ರೆಡ್ ಮಿ ನೋಟ್ 5 ಪ್ರೊ v/s motorola one power ಸ್ಮಾರ್ಟ್ ಪೋನ್

Team Udayavani, Sep 25, 2018, 1:08 PM IST

ಮೋಟೋರೋಲಾ ಮೊಬೈಲ್ ಕಂಪನಿಯು ಆಂಡ್ರಾಯ್ಡ್ ಒನ್ ಚಾಲಿತ “ಮೋಟೋರೋಲಾ ಒನ್ ಪವರ್” ಎಂಬ ಹೊಚ್ಚ ಹೊಸ ಸ್ಮಾರ್ಟ್ ಪೋನ್’ ಅನ್ನು  ಬಿಡುಗಡೆ ಮಾಡಿದ್ದು ಇದರ ವಿಶೇಷತೆ ಹಾಗೂ ಉತ್ತಮ ಬೆಲೆ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಮಾರುಕಟ್ಟೆಯ ಸಂಚಲನವಾಗಿರುವ ರೆಡ್ ಮಿ ನೋಟ್ 5 ಪ್ರೊ ಗೆ ನೇರ ಹಣಾಹಣಿ ನೀಡಲು ಈ ಫೋನ್ ತುದಿಗಾಲಲ್ಲಿ ನಿಂತಿದ್ದು ಅಕ್ಟೋಬರ್ 5 ರಂದು ಫ್ಲಿಪ್ಕಾರ್ಟ್’ಲ್ಲಿ ತನ್ನ ಮೊದಲ ಸೇಲ್ ಆರಂಭಿಸಲಿದೆ.

ಇದರ ಪ್ರಮುಖ ವಿಶೇಷತೆಗಳ ಮುಖ್ಯಾಂಶಗಳು
◆ 4ಎ ದ್ವಿ ಸಿಮ್ ಕಾರ್ಡ್
◆ 4 ಜಿಬಿ RAM | 64 ಜಿಬಿ ROM(ಮೈಕ್ರೊ SD ಕಾರ್ಡ್ ಮೂಲಕ  256 ಜಿಬಿ ವರೆಗೆ ವಿಸ್ತರಿಸಬಹುದು )
◆ 15.75 cm (6.2 ಇಂಚು) ಸಂಪೂರ್ಣ FHD + ನೋಟ್ಚ್ ಪರದೆ
◆ 16MP + 5MP  ದ್ವಿ ಹಿಂಭಾಗದ ಕ್ಯಾಮೆರಾ | 12MP ಫ್ರಂಟ್ ಕ್ಯಾಮೆರಾ
◆ 5000 mAh  ಬ್ಯಾಟರಿ + ಸಿ ಟೈಪ್ ಚಾರ್ಜರ್
◆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 636 ಪ್ರೊಸೆಸರ್

ಡಿಸ್ಪ್ಲೇ ಪರದೆ :
19 : 9 ಅನುಪಾತದ 15.75 cm  (6.2 ಇಂಚು) ಸಂಪೂರ್ಣ FHD 1080 x 2264  ಪಿಕ್ಸೆಲ್ ರೆಸೋಲುಶನ್  ನೋಟ್ಚ್  ಪರದೆಯೊಂದಿಗೆ ಗೊರಿಲ್ಲಾ ಗ್ಲಾಸ್ ಹೊಂದಿದೆ.

ವೇಗ ಹಾಗೂ ಕಾರ್ಯಕ್ಷಮತೆ :
4 GB RAM  ಹಾಗೂ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 636 ಪ್ರೊಸೆಸರ್ ಹಾಗೂ 1.8GHz  ಎಂಟು ಕೋರ್ ಹೈ ಸ್ಪೀಡ್ ಪ್ರೊಸೆಸರ್’ನ ಮೂಲಕ ಫೋನಿನ ವೇಗ ಹಾಗೂ ಕಾರ್ಯಕ್ಷಮತೆಯಲ್ಲಿ ಉತ್ತಮವಾಗಿದೆ ಹಾಗೂ 64ಜಿಬಿ ROM ಹೊಂದಿದ್ದು ಮೈಕ್ರೊ ಖಈ ಕಾರ್ಡ್ ಮೂಲಕ  256 ಜಿಬಿ ವರೆಗೆ ವಿಸ್ತರಿಸಬಹುದಾಗಿದೆ.

ಬ್ಯಾಟರಿ ಸಾಮರ್ಥ್ಯ 
5000mAhನ ಬ್ಯಾಟರಿ ಹೊಂದಿದ್ದು ಸುಮಾರು 2 ದಿನಗಳ ಬಳಕೆ ಮಾಡಿಕೊಳ್ಳಬಹುದಾಗಿದೆ. ಸಿ ಶೈಲಿಯ ಚಾರ್ಜಿಂಗ್ ಇದ್ದು ಕೇವಲ 15 20 ನಿಮಿಷಗಳಲ್ಲಿ ಅರ್ಧದಷ್ಟು ಚಾರ್ಜ ಮಾಡಬಹುದು.

ಕ್ಯಾಮೆರಾ :
16MP + 5MP (f 1.8 & f 2.2 )  ದ್ವಿ ಹಿಂಭಾಗದ ಕ್ಯಾಮೆರಾ, ಪೋಟ್ರೈಟ್ ಚಿತ್ರಗನ್ನು ಕೂಡ ಸೆರೆ ಹಿಡಿಯಬಹುದಾಗಿದೆ,

ಮುಂಭಾಗದಲ್ಲಿ 12MP( f 2.0 ) ( f 2.0 ) ಸ್ವಂತಿ ಕ್ಯಾಮೆರಾ ಇದೆ.

