ಬಜೆಟ್‌: 23 ಕೋಟಿ ಆದಾಯ, 31 ಕೋಟಿ ರೂ. ವ್ಯಯ

Team Udayavani, Mar 6, 2019, 7:26 AM IST

ನಂಜನಗೂಡು: ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಗರಸಭಾಧ್ಯಕ್ಷೆ ಪುಷ್ಪಲತಾ 2019-10ನೇ ಸಾಲಿಗೆ 72 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡಿಸಿದರು.  23.36 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

ಆದಾಯ: ಆಸ್ತಿ ತೆರಿಗೆ 4.25 ಕೋಟಿ ರೂ., ಎಸ್‌ಎಫ್ಸಿ ನಿಧಿ ಅನುದಾನ 3.71 ಕೋಟಿ, ಎಸ್‌ಎಫ್ಸಿ  ವಿದ್ಯುತ್‌ ಅನುದಾನ  6.28 ಕೋಟಿ, 14ನೇ ಹಣಕಾಸು ಅನುದಾನ 3.87 ಕೋಟಿ ರೂ. ಸೇರಿದಂತೆ ವಿವಿಧ ಮೂಲಗಳಿಂದ 23.36 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ಹೇಳಿದರು.  

ವೆಚ್ಚ: ರಸ್ತೆ ಮತ್ತು ಚರಂಡಿಗಾಗಿ 5. 25 ಕೋಟಿ ರೂ., ನೀರು ಸರಬರಾಜಿನ ಯಂತ್ರೋಪಕರಣಕ್ಕೆ 1.30 ಕೋಟಿ ರೂ., ಬೀದಿ ದೀಪ ನೀರು ಸರಬರಾಜಿಗೆ 6.28 ಕೋಟಿ, ನೈರ್ಮಲ್ಯಕ್ಕೆ 2.1 ಕೋಟಿ, ನಿರಂತರ ನೀರು ಸರಬರಾಜಿಗಾಗಿ 93 ಲಕ್ಷ ರೂ., ಕಟ್ಟಡ ದುರಸ್ತಿಗೆ 90 ಲಕ್ಷ ರೂ., ಜಾಹೀರಾತು ಹಾಗೂ ವಿವಿಧ ಕಚೇರಿ ವೆಚ್ಚಕ್ಕಾಗಿ 1.33 ಕೋಟಿ ರೂ. ಸೇರಿದಂತೆ ನಾಗರಿಕರ ಮೂಲಭೂತ ಸೌಲಭ್ಯಕ್ಕಾಗಿ 31.56  ಕೋಟಿ ರೂ. ವ್ಯಯಿಸಲು ನಿರ್ಧರಿಸಲಾಗಿದೆ.

ಆರಂಭಿಕ ಶುಲ್ಕು 8.27  ಕೋಟಿ ರೂ. ಸೇರಿಸಲಾಗಿದ್ದು, ಒಟ್ಟಾರೆ  72 ಲಕ್ಷ ರೂ.ಗಳ ಉಳಿತಾಯದ ಆಯವ್ಯಯ ಇದಾಗಿದೆ ಎಂದ ಪುಷ್ಪಲತಾ ತಿಳಿಸಿದರು. ಇದೇ ವೇಳೆ, ನೌಕರರಿಗೆ ವೇತನ ವಿಳಂಬ ಹಾಗೂ ಪೌರ ಕಾರ್ಮಿಕರಿಗೆ ಸಮರ್ಪಕವಾಗಿ ವೇತನ ಪಾವತಿಸದಿರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಸಭಾತ್ಯಾಗ: ತಾವು ಕೇಳಿದ ವಿವರಗಳ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ ಸದಸ್ಯ ಮಹದೇವಸ್ವಾಮಿ ಸಭಾತ್ಯಾಗ ನಡೆಸುವುದಾಗಿ ತಿಳಿಸಿ ಸಭೆಯಿಂದ ಹೊರ ನಡೆದರು. ಸಭೆಯಲ್ಲಿ ಉಪಾಧ್ಯಕ್ಷ ಪ್ರದೀಪ್‌, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಕೃಷ್ಣ, ಸದಸ್ಯರಾದ ಮಂಜುನಾಥ್‌, ರಾಜೇಶ್‌, ಆರ್‌.ರಾಜು, ನಗರಸಭಾ ಆಯುಕ್ತ  ವಿಜಯ, ತಾಂತ್ರಿಕ ಅಧಿಕಾರಿ ಭಾಸ್ಕರ್‌, ಅಧಿಕಾರಿ ಅರ್ಚನಾ ಇತರರಿದ್ದರು.

https://beta.udayavani.com/district-news/mysore-news/open-university-has-awarded-a-degree-to-17512-students

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