• ಮೇಷ

  ಆರೋಗ್ಯದಲ್ಲಿ ಏರುಪೇರು ತೋರಿ ಬಂದೀತು. ಶತ್ರುಗಳ ಕಿರುಕುಳದಿಂದ ಕಾರ್ಯಹಾನಿಯಾದೀತು. ಸಾಂಸಾರಿಕವಾಗಿ ಸಮಸ್ಯೆಗಳನ್ನು ನೀವೇ ಬಗೆಹರಿಸುವುದು ಉತ್ತಮ. ಮನೆಯಲ್ಲಿ ಗೃಹೋಪಕರಣ ಖರೀದಿ ನಡೆದೀತು.

 • ವೃಷಭ

  ಮಾತು ಕಡಿಮೆ ಇದ್ದಷ್ಟು ಉತ್ತಮ. ಮನ ದನ್ನೆಯ ಮನದಿಂಗಿತಕ್ಕೆ ಬೆಲೆಕೊಡಿರಿ. ಆಗಾಗ ಆರ್ಥಿಕ ಧನಾಗಮನದಿಂದ ಕಾರ್ಯಸಾಧನೆಯಾಗಲಿದೆ. ಹಿರಿಯರಿಗೆ ಪ್ರವಾಸ ಯಾತ್ರೆ. ವಿನೋದಾದಿಗಳಿಂದ ಸಂತಸವು ಸಿಗಲಿದೆ.

 • ಮಿಥುನ

  ವೃತ್ತಿನಿರತರಿಗೆ ಮೇಲಧಿಕಾರಿಗಳಿಂದ ಶ್ಲಾಘನೆ ದೊರಕಲಿದೆ. ಮುಂಗೋಪದಿಂದ, ದುಡುಕಿನಿಂದ ಕಾರ್ಯ  ಭಂಗವಾದೀತು. ವಿದ್ಯಾರ್ಥಿಗಳಿಗೆ ವಿದ್ಯಾಪ್ರಗತಿಯಿಂದ ಹರುಷ ತರಲಿದೆ. ಇಷ್ಟಮಿತ್ರರ ವಿರೋಧದಿಂದ ಬೇಸರ ಬಂದೀತು.

 • ಕಟಕ

  ಮಕ್ಕಳ ವಿವಾಹ ವಿಷಯವಾಗಿ ಓಡಾಟ ವಿರುತ್ತದೆ. ಹಾಗೆ ಕಾರ್ಯಸಿದ್ಧಿಯಾದೀತು. ವಿದ್ಯಾರ್ಥಿಗಳಿಗೆ ತೃಪ್ತಿಕರ ಫ‌ಲಿತಾಂಶದಿಂದ ಸಮಾಧಾನ. ನನೆಗುದಿಗೆಬಿದ್ದ ನ್ಯಾಯಾಲಯದ ವಿವಾದವೂ ರಾಜಿಯಲ್ಲಿ ಮುಕ್ತಾಯವಾಗಲಿದೆ.

 • ಸಿಂಹ

  ಶೈಕ್ಷಣಿಕ ಕ್ಷೇತ್ರದ ವೃತ್ತಿ ನಿರತರಿಗೆ ಆಗಾಗ ಆರ್ಥಿಕ ಅಡಚಣೆಗಳು ತೋರಿ ಬರುತ್ತವೆ. ಕಾರ್ಯಭಾರ ಅಧಿಕ ವಾಗಲಿದೆ. ವರ್ಗಾವಣೆಯ ಸಾಧ್ಯತೆ ಇರುತ್ತದೆ. ಅಲರ್ಜಿಯಂತಹ ದೇಹಪೀಡೆಯಿಂದ ಆರೋಗ್ಯ ಹಾನಿಯಾಗಲಿದೆ.

 • ಕನ್ಯಾ

  ಸಾಂಸಾರಿಕವಾಗಿ ಪುಣ್ಯಕಾರ್ಯಗಳು ನಡೆದಾವು. ಉದ್ಯೋಗಿಗಳಿಗೆ ಮುಂಭಡ್ತಿಯ ಯೋಗವಿದೆ. ಯುವತಿಯರಿಗೆ ಉತ್ತಮ ಕಂಕಣಬಲ ಪ್ರಾಪ್ತಿ ಇದೆ. ಸ್ಥಗಿತಗೊಂಡ ಕೆಲಸಕಾರ್ಯಗಳು ಪುನಃ ಆರಂಭಗೊಂಡು ಸಮಾಧಾನ ತರಲಿವೆ.

