ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಮತ ಮಾರಿಕೊಳ್ಳಬೇಡಿ

  ಮತವನ್ನು ಹಣಕೊಟ್ಟು ಖರೀದಿಸುವುದು ಚುನಾವಣೆಯ ಸಮ್ಮತ ವಿಧಾನವೇ ಆಗಿರುವುದು ದುರದೃಷ್ಟಕರ ಬೆಳವಣಿಗೆ. ಚುನಾವಣಾ ಆಯೋಗ ಚುನಾವಣೆಯಲ್ಲಿ ಹಣದ ಹರಿವನ್ನು ನಿಯಂತ್ರಿಸಲು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ರಾಜಕೀಯ ಪಕ್ಷಗಳು ಅಧಿಕಾರಿಗಳ ಕಣ್ಣುತಪ್ಪಿಸಿ ಮತದಾರರಿಗೆ ಲಂಚ ನೀಡುವುದರಲ್ಲಿ ನಿಷ್ಣಾತವಾಗಿವೆ. ರಹಸ್ಯವಾಗಿ…

 • ಬಿಎಸ್‌ಎನ್‌ಎಲ್‌ ಚೇತರಿಸಿಕೊಳ್ಳಬೇಕು  

  ಸರಕಾರಿ ಸ್ವಾಮ್ಯದ ಭಾರತ್‌ ಸಂಚಾರ್‌ ನಿಗಮ್‌ (ಬಿಎಸ್‌ಎನ್‌ಎಲ್‌) ಸಂಸ್ಥೆಯ ಹಣಕಾಸು ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇದೇ ಮೊದಲ ಬಾರಿಗೆ ಬಿಎಸ್‌ಎನ್‌ಎಲ್‌ ತನ್ನ ನೌಕರರಿಗೆ ವೇತನ ಪಾವತಿ ಮಾಡಲೂ ಸಾಧ್ಯವಾಗದೆ ಪರಿತಪಿಸುವ ಸ್ಥಿತಿಗೆ ತಲುಪಿದೆ. ಸಾಮಾನ್ಯವಾಗಿ ಪ್ರತಿ ಮಾಸದ ಕೊನೆಯ…

 • ಮತ್ತೆ ಪಾಕ್‌ಗೆ ನೆರವಿತ್ತ ರಾಷ್ಟ್ರ ಮಸೂದ್‌ ರಕ್ಷಕ ಚೀನಾ

  ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಇನ್ನೊಂದು ಪ್ರಯತ್ನವನ್ನು ಪಾಕಿಸ್ಥಾನದ ಪರಮಾಪ್ತ ದೇಶವಾಗಿರುವ ಚೀನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿರುವ ತನ್ನ ವಿಟೊ ಅಧಿಕಾರವನ್ನು ಬಳಸಿ ತಡೆದಿದೆ. ಹತ್ತು ವರ್ಷಗಳಲ್ಲಿ ಚೀನಾ ಇದು ನಾಲ್ಕನೇ ಸಲ ಮಸೂದ್‌ನ್ನು…

 • ರಾಜಕೀಯದಲ್ಲಿ ಮಹಿಳೆ ಬಿಜೆಡಿ ಮಾದರಿ ನಡೆ 

  ಒಡಿಶಾದಲ್ಲಿ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜೆಡಿ ಲೋಕಸಭಾ ಚುನಾವಣೆಯ ಶೇ. 33 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ತೀರ್ಮಾನಿಸಿದ್ದು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಒಂದು ಮಾದರಿ ನಡೆಯೆಂದೇ ಹೇಳಬಹುದು. ಮಹಿಳಾ ಮೀಸಲಾತಿ ಮಸೂದೆ ಕಳೆದ 25 ವರ್ಷಗಳಿಂದ ಮಂಜೂರಾಗದೆ ಅತಂತ್ರ…

