ರಮಕೈಗೊಳ್ಳಲಾಯಿತು. 35 ಪ್ರಕರಣಗಳನ್ನು ದಾಖಲಿಸಿಕೊಂಡು 3,500 ರೂ. ದಂಡ ವಿಧಿಸಲಾಯಿತು. ನಗರದಲ್ಲಿ ಬಸ್‌ಗಳಲ್ಲಿ ಕರ್ಕಶ ಹಾರ್ನ್ಗಳ ಹಾವಳಿ ಬಗ್ಗೆ ನಾಗರಿಕರಿಂದ ದೂರುಗಳು ವ್ಯಕ್ತವಾಗಿದ್ದವು. ಕರ್ಕಶ ಹಾರ್ನ್ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಯಲ್ಲಿದೆ. ಇದಲ್ಲದ ಟಿಂಟ್‌ ಗ್ಲಾಸ್‌ ಅಳವಡಿಸಿರುವ ವಾಹನಗಳ ವಿರುದ್ಧವೂ ಕಾರ್ಯಾಚರಣೆ ನಡೆಯಯಲಿದೆ ಎಂದು ಎಸಿಪಿ ಮಂಜುನಾಥ ಶೆಟ್ಟಿ ತಿಳಿಸಿದ್ದಾರೆ. 

https://beta.udayavani.com/district-news/dakshina-kannada-news/polali-bhramakalashotsava-3

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