ಸದೃಢ ಭಾರತ ನಿರ್ಮಾಣಕ್ಕೆ ಪ್ರಧಾನಿ ಶ್ರಮ: ರಾಜೇಶ್‌ ನಾೖಕ್‌

Team Udayavani, Feb 7, 2019, 9:06 AM IST

ಬಂಟ್ವಾಳ: ನಗರ ಪ್ರದೇಶಗಳ ಮಾದರಿಯಲ್ಲಿ ಗ್ರಾಮೀಣ ಪ್ರದೇಶಗಳನ್ನೂ ಅಭಿವೃದ್ಧಿಪಡಿಸುವುದರ ಜತೆಗೆ ಪ್ರತಿ ಮನೆಗೆ ಉಜ್ವಲ, ಆಯುಷ್ಮಾನ್‌ ಭಾರತ ಮತ್ತಿತರ ಜನಪ್ರಿಯ ಯೋಜನೆಗಳನ್ನು ತಲುಪಿಸುವ ಮೂಲಕ ಮಧ್ಯಮವರ್ಗದ ಜನರನ್ನು ಮೇಲೆತ್ತಿ ಸದೃಢ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವಿರತ ಶ್ರಮಿಸುತ್ತಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು.

ಅವರು ಅರಳ ಗ್ರಾ.ಪಂ. ವ್ಯಾಪ್ತಿಯ ವಿವಿಧೆೆಡೆ ಅನುಷ್ಠಾನಗೊಂಡ ಕುಡಿಯುವ ನೀರು ಮತ್ತಿತರ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯತ್‌ ಅಧ್ಯಕ್ಷೆ ತುಂಗಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಭಾ ಕಾರ್ಯಕ್ರಮ ಪೂರ್ವದಲ್ಲಿ ದೆಂಬುಡೆ ಎಂಬಲ್ಲಿನ ವಿದ್ಯುತ್‌ ಪರಿವರ್ತಕ, 6 ಲಕ್ಷ ರೂ. ವೆಚ್ಚದ ಕುಟ್ಟಿಕಳ ನರೇಗಾ ರಸ್ತೆ, 1.25 ಲಕ್ಷ ರೂ. ವೆಚ್ಚದ ಸಂಗಬೆಟ್ಟು ಸಂಪರ್ಕದ – ತಾರಿಪಡ್ಪು ಕುಡಿಯುವ ನೀರಿನ ಟ್ಯಾಂಕ್‌, 7.25 ಲಕ್ಷ ರೂ. ವೆಚ್ಚದ ಅರಳ ಕಲ್ಲೇರಿ ಪ್ರಾಥಮಿಕ ಶಾಲಾ ಕೊಠಡಿ ಯನ್ನು ಶಾಸಕರು ಉದ್ಘಾಟಿಸಿದರು.

ಸೌಲಭ್ಯ ವಿತರಣೆ
ಅರ್ಹ 80 ಮಂದಿ ಫಲಾನುಭವಿಗಳಿಗೆ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಕಿಟ್, ಅಂಗವಿಕಲರಿಗೆ ಚೆಕ್‌, 16 ಮಂದಿಗೆ 94 ಸಿ ಹಕ್ಕುಪತ್ರ ವಿತರಿಸಿದರು.

ಸೇತುವೆ ವೀಕ್ಷಣೆ
ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಮತ್ತು ಅರಳ-ಕಲ್ಲೊಟ್ಟೆಗೆ ಶಾಸಕರು ಭೇಟಿ ನೀಡಿ ಶಿಥಿಲಗೊಂಡ ಸೇತುವೆ ವೀಕ್ಷಿಸಿದರು.

ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಗ್ರಾ.ಪಂ. ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ, ಎಂ.ಬಿ. ಆಶ್ರಫ್‌, ಲಕ್ಷ್ಮೀಧರ ಪೂಜಾರಿ, ರಂಜನಿ, ಜೈನಾಬ್‌, ಜುಲೇಕಾ, ಪ್ರಮುಖರಾದ ನಂದರಾಮ ರೈ, ರಂಜನ್‌ ಕುಮಾರ್‌ ಅರಳ, ಪಿಡಿಒ ಉತ್ತಮ್‌ ಬನ್ಸೊಡೆ, ಕಾರ್ಯದರ್ಶಿ ಉದಯ ಸಿದ್ಧಕಟ್ಟೆ, ಕಂದಾಯ ನಿರೀಕ್ಷಕ ನವೀನ ಕುಮಾರ್‌, ಗ್ರಾಮಕರಣಿಕ ಅಮೃತಾಂಶು ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ ಸ್ವಾಗತಿಸಿ, ಪ್ರಸ್ತಾವಿಸಿದರು. ಸದಸ್ಯ ಡೊಂಬಯ ಬಿ. ಅರಳ ನಿರೂಪಿಸಿ, ವಂದಿಸಿದರು.

ಶಿಲಾನ್ಯಾಸ 
ಅರಳ ಗ್ರಾಮ ಪಂಚಾಯತ್‌ 20 ಲಕ್ಷ ರೂ. ವೆಚ್ಚದ ಮೇಲಂತಸ್ತಿನ ಕಟ್ಟಡ, 5 ಲಕ್ಷ ರೂ. ವೆಚ್ಚದ ಪಾಚಿಲೋಡಿ-ಸಂಗಬೆಟ್ಟು ಕಾಂಕ್ರೀಟು ರಸ್ತೆ, 10 ಲಕ್ಷ ರೂ. ವೆಚ್ಚದ ಅರಳ ಕೋಟೆ ಕಾಂಕ್ರೀಟು ರಸ್ತೆ ಕಾಮಗಾರಿಗೆ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