 • ನಿಶ್ಚಿಂತ ನೀರವ್‌ ಮೋದಿ: ವಂಚಕರಿಗೆ ಶಿಕ್ಷೆಯಾಗಲಿ

  ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಸಮುದ್ರ ಕಿನಾರೆಯಲ್ಲಿ ನೀರವ್‌ ಮೋದಿಯ ಬಂಗಲೆಯನ್ನು ಡೈನಮೈಟ್‌ ಇಟ್ಟು ಪುಡಿ ಮಾಡಲಾಗಿದೆ. ದೇಶಕ್ಕೆ ಮೋಸ ಮಾಡಿ ಹೋದ ಉದ್ಯಮಿಗಳನ್ನು ಸುಮ್ಮನೇ ಬಿಡುವುದಿಲ್ಲ ಎಂಬ ಸಂದೇಶ ಕಳುಹಿಸುವ ಪ್ರಯತ್ನ ಇದಾಗಿದೆ.  100 ಕೋಟಿ ರೂ ಮೌಲ್ಯದ…

 • ಮತದಾನಕ್ಕೆ ಅಡ್ಡಿಯಾಗದಿರಲಿ ರಜೆ

  ಸರಿಸುಮಾರು ಮೂರು ತಿಂಗಳ ಕಾಲ ಏಳು ಹಂತದಲ್ಲಿ ನಡೆಯುವ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಮಾಮೂಲಿಯಂತೆ ಒಂದಷ್ಟು ಅಪಸ್ವರಗಳು, ಆಕ್ಷೇಪಗಳು ಕೇಳಿ ಬಂದಿವೆ. ಏ.11ರಿಂದ ತೊಡಗಿ ಮೇ 19ರ ತನಕ ಮತದಾನ ನಡೆಯಲಿದೆ. ಈ ಸುದೀರ್ಘ‌ ಅವಧಿಯ…

 • ಚುನಾವಣ ಹಬ್ಬವನ್ನು ಸಂಭ್ರಮಿಸೋಣ 

  ಪ್ರಜಾಪ್ರಭುತ್ವದ ಹಬ್ಬ ಎಂದು ಪರಿಗಣಿಸಲಾಗಿರುವ ಚುನಾವಣೆಗೆ ಚುನಾವಣಾ ಆಯೋಗ ಮುಹೂರ್ತ ನಿಗದಿಗೊಳಿಸಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಚುನಾವಣೆ ನಡೆಯುವ ರೀತಿಯೇ ಒಂದು ಸೊಗಸು.  ನೂರಾರು ಪಕ್ಷಗಳು, ಸಾವಿರಾರು ಅಭ್ಯರ್ಥಿಗಳು, ಕೋಟಿಗಟ್ಟಲೆ ಮತದಾರರು ಇವರನ್ನೆಲ್ಲ ಸರಿದೂಗಿಸಿಕೊಂಡು…

 • ಮಧ್ಯಸ್ಥಿಕೆಯಿಂದ ಪರಿಹಾರ ಸಾಧ್ಯವೇ?

  ದೇಶದ ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆ ವಿವಾದವನ್ನು ಮಾತುಕತೆ-ಸಂಧಾನದ ಮೂಲಕ ಪರಿಹರಿಸುವ ನಿಟ್ಟಿನಲ್ಲಿ ಯೋಚಿಸುತ್ತಿದೆ.  ಆದಾಗ್ಯೂ ಎರಡೂ ಪಕ್ಷಗಳೂ ಪರಸ್ಪರ ಮಾತುಕತೆಯ ಮೂಲಕ ರಾಮಜನ್ಮಭೂಮಿ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದು ಇದೇ ಮೊದಲೇನೂ ಅಲ್ಲ. ಹಿಂದೆಯೂ ಸಂಧಾನ…

 • ಪಾಕಿಸ್ತಾನದ ಹಸಿ ಸುಳ್ಳುಗಳು

  ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಪಡೆ ಪಾಕಿಸ್ತಾನಕ್ಕೆ ನುಗ್ಗಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ ಬಳಿಕ ಭಯೋತ್ಪಾದಕರತ್ತ ಪಾಕ್‌ ಹೊಂದಿರುವ ನಿಲುವಿನಲ್ಲಿ ತುಸು ಬದಲಾವಣೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಇದೀಗ ಪಾಕಿಸ್ತಾನ‌ ಅಸಲಿ ಮುಖವನ್ನು ತೋರಿಸಲಾರಂಭಿಸಿದೆ. ಪುಲ್ವಾಮವೂ ಸೇರಿದಂತೆ ಭಾರತದಲ್ಲಿ…

