‘ದೇವರ ಸನ್ನಿಧಿಯಲ್ಲಿ ಸಂಸ್ಕಾರ ನೀಡುವ ಕಾರ್ಯ ಶ್ಲಾಘನೀಯ’

Team Udayavani, Feb 7, 2019, 9:15 AM IST

ವಿಟ್ಲಮುಟ್ನೂರು : ಮುಖ್ಯ ರಸ್ತೆಯಿಂದ ಗ್ರಾಮದೊಳಗೆ ಪ್ರವೇಶಿಸುವ ಸಂದರ್ಭ ವಿಭಿನ್ನ ಲೋಕವನ್ನು ಪ್ರವೇಶಿಸಿದಂತಾಗುತ್ತದೆ. ಅಹಂಭಾವ ತೊರೆದು ತ್ಯಾಗ ಪೂರ್ಣ ಸೇವೆ ಪರಿಪೂರ್ಣತೆ ಸಾಧಿಸುತ್ತದೆ. ರಾಜಮನೆತನದವರಲ್ಲಿ ಸ್ವಾತಂತ್ರ್ಯದ ಕಿಚ್ಚು ಇದ್ದ ಕಾರಣ ದಿಟ್ಟತನದಿಂದ ಇರಲು ಸಾಧ್ಯವಾಗಿದೆ. ಜಾತಿ-ಮತ ಭೇದವಿಲ್ಲದೆ ದೇವರ ಸನ್ನಿಧಿಯಲ್ಲಿ ಸಂಸ್ಕಾರ ನೀಡುವ ಕಾರ್ಯ ಶ್ಲಾಘನೀಯ ಎಂದು ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಹೇಳಿದರು.

ಅವರು ಬುಧವಾರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ ಹಾಗೂ ಶಿಬರಿಕಲ್ಲ ಮಾಡ ಶ್ರೀ ಮಲರಾಯ- ಮೂವರ್‌ ದೈವಂಗಳ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಉಗ್ರಾಣ, ಪ್ರಾಕ್ತನ ವಸ್ತುಸಂಗ್ರಹಾಲಯ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭ ತುಕಾರಾಮ ಪೂಜಾರಿ ಅವರನ್ನು ಸಮಿತಿ ವತಿಯಿಂದ ಸಮ್ಮಾನಿಸಲಾಯಿತು.

ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು ಧ್ವಜಾರೋಹಣ ನೆರವೇರಿಸಿದರು. ದೇಗುಲ ಜೀರ್ಣೋ ದ್ಧಾರ ಸಮಿತಿ ಅಧ್ಯಕ್ಷ ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಕರ್ಗಲ್ಲು ನೂಜಿ ಮನೆತನ ಕೆ.ಟಿ. ವೆಂಕಟೇಶ್ವರ ನೂಜಿ, ಕುಳ ಮನೆತನದ ರವೀಂದ್ರ ಅಡ್ಯಂತಾಯ, ಕುಂಡಡ್ಕ ಕುಡ್ವ ಮನೆತನದ ಯೋಗೀಶ ಕುಡ್ವ, ಕುಂಡಡ್ಕ ಮನೆತನದ ಯಾಮಿನಿ ಶ್ರೀದೇವಿ ಅಮರ್‌ ಜಿತ್‌ ಮಲ್ಲಿ ಉಪಸ್ಥಿತರಿದ್ದರು.

ಸ್ಮರಣ ಸಂಚಿಕೆ ಪ್ರಮುಖ್‌ ಪೈಸಾರಿ ಪದ್ಮಯ್ಯ ಗೌಡ ಸ್ವಾಗತಿಸಿ, ಬ್ರಹ್ಮಕಲಶ ಸಮಿತಿ ಸಂಘಟನ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು ಪ್ರಸಾವಿಸಿದರು. ಚರಣ್‌ ಅಮೈ ಧರ್ಮನಗರ ಅಮೃತವಚನ ನಡೆಸಿದರು. ಬ್ರಿಜೇಶ್‌ ಮತ್ತು ತಂಡ ಆಶಯಗೀತೆ ಹಾಡಿದರು. ಸಭಾ ಕಾರ್ಯಕ್ರಮ ಸದಸ್ಯ ಬಾಲಕೃಷ್ಣ ಪಿ.ಆರ್‌. ಪೆಲತ್ತಿಂಜ ವಂದಿಸಿದರು. ನಾರಾಯಣ ಪೂಜಾರಿ ಪಿಲಿಂಜ ನಿರೂಪಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