 • ತುಲಾ

  ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆ ಇರಲಿ. ಮುಖ್ಯವಾಗಿ ಜೀರ್ಣಕ್ರಿಯೆಯಲ್ಲಿ ಭಾದಕ ಬರಲಿದೆ. ಉದ್ಯೋಗಾಕಾಂಕ್ಷಿ ಗಳಿಗೆ ಉದ್ಯೋಗ ಲಾಭವಿದೆ. ಹಿರಿಯರ ಆಶೀರ್ವಾದದ ರಕ್ಷೆಯನ್ನು ಗುರು ತೋರಿಸಿಯಾನು. ದಿನಾಂತ್ಯ ಶುಭವಿದೆ.

 • ವೃಶ್ಚಿಕ

  ಹಿರಿಯರ ವೃತ್ತಿರಂಗದಲ್ಲಿ ಸ್ಥಾನಪಲ್ಲಟ ಯೋಗವಿದೆ. ಸಾಂಸಾರಿಕವಾಗಿ ಹೊಂದಾಣಿಕೆಯೇ ಜೀವನ ವಾಗಲಿದೆ. ಅನೇಕ ಬಗೆಯ ಖರ್ಚುವೆಚ್ಚಗಳು ಬಾಧಿಸಲಿವೆ. ಶುಭಮಂಗಲ ಕಾರ್ಯಗಳಿಗಾಗಿ ಓಡಾಟವಿದೆ. ಅತಿಥಿಗಳು ಬಂದಾರು.

 • ಧನು

  ದೇಹಾರೋಗ್ಯದಲ್ಲಿ ಉಷ್ಣಪೀಡೆ. ಸ್ವಾಭಿಮಾನಿ ಗಳಾದ ನೀವು ತುಂಬಾ ತಾಳ್ಮೆಯನ್ನು ವಹಿಸ ಬೇಕು. ಮನೆಯಲ್ಲಿ ಕಳ್ಳಕಾಕರ ಭಯ ತೋರಿ ಬರಲಿದೆ. ಆದಾಯ ವಿದ್ದರೂ ಖರ್ಚುವೆಚ್ಚದಲ್ಲಿ ಮಿತಿ ಇರಲಿ. ಕಿರು ಪ್ರಯಾಣವಿದೆ.

 • ಮಕರ

  ವೇತನದಲ್ಲಿ ಭಡ್ತಿ ತಂದೀತು. ದಂಪತಿಗಳಲ್ಲಿ ವಿರಹ ಕಂಡು ಬರಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಸಿಗಲಿದೆ. ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಪ್ರಾಪ್ತಿಯಾದೀತು. ಸಂಚಾರದಲ್ಲಿ ದೇಹಾರೋಗ್ಯ ಕೆಡಲಿದೆ.

 • ಕುಂಭ

  ಸಾಂಸಾರಿಕ ಬಾಂಧ‌ವ್ಯದ ಸಮಸ್ಯೆಗಳು ಒಂದೊಂದಾಗಿ ಪರಿಹಾರವಾಗಲಿವೆ. ನವ ವಿವಾಹಿತರಿಗೆ ಸಂತಾನಭಾಗ್ಯ ತೋರಿ ಬಂದೀತು. ಅಧಿಕಾರಿ ವರ್ಗದಲ್ಲಿ ಆಗಾಗ ಮನಸ್ತಾಪಗಳಿರುತ್ತದೆ. ವಿದೇಶಯಾನಕ್ಕೆ ಅಡ್ಡಿ ಆತಂಕ.

 • ಮೀನ

  ಆರ್ಥಿಕವಾಗಿ ಉನ್ನತಿ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಮಕ್ಕಳ ವಿಚಾರವಾಗಿ ಸಮಸ್ಯೆಗಳು ಕಿರಿಕಿರಿ ಎನಿಸಲಿವೆ. ಆರ್ಥಿಕವಾಗಿ ಖರ್ಚುವೆಚ್ಚಗಳನ್ನು ಅತೀ ಜಾಗ್ರತೆಯಿಂದ ನಿಭಾಯಿಸಿರಿ. ದಿನಾಂತ್ಯದಲ್ಲಿ ಶುಭ.

ಹೊಸ ಸೇರ್ಪಡೆ