• ಮೇಷ

  ಚಿಂತಿತ ಕೆಲಸಕಾರ್ಯಗಳು ಅಡೆತಡೆಗಳಿಂದಲೇ ಪೂರ್ಣವಾಗುತ್ತವೆ. ಸಾಂಸಾರಿಕವಾಗಿ ಮಹಿಳೆಯರು ಅನಾವಶ್ಯಕವಾಗಿ ಮನೋವ್ಯಾಕುಲತೆಗೆ ಗುರಿಯಾಗಲಿದ್ದಾರೆ. ತಾಳ್ಮೆ ಸಮಾಧಾನವಿರಲಿ. ನಿರುದ್ಯೋಗಿಗಳಿಗೆ ಸಣ್ಣ ಆಸೆಯೂ ಕಮರಿ ಹೋದೀತು. ಗೃಹದಲ್ಲಿ ಶುಭಮಂಗಲ ಕಾರ್ಯಗಳ ಸಡಗರ, ಸಂಭ್ರಮ ಸೃಷ್ಟಿಸಲಿದೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಮರೆವಿಗಾಗಿ ಪಶ್ಚಾತ್ತಾಪ ಪಡುವಂತಾದೀತು. ಉದ್ಯೋಗಿಗಳಿಗೆ ಹೊಸ ಉದ್ಯೋಗಗಳ ಅವಕಾಶ ಒದಗಿಬರುತ್ತದೆ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ವೈವಾಹಿಕ ಬಂಧನಕ್ಕೆ ಪೂರಕವಾದಾವು. ಶುಭವಾರ: ಬುಧ, ಗುರು, ಶನಿವಾರ.

 • ವೃಷಭ

  ಆರ್ಥಿಕವಾಗಿ ಆದಾಯದಷ್ಟೇ ಖರ್ಚು-ವೆಚ್ಚಗಳಿರುತ್ತವೆ. ವೃತ್ತಿರಂಗ ದಲ್ಲಿ ನಿರೀಕ್ಷಿತ ಪ್ರಮೋಶನ್‌ ಸದ್ಯದಲ್ಲೇ ಒದಗಿಬಂದೀತು. ಉದ್ಯೋಗಿಗಳು ಹೊಸ ಉದ್ಯೋಗದ ಅವಕಾಶಗಳನ್ನು ಕೂಡಾ ಪಡೆಯ ಬಹುದಾಗಿದೆ. ಸಾಂಸಾರಿಕವಾಗಿ ಬೇಕುಬೇಡಗಳ ತಾಕಲಾಟ ತಂದಾವು. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಹುಡುಕಿಕೊಂಡು ಬಂದಾವು. ಸದುಪಯೋಗಿಸಿಕೊಳ್ಳಿರಿ. ವಿದ್ಯಾರ್ಥಿಗಳ ಅಭ್ಯಾಸ ಈ ವಾರ ನಿಧಾನಗತಿಯಲ್ಲಿ ನಡೆಯಲಿದೆ. ಹಿರಿಯರಿಗೆ ಅಧ್ಯಾತ್ಮಿಕ ಕ್ಷೇತ್ರದಲ್ಲಿ ಆಸಕ್ತಿ ತೋರಿ ಬರುವುದು. ಶುಭವಾರ: ಮಂಗಳ, ಗುರು, ಭಾನುವಾರ.

