ಬಿ.ಸಿ. ರೋಡ್‌ನ‌ಲ್ಲಿ ಸ್ವಾಗತ ದ್ವಾರ ಉದ್ಘಾಟನೆ

Team Udayavani, Feb 8, 2019, 5:53 AM IST

ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ದಲ್ಲಿ ಫೆ. 9 ರಿಂದ 18ರ ವರೆಗೆ ಬಾಹುಬಲಿಗೆ ನಡೆಯುವ ಮಹಾಮಸ್ತಕಾಭಿಷೇಕದ ಅಂಗವಾಗಿ ಬಿ.ಸಿ. ರೋಡ್‌ನ‌ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವತಿಯಿಂದ ಸ್ವಾಗತ ದ್ವಾರವನ್ನು ನಿರ್ಮಿಸಲಾಗಿದೆ.

ಸ್ವಾಗತ ದ್ವಾರವನ್ನು ಗುರುವಾರ ಬೆಳಗ್ಗೆ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್‌ ನೆಲ್ಯಾಡಿ ಉದ್ಘಾಟಿಸಿದರು. ಬಿ.ಸಿ. ರೋಡ್‌ನ‌ ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್‌ ಡಿ’ಸೋಜಾ, ಕೇಂದ್ರ ಒಕ್ಕೂಟದ ಅಧ್ಯಕ್ಷ ಮಾದವ ವಳವೂರು, ಕೇಂದ್ರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಸದಾನಂದ ನಾವೂರ, ಕೃಷ್ಣಪ್ಪ ಪೂಜಾರಿ, ಬಂಟ್ವಾಳ ವಲಯ ಅಧ್ಯಕ್ಷ ವಸಂತ ಮೂಲ್ಯ, ಬಿ.ಸಿ. ರೋಡ್‌ ವಲಯ ಅಧ್ಯಕ್ಷ ಶೇಖರ್‌ ಕಾಮಾಜೆ, ಯೋಜನಾಧಿಕಾರಿ ಜಯಾನಂದ ಪಿ. ಪ್ರಮುಖರಾದ ಪದ್ಮನಾಭ ಫರಂಗಿಪೇಟೆ, ಗಂಗಾಧರ, ಪಶುಪತಿ, ಸತ್ಯಪ್ರಸಾದ್‌, ಯತೀಶ್‌ ವಿಟ್ಲ, ದಾಮೋದರ ನಲ್ಕೆಮಾರ್‌, ವಾಮನ ಪೂಪಾಡಿಕಟ್ಟೆ, ವಾಮನ ಪಕ್ಜೆರೊಟ್ಟು, ನಿತಿನ್‌ ನಲ್ಕೆಮಾರ್‌ ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