 • ಮಾಲಿನ್ಯ ನಿಯಂತ್ರಣ ಸಾಧಿಸಬೇಕಾದದ್ದು ಬಹಳಷ್ಟಿದೆ

  ಭಾರತದ ನಗರಗಳ ವಾಯುಮಾಲಿನ್ಯ ಮಟ್ಟ ಕಳವಳಕಾರಿ ಮಟ್ಟಕ್ಕೆ ತಲುಪಿದೆ ಎನ್ನುತ್ತಿದೆ ಗ್ರೀನ್‌ಪೀಸ್‌ ಸಂಸ್ಥೆಯ ವರದಿ. ಇದು ಜಗತ್ತಿನಾದ್ಯಂತ ನಗರಗಳ ವಾಯುಮಾಲಿನ್ಯ ಮಟ್ಟವನ್ನು ಅಧ್ಯಯನ ನಡೆಸುವ ಸಂಸ್ಥೆ. ಇದು ನೀಡಿರುವ ವರದಿಯನ್ನು ನಾವು ಎಚ್ಚರಿಕೆಯ ಕರೆಗಂಟೆಯಾಗಿ ಪರಿಗಣಿಸುವ ಅಗತ್ಯವಿದೆ. ಜಗತ್ತಿನ…

 • ಪೂರ್ಣಗೊಂಡ ಕುಂಭಮೇಳ: ಸುವ್ಯವಸ್ಥೆಗೆ ಹೊಸ ಮಾದರಿ

  ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಶಿವರಾತ್ರಿಯ ಪವಿತ್ರ ಸ್ನಾನದೊಂದಿಗೆ ಮುಕ್ತಾಯಗೊಂಡ ಕುಂಭಮೇಳ ಅನೇಕ ದಾಖಲೆಗಳನ್ನು ಬರೆದದ್ದಷ್ಟೇ ಅಲ್ಲದೇ, ಮಾದರಿ ಆಯೋಜನೆಯಾಗಿ ಹೆಸರು ಗಳಿಸಿದೆ.  49 ದಿನದಲ್ಲಿ ದೇಶ-ವಿದೇಶದ 23 ಕೋಟಿ ಜನರು ಸಂಗಮ ಸ್ನಾನ ಮಾಡಿದ್ದಾರೆ. ವಿಶ್ವದಲ್ಲೇ ಅತಿ ದೊಡ್ಡ…

 • ಐಒಸಿಯಲ್ಲಿ ಭಾರತ

  ಮುಸ್ಲಿಮ್‌ ದೇಶಗಳ ಸಹಕಾರ ಸಂಘಟನೆಯ (ಐಒಸಿ) ವಿದೇಶಾಂಗ ಸಚಿವರ ಸಮ್ಮೇಳನದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಳ್ಳಲು ಭಾರತ ಆಹ್ವಾನಿಲ್ಪಟ್ಟದ್ದು ದೇಶದ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಎಂದು ವ್ಯಾಖ್ಯಾನಿಸಲಾಗಿದೆ. ಕಳೆದ ಶುಕ್ರವಾರ ನಡೆದ ಸಮ್ಮೇಳನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ…

 • ಸರ್ಜಿಕಲ್‌ ಸ್ಟ್ರೈಕ್‌ನಲ್ಲಿ ರಾಜಕೀಯ ಬೇಡ 

  ರಾಷ್ಟ್ರೀಯ ಭದ್ರತೆಯಂಥ ಮಹತ್ವದ ವಿಚಾರವನ್ನು ರಾಜಕೀಯದ ಲಾಭ-ನಷ್ಟದ ದೃಷ್ಟಿಕೋನದಿಂದ ನೋಡುವುದೇ ತಪ್ಪು. ಈ ಸಂವೇದನಾರಹಿತ ನಡೆ ದೇಶದ ವರ್ಚಸ್ಸನ್ನು ಕಡಿಮೆಗೊಳಿಸಿದೆ. ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಸುರಕ್ಷಿತವಾಗಿ ಹಿಂದುರುಗಿದ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ಕವಿದಿದ್ದ ಯುದ್ಧದ…

