ಅಹೋರಾತ್ರಿ ಶಿವರಾತ್ರಿ ಸಂಗೀತೋತ್ಸವ ನಾಳೆ

Team Udayavani, Mar 3, 2019, 11:39 AM IST

ಧಾರವಾಡ: ಇಲ್ಲಿಯ ಮಂಗಳವಾರ ಪೇಟೆಯ ಮುದಿ ಮಾರುತಿ ದೇವಸ್ಥಾನದಲ್ಲಿ ಮಾ. 4ರಂದು ಸಂಜೆ 6:45 ಗಂಟೆಗೆ ಜರುಗುವ ಶಿವಸ್ಫೂರ್ತಿ ಮಹಾಶಿವರಾತ್ರಿ ಸಂಗೀತೋತ್ಸವ ಈ ಬಾರಿ 43ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದೆ. ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಪಂ| ಸೋಮನಾಥ ಮರಡೂರ, ಡಾ|ಸುಲಭಾ ದತ್ತ ನೀರಲಗಿ, ಉಸ್ತಾದ್‌ ಫಯಾಜ್‌ ಖಾನ್‌, ಬೆಂಗಳೂರಿನ ಸಿದ್ಧಾರ್ಥ ಬೆಳ್ಮಣ್ಣು ಗಾಯನ ಪ್ರಸ್ತುತಪಡಿಸಲಿದ್ದಾರೆ.

ಬೆಂಗಳೂರಿನ ಡಾ|ಉದಯರಾಜ್‌ ಕರ್ಪೂರ ತಬಲಾ ಸೋಲೋ, ಗುರುಪ್ರಸಾದ್‌ ಹೆಗಡೆ ಸಾರಂಗಿ ಸೋಲೋ ಪ್ರಸ್ತುತ ಪಡಿಸಲಿದ್ದಾರೆ. ಡಾ|ಉದಯರಾಜ್‌ ಕರ್ಪೂರ, ಶಶಿಭೂಷಣ ಗುರ್ಜರ, ಡಾ| ಎ.ಎಲ್‌. ದೇಸಾಯಿ, ವಿಜಯಕುಮಾರ ಸುತಾರ, ದಾಮೋದರ ಪಾಮಡಿ, ಶ್ರೀಹರಿ ದಿಗ್ಗಾವಿ, ರವಿ ಜೋಶಿ, ಪ್ರಶಾಂತ ಹಾರೋಗೇರಿ, ಕೃಷ್ಣ ಕೂಡ್ಲಿಗಿ ತಬಲಾ ಸಾಥ್‌ ನೀಡಲಿದ್ದು, ಸುಧೀಂದ್ರ ಸಿದ್ದಾಪುರ ತಾಳ ವಾದ್ಯ ನುಡಿಸಲಿದ್ದಾರೆ. ಬೆಳಗಾವಿಯ ರಂಜನ್‌ ಮೂರ್ತಿ ಯು.ಎಂ., ಕೆ.ಜಿ. ಪಾಟೀಲ, ಕೆ.ಜಿ. ಪಾಟೀಲ, ಬಸವರಾಜ ಹಿರೇಮಠ, ಬಸವರಾಜ ಹೂಗಾರ, ವಿನೋದ ಪಾಟೀಲ ಸಂವಾದಿನಿ ಸಾಥ್‌ ನೀಡಲಿದ್ದು, ಡಾ|ಗುರುಬಸವ ಮಹಾಮನೆ ವಯಲಿನ್‌ ಸಾಥ್‌ ನೀಡಲಿದ್ದಾರೆ.

ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಗುರುರಾಜ ಭಜನಾ ಮಂಡಳಿಯಿಂದ ಭಕ್ತಿ ಸಂಗೀತ, ಕಲಕೇರಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸುಗಮ ಸಂಗೀತ, ಸುಜಾತಾ ರಾಯ್ಕರ್‌ ಅವರ ಸ್ವರ ರಂಜನಿ ಸಂಗೀತ ವಿದ್ಯಾಲಯದಿಂದ ಭಕ್ತಿ ಸಂಗೀತ, ಫಿಲಿಫೈನ್ಸ್‌ನ ದಿ ಮಿನಿಸ್ಟ್ರಲ್ಸ್‌ ಆಫ್‌ ಹೋಪ್‌ ತಂಡದಿಂದ ಪಿಲಿಪೈನ್ಸ್‌ ಫೋಕ್ಸ್‌ ಮತ್ತು ಪ್ರೇಯರ್ಸ್‌ ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ. ಬೆಂಗಳೂರಿನ ಪುಷ್ಕರ ವಾದ್ಯವೃಂದದಿಂದ ತಬಲಾ ತರಂಗ, ಡಾ| ಜ್ಯೋತಿ ಕೂಡ್ಲಿಗಿ ಅವರ ಸ್ವರ ಸಂಯೋಜನೆಯಲ್ಲಿ ನಾದಸುರಭಿ ಪಾಠಶಾಲೆ ಮಕ್ಕಳಿಂದ ಭಾವಯಾನ, ಹಾನಂದಾ ಗೋಸಾವಿ ಅವರಿಂದ ಸುಗಮ ಸಂಗೀತ ಕಛೇರಿಗಳು ಜರುಗಲಿವೆ.

ಸಾಧಕ ಶಿವ ಪ್ರಶಸ್ತಿ ಪುರಸ್ಕೃತರು
ಪ್ರಸಕ್ತ ಸಾಲಿನ ಸಾಧಕ ಶಿವ ಪ್ರಶಸ್ತಿಗೆ ಡಾ|ಸಿದ್ಧಲಿಂಗ ಪಟ್ಟಣಶೆಟ್ಟಿ, ಹಿರಿಯ ಸಂಗೀತಗಾರರಾದ ಪಂ. ಸೋಮನಾಥ ಮರಡೂರ, ಡಾ| ಸುಲಭಾ ದತ್ತ ನೀರಲಗಿ, ಉಸ್ತಾದ್‌ ಫಯಾಜ್‌ ಖಾನ್‌, ಪಂ. ಎಚ್‌.ಆರ್‌. ಬಡಿಗೇರ, ಡಾ|ನಂದಾ ಪಾಟೀಲ, ಡಾ|ಉದಯರಾಜ್‌ ಕರ್ಪೂರ ಭಾಜನರಾಗಿದ್ದಾರೆ. ಸಂಗೀತಜ್ಞರಾದ ಗುರುಪ್ರಸಾದ ಹೆಗಡೆ, ಶಶಿಭೂಷಣ ಗುರ್ಜರ, ನಿರಂಜನಮೂರ್ತಿ ಯು.ಎಮ್‌. ಹಾಗೂ ಸಿದ್ಧಾರ್ಥ ಬೆಳ್ಮಣ್ಣು ಭಾಜನರಾಗಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

https://beta.udayavani.com/district-news/dharwad-news/hubli-super-specialty-hospital-at-kims

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