2160p HD  ವಿಡಿಯೋ ರೆಕಾರ್ಡಿಂಗ್ ಸಹ ಮಾಡಬಹುದು.

ಆಂಡ್ರಾಯ್ಡ್ ಒನ್ ಚಾಲಿತ ಫೋನ್ ಆಗಿದ್ದು ಗೂಗಲ್ ನ ಹೊಸ ಆಪ್ಸ್ ಹಾಗೂ ಹೊಸ ಹೊಸ ಸೇವೆಗಳ ಸೌಲಭ್ಯ ಸಿಗಲಿದೆ.

ಇಂತಹ ಪ್ರಮುಖ ವಿಶೇಷತೆಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದ್ದು, ಇದು ಗ್ರಾಹಕರ ಕೈ ಸೇರಿದ ಬಳಿಕವಷ್ಟೇ ಇದರ ಸಂಪೂರ್ಣ ಚಿತ್ರಣ ತಿಳಿಯಲಿದೆ.

ಇದರ ಬೆಲೆ 15,999 ರೂಪಾಯಿ ಆಗಿದ್ದು, ಅಕ್ಟೋಬರ್ 5 ರ ಮಧ್ಯಾಹ್ನ 12ಕ್ಕೆ ಫ್ಲಿಪ್ಕಾರ್ಟ್‘ಲ್ಲಿ ಮೊದಲ ಸೇಲ್ ಆಗಲಿದ್ದು ಅಲ್ಲಿಂದ ಖರೀದಿಸಬಹುದಾಗಿದೆ,ಈ ಫೋನ್’ನ ಹೆಚ್ಚಿನ ಮಾಹಿತಿ ಹಾಗೂ ಖರೀದಿಸಲು ಅಧಿಕೃತ ಲಿಂಕ್ || http://bit.ly/MotorOnePower ||

*ಸೂರಜ್ ಅಣ್ವೇಕರ್, ಬೆಂಗಳೂರು


ಈ ವಿಭಾಗದಿಂದ ಇನ್ನಷ್ಟು

 • 3 weeks ago

  ಮಾರಾಜೋ ಕೀ ಜೈ

  3 weeks ago

  ಆರೇಳು ಮಂದಿ ಕುಟುಂಬ ವರ್ಗದವರು ಅಥವಾ ಗೆಳೆಯರು ಒಟ್ಟಿಗೇ ಪ್ರಯಾಣಿಸಲು ಇನ್ನೋವಾ ಕಾರ್‌ ಇದ್ದರಷ್ಟೇ ಸಾಧ್ಯ ಎಂಬ ಮಾತು ಈಗಲೂ ಚಾಲ್ತಿಯಲ್ಲಿದೆ. ಇಂಥ ಸಂದರ್ಭದಲ್ಲಿಯೇ...

 • ಬೆಂಗಳೂರು: ಜಿಯೋ-ಒನ್ ಪ್ಲಸ್ 6ಟಿ ಅನ್ ಲಾಕ್ ದಿ ಸ್ಪೀಡ್ ಆಫರ್ ನೀಡಿದ್ದು, ಇದೀಗ 299 ರೂ.ನ ಮೊದಲ ಪ್ರಿಪೇಯ್ಡ್ ರಿಚಾರ್ಜ್ ಮೇಲೆ 5,400 ರೂ.ಇನ್ ಸ್ಟಂಟ್ ಕ್ಯಾಶ್ ಬ್ಯಾಕ್...

 • ಆಧುನಿಕ ಕುಟುಂಬ ವರ್ಗದವರನ್ನೇ ಗುರಿಯಾಗಿಸಿಕೊಂಡು ಇಸೂಜು ಕಂಪನಿಯು ಈಗ ಎಂಯು-ಎಕ್ಸ್‌ ಸಿಗ್ನೇಚರ್‌ನ ಎಸ್‌ಯುವಿ ಶ್ರೇಣಿಯ ಹೊಸ ಕಾರನ್ನು ಮಾರುಕಟ್ಟೆಗೆ ಬಿಡುಗಡೆ...

 • ಮುಂಬೈ: ದೇಶದ ನಂ. ಒನ್ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಮಾರಾಟ ಸಂಸ್ಥೆ ರಿಲಯನ್ಸ್ ಡಿಜಿಟಲ್  ಜೊತೆಗೆ ಅಧಿಕ ಮೌಲ್ಯದ...

 • 4 months ago

  ಫ್ಯೂಚರ್‌-ಎಸ್‌

  4 months ago

  ಮಧ್ಯಮ ವರ್ಗದವರನ್ನೇ ಗುರಿಯಾಗಿಸಿಕೊಂಡು ಹೊಸ ಹೊಸ ವಾಹನ ತಯಾರಿಸುವ ಮಾರುತು ಸುಜುಕಿ, ಇದೀಗ ಫ್ಯೂಚರ್‌-ಎಸ್‌ ಎಂಬ ಹೊಸ ಕಾರನ್ನು ಉತ್ಪಾದಿಸಿದೆ. ಹಲವು ವೈಶಿಷ್ಟ್ಯಗಳನ್ನು...

ಹೊಸ ಸೇರ್ಪಡೆ