ಫಿಟ್ನೆಸ್ ಕಾಪಾಡಲು ಸರಳ ವ್ಯಾಯಮ

Team Udayavani, Mar 5, 2019, 5:36 AM IST

ಫಿಟ್ನೆಸ್  ಕಾಪಾಡಿಕೊಳ್ಳಲು ಜಿಮ್‌ಗೆ ಹೋಗಲು ಬಯಸುವವರು ಸಾಮಾನ್ಯ. ಆದರೆ ಅಲ್ಲಿ ಹೋಗಲು ಸಾಧ್ಯವಿಲ್ಲ ಎಂಬು ವರು ಮನೆ ಯಲ್ಲೇ ಕೆಲವು ವ್ಯಾಯಾಮ ಮಾಡುವ ಮೂಲಕ ಫಿಟ್‌ ಆಗಿ ಇರಬಹುದು. 

ಮೋಜಿನ ವ್ಯಾಯಾಮ 
ವ್ಯಾಯಾಮವನ್ನು ಆಟವೆಂದು ಪರಿಗಣಿಸಿದಾಗ ಮತ್ತಷ್ಟು ಆಸಕ್ತಿ ಹುಟ್ಟು ತ್ತದೆ.  ಶಾಲೆಯಲ್ಲಿ ಓದುವಾಗ ಮಾಡುತ್ತಿದ್ದ ಕಪ್ಪೆ ಜಿಗ್ಗಿತ, ಕರಡಿ ಓಟಗಳಂತಹ ಭಂಗಿಗಳಲ್ಲಿ ಚಲಿಸುವುದು ಎಷ್ಟು ಕಷ್ಟ, ಬಿಗಿಯಾದ ಸ್ನಾಯುಗಳು ಸಡಿಲಗೊಳಿ ಸಲು ಸಹಕಾರಿ. ದೇಹದ ಅಶಕ್ತ ಭಾಗವನ್ನು ಗುರುತಿಸಿ ಅದನ್ನು ಬಲಗೊಳಿಸುತ್ತದೆ.  

ಪುಶ್‌ಅಪ್‌, ಸಿಟ್‌ಅಪ್‌  
ದೇಹದ ಫಿಟ್ನೆಸ್  ಕಾಪಾಡುವಲ್ಲಿ ಪುಶ್‌ಅಪ್‌, ಸಿಟ್‌ಅಪ್‌ ಸಹಕಾರಿಯಾಗಿವೆ. ಇದನ್ನು ಮಾಡುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡಿದಲ್ಲಿ ಆಕರ್ಷಕ ಅಂಗಸೌಷ್ಟವ ಪಡೆಯಬಹುದು. ಇನ್ನು ಈ ವ್ಯಾಯಾಮ ಮಾಡುವಾಗ 10ರಿಂದ 1ರ ಎಣಿಕೆ ಮಾಡಿ ವ್ಯಾಯಮ ಮಾಡುವುದು ಉತ್ತಮ. ಹಾಗೇ ಮಾಡುವಾಗ ಶಕ್ತಿ ಪ್ರದರ್ಶನ ಮಾಡಲು ಹೋಗದೇ 20 ಸೆಕೆಂಡ್‌ಗಳ ಕಾಲ ವಿಶ್ರಾಂತಿ ಪಡೆದು ಮತ್ತೆ ವ್ಯಾಯಾಮ ಪ್ರಾರಂಭಿಸುವುದರಿಂದ ದೇಹದ ಮೇಲೆ ಹಿಡಿತ ಸಾಧಿಸಬಹುದು.

ಮೆಟ್ಟಿಲುಗಳನ್ನು ಬಳಸಿ
ಯಾವುದೇ ವ್ಯಾಯಾಮ ಮಾಡಲು ಕಾಲುಗಳು ಪ್ರಮುಖ ಪಾತ್ರ ವಹಿಸುತ್ತದೆ. ಈ ಭಾಗದಲ್ಲಿರುವ ಸ್ನಾಯುಗಳನ್ನು ಬಲಿಷ್ಠಗಳಿಸಿಕೊಂಡರೆ, ಹೆಚ್ಚು ಶ್ರಮ ಬಯಸುವ ಇತರ ಭಂಗಿಗಳ ವ್ಯಾಯಾಮ ಮಾಡಲು ಸಾಧ್ಯ. ಒಂದೇ ಮೆಟ್ಟಿಲನ್ನು ವೇಗವಾಗಿ ಹತ್ತುವುದು ಇಳಿಯುವುದು ಮಾಡಿ, ಆಯಾಸವಾದಾಗ ನಿಲ್ಲಿಸಿ, ಮತ್ತು ಪ್ರಾರಂಭಿಸಬೇಕು. ಈ ರೀತಿ ಪ್ರತಿನಿತ್ಯ ಮಾಡಿದಾಗ ಸ್ನಾಯುಗಳಲ್ಲಿ ಹೆಚ್ಚಿನ ಬಲ ತುಂಬಿಕೊಳ್ಳುತ್ತದೆ.