 • ಕಬ್ಬಿಣ ಕಾದಿರುವಾಗಲೇ ಬಡಿಯಬೇಕು 

  ತಾನು ಶಾಂತಿಯನ್ನು ಅಪೇಕ್ಷಿಸುತ್ತೇನೆ ಎಂದು ತೋರಿಸಿಕೊಡಲು ಪಾಕಿಸ್ತಾನ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಬಿಡುಗೊಳಿಸಿರಬಹುದು. ಆದರೆ ಈ ಒಂದು ನಡೆಯಿಂದ ಪಾಕಿಸ್ತಾನ ವಿಶ್ವಾಸಾರ್ಹ ದೇಶವೇನೂ ಆಗುವುದಿಲ್ಲ. ವರ್ಧಮಾನ್‌ ಅವರನ್ನು ಬಿಡುಗಡೆಗೊಳಿಸುವುದು ಪಾಕ್‌ ಪಾಲಿಗೆ ಅನಿವಾರ್ಯವಾಗಿತ್ತೇ ಹೊರತು ಇದು…

 • ಪಾಕ್‌ನದ್ದು ಚಾತುರ್ಯವಲ್ಲ, ಅನಿವಾರ್ಯತೆ: ರಾಜತಾಂತ್ರಿಕ ಗೆಲುವು

  ಜಗತ್ತಿನ ಪ್ರಮುಖ ರಾಷ್ಟ್ರಗಳೆಲ್ಲ ಭಾರತದ ಪರ ನಿಂತಿವೆ. ಭಾರತದ ಪರ ವಹಿಸಿಕೊಳ್ಳದ ರಾಷ್ಟ್ರಗಳೂ ಪಾಕಿಸ್ಥಾನದಿಂದ ಅಂತರ ಕಾಯ್ದುಕೊಳ್ಳುತ್ತಿವೆ‌.  ಭಾರತದ ರಾಜತಾಂತ್ರಿಕ ಶಕ್ತಿಯೀಗ ಅನಾವರಣಗೊಂಡಿದೆ. ಪಾಕಿಸ್ಥಾನವು ಅಭಿನಂದನ್‌ರನ್ನು ಬೇಷರತ್ತಾಗಿ ಭಾರತಕ್ಕೆ ಕಳುಹಿಸಿಕೊಡಲು ಒಪ್ಪಿಕೊಂಡಿದೆ. ಆದಾಗ್ಯೂ ಪಾಕಿಸ್ಥಾನ ತಾನು ಶಾಂತಿ ಸೌಹಾರ್ದದ…

 • ಅಭಿನಂದನ್‌ ಜತೆಗೆ ದೇಶ

  ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ಬುಧವಾರ ಎರಡೂ ಕಡೆಗಳ ಯುದ್ಧ ವಿಮಾನಗಳ ನಡುವೆ ತೀವ್ರ ಘರ್ಷಣೆ ಸಂಭವಿಸಿದೆ. ಮಂಗಳವಾರದ ಸರ್ಜಿಕಲ್‌ ದಾಳಿಗೆ ಪ್ರತಿಯಾಗಿ ಭಾರತದ ವಾಯುನೆಲೆಗೆ ಪ್ರವೇಶಿಸಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ವಾಪಸ್‌…

 • ಪಾಠ ಕಲಿಯಲಿ ಪಾಕಿಸ್ತಾನ ಉಗ್ರರಿಗೆ ತಕ್ಕ ಶಾಸ್ತಿ 

  ಭಾರತೀಯ ವಾಯುಪಡೆ ಮಂಗಳವಾರ ಮುಂಜಾನೆ ಪಾಕಿಸ್ತಾನದೊಳಕ್ಕೆ ನುಗ್ಗಿ  ಜೈಶ್‌-ಎ-ಮೊಹಮ್ಮದ್‌ ತರಬೇತಿ ನೆಲೆಯನ್ನು ನಾಶ ಮಾಡುವ ಮೂಲಕ ಉಗ್ರರಿಗೆ ಹಾಗೂ ಅವರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದೆ. ಜೈಶ್‌ ಸಂಘಟನೆ ಫೆ. 14ರಂದು ಪುಲ್ವಾಮದಲ್ಲಿ 44 ಸಿಆರ್‌ಪಿಎಫ್ ಯೋಧರನ್ನು…

