ಬೆಳ್ತಂಗಡಿ ತಾ| ಶೀಘ್ರ ಹೊಗೆ ಮುಕ್ತ: ಪೂಂಜ

Team Udayavani, Feb 7, 2019, 9:21 AM IST

ಪುಂಜಾಲಕಟ್ಟೆ: ಬೆಳ್ತಂಗಡಿ ತಾ| ಮಾಲಾಡಿ ಗ್ರಾಮದ ಬಿ.ಜೆ.ಪಿ. ಗ್ರಾ.ಪಂ. ಸಮಿತಿ ವತಿಯಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಆರ್ಹ ಫಲಾನುಭವಿಗಳಿಗೆ ಗ್ಯಾಸ್‌ ಸ್ಟವ್‌ ಮತ್ತು ಸಿಲಿಂಡರ್‌ ವಿತರಣೆ ಕಾರ್ಯಕ್ರಮ ಮಾಲಾಡಿ ಗ್ರಾಮದ ಪುರಿಯ ಶ್ರೀದೇವಿ ಭಜನ ಮಂಡಳಿ ವಠಾರದಲ್ಲಿ ಜರಗಿತು.

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಗ್ಯಾಸ್‌ ಸಿಲಿಂಡರ್‌, ಸ್ಟವ್‌ ಗಳನ್ನು ವಿತರಿಸಿ, ಪ್ರಧಾನಿಯವರ ಕನಸಿನ ಯೋಜನೆಯಿಂದ ಬೆಳ್ತಂಗಡಿ ಶೀಘ್ರ ಹೊಗೆಮುಕ್ತ ತಾ| ಆಗುವುದಲ್ಲದೆ, ತಾ|ನ ಎಲ್ಲ ಬಡ, ಮಧ್ಯಮ ವರ್ಗ ಗ್ಯಾಸ್‌ ಒಲೆ ಹೊಂದುವಂತಾಗುತ್ತದೆ ಎಂದರು.

ಮಡಂತ್ಯಾರು ಸೇ.ಸ. ಬ್ಯಾಂಕ್‌ನ ಅಧ್ಯಕ್ಷ ಅರವಿಂದ ಜೈನ್‌ ಅಧ್ಯಕ್ಷತೆ ವಹಿಸಿದ್ದರು. ಗ್ಯಾಸ್‌ ಎಜೆನ್ಸಿ ವ್ಯವಸ್ಥಾಪಕ ಎಚ್. ಮೊಹಮದ್‌ ಗ್ಯಾಸ್‌ ಸಿಲಿಂಡರ್‌ ಬಗ್ಗೆ ಮಾಹಿತಿ ನೀಡಿದರು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಬೆಳಾಲ್‌, ಗ್ರಾ.ಪಂ. ಸದಸ್ಯರಾದ ಕೃಷ್ಣ ಶೆಟ್ಟಿ, ಜಯಂತಿ ಎನ್‌., ಬಿ.ಜೆ.ಪಿ. ಕಾರ್ಯದರ್ಶಿ ರೋಹಿತ್‌ ಪೂಜಾರಿ, ಸ್ಥಾನೀಯ ಅಧ್ಯಕ್ಷ ಲಕ್ಷ್ಮಣ ಊರ್ಲ, ಹ್ಯೂಬರ್ಟ್‌ ಲೋಬೋ, ರಾಜಾರಾಮ ಶೆಟ್ಟಿ, ಪುರುಷೋತ್ತಮ ಶೆಟ್ಟಿಗಾರ್‌ ಮತ್ತಿತರ‌ರಿದ್ದರು. ಬಿಜೆಪಿ ಗ್ರಾ.ಪಂ. ಸಮಿತಿ ಅಧ್ಯಕ್ಷ ರವಿಶಂಕರ್‌ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