ಸ್ಕಿಪ್ಪಿಂಗ್‌, ಬ್ಯಾಟಿಂಗ್‌
ಪ್ರತಿ ನಿತ್ಯ ಬೆಳಗ್ಗೆ  10ರಿಂದ 15 ನಿಮಿಷ ಸ್ಕಿಪ್ಪಿಂಗ್‌ ಮಾಡುವುದರಿಂದ ಸ್ನಾಯುಗಳು ಸಡಿಲಗೊಂಡು, ವ್ಯಾಯಾಮ ಮಾಡಲು ಅನುವು ಮಾಡಿಕೊಡುತ್ತದೆ. ಮನೆಯಲ್ಲಿರುವ ಕ್ರಿಕೆಟ್‌ ಬ್ಯಾಟ್‌ ತೆಗೆದುಕೊಂಡು ವಿವಿಧ ಭಂಗಿಗಳನ್ನು ಅಭ್ಯಸಿಸುವುದರಿಂದ ಕೈಗಳ ಸ್ನಾಯುಗಳು ಬಲಗೊಳ್ಳುತ್ತವೆ.

   ಕಾರ್ತಿಕ್‌ ಚಿತ್ರಾಪುರ

https://beta.udayavani.com/diversity/health/increase-the-beauty-of-nails

ಈ ವಿಭಾಗದಿಂದ ಇನ್ನಷ್ಟು

  • ಮಧುಮೇಹದ ಸಮಸ್ಯೆ ಹೊಂದಿರುವವರಿಗೆ  ವೈದ್ಯರು ನೀಡುವ ಮೊದಲ ಸಲಹೆ ದೇಹದ ತೂಕ ಇಳಿಸುವಿಕೆ. ಟೈಪ್‌ 2 ಡಯಾಬೀಟಿಸ್‌ ಹೊಂದಿರುವವರಿಗೆ ದೇಹದ ತೂಕ ಇಳಿಸಿಕೊಳ್ಳುವುದರಿಂದ...

  • ಬೇಸಗೆಯಲ್ಲಿ ಮೈ ಬೆವರುವುದು ಸಾಮಾನ್ಯ. ಆದರೆ ಕೆಲವರಿಗೆ ಬೆವರು ಒಂದು ಸಮಸ್ಯೆಯಾಗಿ ಕಾಡುತ್ತದೆ. ಇಂಥ ವರು ಇಲ್ಲಿರುವ ವಿಧಾನಗಳನ್ನು ಅನುಸರಿಸಿ, ಬೆವರು ವಾಸನೆಯ...

  • ಎರಡು ಗಲ್ಲದ ತೊಂದರೆ (ಡಬಲ್‌ ಚಿನ್‌), ತುಂಬಿದ ಕೆನ್ನೆಗಳಿಂದ ಗೋಚರಿಸುವ ಮುಖದ ಕೊಬ್ಬು ಓರ್ವ ವ್ಯಕ್ತಿಯ ಬಾಹ್ಯ ನೋಟ ಮತ್ತು ಆತ್ಮವಿಶ್ವಾಸದ ಮೇಲೆ ವ್ಯತಿರಿಕ್ತ...

  • ಆಧುನಿಕ ಜೀವನ ಶೈಲಿಯಲ್ಲಿ ಮಾನಸಿಕ ಒತ್ತಡ ಎಲ್ಲರಿಗೂ ಸಾಮಾನ್ಯ ಎಂಬಂತಾಗಿದೆ. ಇದನ್ನು ಹಾಗೇ ಬಿಟ್ಟರೆ ಮುಂದೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ...

  • ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಎಷ್ಟು ನೀರು ಕುಡಿದರೂ ದಾಹ ತಣಿಯುತ್ತಿಲ್ಲ. ಸಿಹಿ, ಸಿಹಿಯ ಪಾನೀಯಗಳನ್ನು ಮನಸ್ಸು ಬಯಸುತ್ತಿದೆ. ತಾಜಾ ಹಣ್ಣಿನ ಜ್ಯೂಸ್‌ಗಳು...

ಹೊಸ ಸೇರ್ಪಡೆ