 • ಕ್ರಿಕೆಟ್‌ ಬಹಿಷ್ಕಾರ ಸಮುಚಿತ ಕ್ರಮವಲ್ಲ 

  ಪುಲ್ವಾಮ ಉಗ್ರ ದಾಳಿಯ ಬಳಿಕ ಪಾಕಿಸ್ತಾನ ಜತೆಗಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳನ್ನು ಬಹಿಷ್ಕರಿಸಬೇಕೆಂಬ ಚರ್ಚೆ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಂತೂ ಯಾವ ಕಾರಣಕ್ಕೂ ಪಾಕಿಸ್ತಾನದ ಜತೆಗೆ ಕ್ರಿಕೆಟ್‌ ಆಡಬಾರದು ಎಂಬ ರೋಷಾವೇಶದ ಅಭಿಪ್ರಾಯಗಳು ಪುಂಖಾನು ಪುಂಖ ವಾಗಿ ಹರಿದಾಡುತ್ತಿವೆ. ರಾಜಕೀಯ ವಲಯದಲ್ಲೂ…

 • ಏರ್‌ ಶೋದಲ್ಲಿ ದುರ್ಘ‌ಟನೆ ಈ ಬೇಜವಾಬ್ದಾರಿ ಸಲ್ಲ 

  ಬೆಂಗಳೂರಿನಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿದ್ದ ಸ್ಥಳದಲ್ಲಿ ಶನಿವಾರ ಸುಮಾರು 300 ಕಾರುಗಳು ಭಸ್ಮವಾಗಿರುವ ಬೆಂಕಿ ಅನಾಹುತ ಭೀಕರ ಘಟನೆಯೇ ಸರಿ. ಈ ಸಲದ ಏರೋ ಇಂಡಿಯಾ ಶೋಕ್ಕೆ ಆರಂಭ ದಿಂದಲೂ ಕಂಟಕಗಳೇ ಎದುರಾಗುತ್ತಿವೆ. ಫೆ.1ರಂದು ವೈಮಾನಿಕ ಪ್ರದರ್ಶನಕ್ಕೆ…

 • ಕಣ್ಣಿಗೆ ಮಣ್ಣೆರಚುವ ತಂತ್ರ

  ಪಾಕಿಸ್ತಾನ ಉಗ್ರ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌-ಉದ್‌- ದಾವಾ (ಜೆಯುಡಿ) ಮತ್ತು ಅದರ ಸಾಮಾಜಿಕ ಮುಖವಾಗಿರುವ ಫ‌ಲಾಹ್‌- ಐ-ಇನ್ಸಾನಿಯತ್‌ ಎಂಬೆರಡು ಸಂಘಟನೆಗಳಿಗೆ ಮರಳಿ ನಿಷೇಧ ಹೇರಿದೆ. ಪುಲ್ವಾಮದಲ್ಲಿ ಕಾರ್‌ ಬಾಂಬ್‌ ಸ್ಫೋಟಿಸಿ 40 ಸಿಆರ್‌ಪಿಎಫ್ ಯೋಧರನ್ನು ಸಾಯಿಸಿದ ಕೃತ್ಯಕ್ಕೆ…

 • ವಂದೇ ಭಾರತ್‌ಗೆ “ಕಾಟ’: ಅವಮಾನ ಮಾಡದಿರಿ

  ಭಾರತದ ಹೆಮ್ಮೆಯ ಸ್ವದೇಶಿ ನಿರ್ಮಿತ, ಅತಿವೇಗದ ವಂದೇ ಭಾರತ್‌ ಎಕ್ಸ್ ಪ್ರಸ್‌ ರೈಲಿಗೆ ತೊಂದರೆಗಳು ತಪ್ಪುತ್ತಿಲ್ಲ. ಆರಂಭದಲ್ಲಿ ಎದುರಾದ ಕೆಲ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ಈಗ ರೈಲು ಮುನ್ನುಗ್ಗುತ್ತಿ ದೆಯಾದರೂ, ಅದರತ್ತ ಕಲ್ಲೆಸೆದು ಗಾಜುಗಳನ್ನು ಪುಡಿಮಾಡುತ್ತಿರುವ ಪುಂಡರ ಸಮಸ್ಯೆಯನ್ನು ಹೇಗೆ ಎದುರಿಸಬೇಕು…

