ಅಲ್ಪಸಂಖ್ಯಾತ ಸಮುದಾಯಗಳಿಗೆ ಬಜೆಟ್ ನಲ್ಲಿ ದಕ್ಕಿದ್ದೆಷ್ಟು?

Team Udayavani, Feb 8, 2019, 12:12 PM IST

ಬೆಂಗಳೂರು: ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕೆಲವೊಂದು ಯೋಜನೆಗಳನ್ನು ಘೋಷಿಸಲಾಗಿದ್ದು ಅದಕ್ಕಾಗಿ ಮುಖ್ಯಮಂತ್ರಿಯವರು ಆಯ-ವ್ಯಯದಲ್ಲಿ ಮೀಸಲಿಟ್ಟಿರುವ ಮೊತ್ತ ಈ ಕೆಳಗಿನಂತಿದೆ.

1) ಮುಸ್ಲಿಂ ಸಮುದಾಯದಲ್ಲಿ ಆಧುನಿಕ ಶಿಕ್ಷಣ ಮತ್ತು ವೈಜ್ಞಾನಿಕ ಮನೋಭಾವ ಉತ್ತೇಜನಕ್ಕೆ ಮೌಲಾನ ಆಝಾದ್ ಟ್ರಸ್ಟ್ ಸ್ಥಾಪನೆಗೆ ಒಂದಾವರ್ತಿಯಾಗಿ 25 ಕೋಟಿ ರೂಪಾಯಿ ಅನುದಾನ.

2) ದಾವಣಗೆರೆ, ತುಮಕೂರು, ಗದಗ, ಧಾರವಾಡ, ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಹೊಸದಾಗಿ 5 ಮೊರಾರ್ಜಿ ದೇಸಾಯಿ ಮುಸ್ಲಿಂ ಹೆಣ್ಣುಮಕ್ಕಳ ವಸತಿ ಶಾಲೆ ಪ್ರಾರಂಭಿಸಲು 20 ಕೋಟಿ ರೂಪಾಯಿ ಅನುದಾನ.

3) ರಾಜ್ಯದಲ್ಲಿರುವ ಮುಸ್ಲಿಂ ಖಬ್ರಸ್ಥಾನಗಳಲ್ಲಿ (ಸ್ಮಶಾನ) ಮೂಲಭೂತ ಸೌಕರ್ಯ ಅಭಿವೃದ್ಧಿಗೆ 10 ಕೋಟಿ ರೂಪಾಯಿ ಅನುದಾನ.

4) ಶ್ರೀ ಗುರುನಾನಕ್ ದೇವ್ ರವರ 550ನೇ ಜನ್ಮದಿನೋತ್ಸವ ಅಂಗವಾಗಿ ಬೀದರ್ ನ ಐತಿಹಾಸಿಕ ಗುರುನಾನಕ್ ಜೀರಾ ಗುರುದ್ವಾರಕ್ಕೆ 10 ಕೋಟಿ ರೂ. ಹಾಗೂ ಬೆಂಗಳೂರಿನ ಹಲಸೂರು ಗುರುದ್ವಾರಕ್ಕೆ 25 ಕೋಟಿ ರೂಪಾಯಿಗಳ ಅನುದಾನ.

5) ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ಅದಕ್ಕೆ 200 ಕೋಟಿ ರೂ. ಅನುದಾನ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