 • ಸೌದಿ ಯುವರಾಜನ ಭೇಟಿ ಸಂಬಂಧ ಸಂವರ್ಧನೆ

  ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಭಾರತ ಭೇಟಿ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ. ಪುಲ್ವಾಮದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರಿಂದ ನಡೆದ ದಾಳಿಯಲ್ಲಿ 44 ಯೋಧರು ಹುತಾತ್ಮರಾದ ಸಂದರ್ಭದಲ್ಲಿಯೇ ಯುವರಾಜ ಭಾರತಕ್ಕೆ ಬಂದಿದ್ದಾರೆ. ಭಾರತಕ್ಕೆ ಬರುವ ಮೊದಲು ದಾಳಿ…

 • ಪೊಳ್ಳು ಮಾತುಗಳು ಬೇಡ

  ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್)ಯ ನಲವತ್ತು ಮಂದಿ ಯೋಧರ ಸಾವಿಗೆ ಕಾರಣವಾದ ದಾಳಿಗೆ  ಪಾಕಿಸ್ತಾನದ ಉಗ್ರ ಸಂಘಟನೆ ಜೈಶ್‌-ಎ-ಮೊಹಮ್ಮದ್‌ ಹೊಣೆಯನ್ನು ಹೊತ್ತುಕೊಂಡಿದೆ. ಇದರ ಹೊರತಾಗಿಯೂ “ಸೂಕ್ತವಾದ ಸಾಕ್ಷ್ಯಗಳನ್ನು ನೀಡಿದರೆ ತನಿಖೆ ನಡೆಸುತ್ತೇವೆ….

 • ಮರೆಯದ ಪಾಠ ಕಲಿಸಬೇಕು

  ಕಾಶ್ಮೀರದ ಪುಲ್ವಾಮದಲ್ಲಿ ಫೆ.14ರಂದು 40 ಸಿಆರ್‌ಪಿಎಫ್ ಯೋಧರನ್ನು ಆತ್ಮಾಹುತಿ ದಾಳಿ ಮೂಲಕ ಸಾಯಿಸಿದ ಘಟನೆಗೆ ಭದ್ರತಾ ಪಡೆ ನಾಲ್ಕೇ ದಿನದಲ್ಲಿ ಪ್ರತೀಕಾರ ತೀರಿಸಿಕೊಂಡಿದೆ. ಪಿಂಗಿಲಾನ ಎಂಬ ಹಳ್ಳಿಯಲ್ಲಿ ಮನೆಯೊಂದರಲ್ಲಿ ಅಡಗಿಕೊಂಡಿದ್ದ ಮೂವರು ಉಗ್ರರನ್ನು ಸೇನೆ ಸಾಯಿಸಿದೆ. ಈ ಪೈಕಿ…

 • ಇನ್ನಷ್ಟು ಕಠಿನ ಕ್ರಮ ಅಗತ್ಯವಿದೆ 

  ಪುಲ್ವಾಮ ದಾಳಿಯ ಬಳಿಕ ಕೆಲವು ಕಠಿಣ ಕ್ರಮಗಳ ಸೂಚನೆ ನೀಡಿದ್ದ ಸರಕಾರ ಅದನ್ನೀಗ ಕಾರ್ಯಗತಗೊಳಿಸುತ್ತಿದೆ. ಕಾಶ್ಮೀರದ ಪ್ರತ್ಯೇಕವಾದಿಗಳಿಗೆ ನೀಡಿದ್ದ ಭದ್ರತೆ ಮತ್ತು ಎಲ್ಲ ಸರಕಾರಿ ಸೌಲಭ್ಯಗಳನ್ನು ಹಿಂದೆಗೆದುಕೊಂಡಿರುವುದು ಇಂಥ ಕ್ರಮಗಳಲ್ಲೊಂದು. ರವಿವಾರ ಜಮ್ಮು-ಕಾಶ್ಮೀರ ಸರಕಾರ ಪ್ರತ್ಯೇಕತಾವಾದಿಗಳಾದ ಮಿರ್ವೈಜ್‌ ಉಮರ್‌…

ಹೊಸ ಸೇರ್ಪಡೆ