 • ಮಿಥುನ

  ಜೀವನದಲ್ಲಿ ಎದುರಾಗುವ ಸೋಲು, ನಿರಾಶೆಗಳಿಗೆ ಮನಸ್ಸು ಘಾಸಿಗೊಳ್ಳದಂತೆ ಹೃದಯವನ್ನು ಗಟ್ಟಿಗೊಳಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಸಹವಾಸ ದೋಷದಿಂದ ನಿರ್ಲಕ್ಷ್ಯ ತಳೆಯುವಂತಾಗುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆ ಪ್ರಶಂಸೆಗೆ ಸಾಧಕವಾಗಲಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯವಿರುವುದು. ದುಡುಕದಿರಿ. ಅನಿರೀಕ್ಷಿತ ಶುಭವಾರ್ತೆ ಸಿಹಿ ತಿನ್ನಿಸಲಿದೆ. ಆರ್ಥಿಕವಾಗಿ ಹಣಕಾಸಿನ ಲೆಕ್ಕಾಚಾರದಲ್ಲಿ ಹೆಚ್ಚಿನ ಗಮನ ಹರಿಸುವುದು ಅಗತ್ಯವಾಗಿದೆ. ಶುಭವಾರ: ಸೋಮ, ಗುರು, ಶನಿವಾರ.

 • ಕಟಕ

  ವಿಚಾರ ವಿನಿಮಯದಿಂದ ಕಾರ್ಯಾನುಕೂಲಕ್ಕೆ ಸುಲಭವಾಗುತ್ತದೆ. ಶುಭಾಶಯಕ್ಕಾಗಿ ಶುಭಮಂಗಲ ಕಾರ್ಯಗಳ ಓಡಾಟ ತಂದೀತು. ವಿದ್ಯಾರ್ಥಿಗಳಿಗೆ ಉತ್ಸಾಹದ ವಾತಾವರಣ ಮುನ್ನಡೆಗೆ ಸಾಧ್ಯವಾಗುತ್ತದೆ. ನಿರುದ್ಯೋಗಿಗಳಿಗೆ ಅವಕಾಶಗಳ ಬಗ್ಗೆ ಪಾಸಿಟಿವ್‌ ರಿಪ್ಲೆ„ ಸಿಗಲಿದೆ. ಯುವಪ್ರೇಮಿಗಳಿಗೆ ಪ್ರೀತಿಯ ಡೆನಿಶನ್‌ ಕೂಡಾ ಅರ್ಥವಾಗದೆ, ಒದ್ದಾಡುವ ಪರಿಸ್ಥಿತಿ ತೋರಿಬಂದೀತು. ಆರ್ಥಿಕವಾಗಿ ಧನಸಂಗ್ರಹ ಉತ್ತಮವಿದ್ದರೂ ಖರ್ಚುವೆಚ್ಚಗಳ ಬಗ್ಗೆ ಯೋಚಿಸುವಂತಾ ದೀತು. ಹೊಸ ಚಿಂತನೆ, ಹೊಸ ಕಾರ್ಯಗಳ ಆರಂಭಕ್ಕೆ ಇದು ಸಕಾಲ. ಶುಭವಾರ: ಗುರು, ಶುಕ್ರ, ಶನಿವಾರ.

 • ಸಿಂಹ

  ಜಾಗ ಖರೀದಿ ಮಾಡುವ ಜಾಣತನ ತೋರಿಬಂದು ಅನುಕೂಲವಾಗಲಿದೆ. ದಂಪತಿಗಳ ಭಿನ್ನಾಭಿಪ್ರಾಯ ತಿಕ್ಕಾಟಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗಿ ಕೃತಜ್ಞತೆ ಸಲ್ಲಿಸುವಂತಾದೀತು. ವಿದ್ಯಾರ್ಥಿಗಳು ಸ್ನೇಹಿತ ವರ್ಗದವರ ಒಳಸಂಚಿಗೆ ಬಲಿಪಶುವಾಗ ಲಿದ್ದಾರೆ. ಜಾಗ್ರತೆ ವಹಿಸಿರಿ. ಅಧಿಕಾರಿ ವರ್ಗದವರ ಭ್ರಷ್ಟತೆಯ ಮುಖವಾಡ ಕಳಚಿ ಬೀಳಲಿದೆ. ಸಾಂಸಾರಿಕವಾಗಿ ಹೆಂಡತಿಯ ಸಹಕಾರ ಮುನ್ನಡೆಗೆ ಅನುಕೂಲವಾಗಲಿದೆ. ಶುಭವಾರ: ಬುಧ, ಗುರು, ಶುಕ್ರವಾರ.

 • ಕನ್ಯಾ

  ಏಕಾದಶದ ರಾಹುಬಲದಿಂದ ನಿರೀಕ್ಷಿತ ರೀತಿಯಲ್ಲಿ ಪರಿವರ್ತನೆ ಕಂಡುಬರಲಿದೆ. ಮನೆಯಲ್ಲಿ ವಿವಾಹಾದಿ ಶುಭಮಂಗಲ ಕಾರ್ಯದ ಚಿಂತನೆ ನಡೆಯಲಿದೆ. ವ್ಯಾಪಾರಿ ವರ್ಗದವರಿಗೆ ಆರ್ಥಿಕವಾಗಿ ಹೂಡಿಕೆಗಳು ಅಭಿವೃದ್ಧಿ ದಾಯಕವಾದೀತು. ಹೊಸ ಕಟ್ಟಡ, ಭೂಖರೀದಿಗೆ ಇದು ಸಕಾಲವಾದೀತು. ವೃತ್ತಿನಿರತರಿಗೆ ಹಿರಿಯ ಅಧಿಕಾರಿ ವರ್ಗದವರಿಂದ ಸಹಕಾರ, ಪ್ರಶಂಸೆ ಸಲ್ಲಲಿದೆ. ಒಮ್ಮೊಮ್ಮೆ ಹಿಡಿತವಿಲ್ಲದ ಮಾತುಗಳು ಭಿನ್ನಾಭಿಪ್ರಾಯಕ್ಕೆ ಕಾರಣವಾಗಿ ನಿಷ್ಠುರ ತಂದೀತು. ಶುಭವಾರ: ಶುಕ್ರ, ಶನಿ, ಭಾನುವಾರ.

 • ತುಲಾ

  ನಿಮ್ಮ ಕ್ರಿಯಾಶೀಲತೆ, ಪ್ರೌಢಿಮೆ, ಪರಿಶ್ರಮಗಳನ್ನು ನಗದೀಕರಿಸುವ ವಾರವಿದು. ಸದುಪಯೋಗಿಸಿಕೊಳ್ಳಿರಿ. ಬದುಕಿನ ಕಷ್ಟಸಂಕಟಗಳ ಅನುಭವ ನಿಮಗೆ ಪಾಠವಾಗಲಿದೆ. ವಿವಾಹದ ಮುನ್ನವೇ ಪ್ರೇಮ ಪ್ರಸಂಗವನ್ನು ಯುವಕ-ಯುವತಿಯರು ಅನುಭವಿಸುವಂತಾದೀತು. ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳಿರಿ. ಸಾರ್ವಜನಿಕವಾಗಿ ನಿಮ್ಮ ಪ್ರತಿಭೆ ಗುರುತಿಸುವಂತಾಗುತ್ತದೆ. ಹಾಗೂ ಸೂಕ್ತ ಸ್ಥಾನಮಾನ, ಗೌರವವು ನಿಮ್ಮದಾದೀತು. ಆರ್ಥಿಕ ಸ್ಥಿತಿ ಅಭಿವೃದ್ಧಿಗೊಳ್ಳುತ್ತಾ ಹೋದರೂ ನಿಮ್ಮ ಮನಸ್ಸಿಗೆ ತೃಪ್ತಿ ನೀಡದು. ಶುಭವಾರ: ಸೋಮ, ಗುರು, ಭಾನುವಾರ.

 • ವೃಶ್ಚಿಕ

  ಅನಾವಶ್ಯಕ ಚಿಂತೆಗಳಿಂದ ತಲೆನೋವು ಬರಿಸಿಕೊಳ್ಳುವಂತಾದೀತು.ಅಧಿಕ ರಕ್ತದೊತ್ತಡ, ಮಧುಮೇಹಗಳಿಂದ ಬಳಲುವವರು ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ವ್ಯಾಪಾರ, ವ್ಯವಹಾರ, ಹೂಡಿಕೆ, ಒಪ್ಪಂದಗಳ ಬಗ್ಗೆ ವಂಚನೆಗಳು ಅನುಭವಕ್ಕೆ ಬಂದಾವು. ಹಾಗೆ ವೃತ್ತಿರಂಗದಲ್ಲಿ ತುಂಬಾ ಜಾಗರೂಕತೆ ಅಗತ್ಯವಿದೆ. ಅವಿವಾಹಿತರಿಗೆ ಸಮಸ್ಯೆಗಳು ವಿವಾಹ ಭಾಗ್ಯಕ್ಕೆ ಅಡ್ಡಿಯಾಗಲಿದೆ. ನಿರುದ್ಯೋಗಿಗಳಿಗೆ ಇತರರ ಅಣಕಿಸುವ ನಗು ಸ್ವಾಭಿಮಾನಕ್ಕೆ ಭಂಗ ತಂದೀತು. ತಾಳ್ಮೆ ವಹಿಸಿರಿ. ಶುಭವಾರ: ಸೋಮ, ಬುಧ, ಭಾನುವಾರ.

 • ಧನು

  ಕಾರ್ಯರಂಗದಲ್ಲಿ ಪರಿಚಯಸ್ಥರಿಂದಲೇ ಕಾರ್ಯಸಾಧನೆಯಾಗಲಿದೆ. ನಿಮ್ಮ ಪ್ರಯತ್ನಬಲ, ಆತ್ಮವಿಶ್ವಾಸ ಸದ್ಯದಲ್ಲೇ ಫ‌ಲ ನೀಡಲಿದೆ. ಮಾನಸಿಕ ಧೈರ್ಯ ಕಳೆದುಕೊಳ್ಳಬೇಡಿರಿ. ಧಾರ್ಮಿಕ-ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಆಸಕ್ತಿ ಹೆಚ್ಚಲಿದೆ. ಆರ್ಥಿಕ ಸಂಕಷ್ಟ ಬಹಳ ಇದ್ದರೂ ಆಗಾಗ ಧನಾಗಮನದಿಂದ ಸಮಾಧಾನ ತಂದೀತು. ಮಿತ್ರವರ್ಗದವರಿಂದ ಸಹಕಾರ ಕೂಡಿಬರಲಿದೆ. ಕೆಲವೊಂದು ಸಂದರ್ಭ ಗಳಲ್ಲಿ ಸಾಂಸಾರಿಕವಾಗಿ ಟೀಕೆಗೆ ಗುರಿಯಾಗಲಿದ್ದೀರಿ. ದೂರ ಸಂಚಾರದಲ್ಲಿ, ವಾಹನ ಚಾಲನೆಯಲ್ಲಿ ಅತೀ ಎಚ್ಚರಿಕೆ ವಹಿಸಿರಿ. ಶುಭವಾರ: ಶುಕ್ರ, ಶನಿ, ಸೋಮವಾರ.

 • ಮಕರ

  ಯೋಗ್ಯ ವಯಸ್ಕರಿಗೆ ಒಂಟಿತನದ ಕಷ್ಟ ಸದ್ಯದಲ್ಲೇ ನಿವಾರಣೆ ಯಾಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ವೃತ್ತಿ ಭವಿಷ್ಯವನ್ನು ನೀವೇ ನಿರ್ಧರಿಸಿ ಕೊಳ್ಳುವ ಸಂದರ್ಭಗಳು ತೋರಿಬರುತ್ತವೆ. ವ್ಯಾಪಾರಿ ವರ್ಗದವರ ದುಡುಕು ನಿರ್ಧಾರ ಆರ್ಥಿಕ ಸ್ಥಿತಿಯನ್ನು ಏರುಪೇರು ಮಾಡಲಿದೆ. ವಿದ್ಯಾರ್ಥಿಗಳಿಗೆ ಬದಲಾವಣೆಯ ಸಾಧ್ಯತೆ ಮುನ್ನಡೆಗೆ ಅನುಕೂಲವಾಗುತ್ತದೆ. ಸಾಂಸಾರಿಕವಾಗಿ ಸಮಾಧಾನವಿದ್ದರೂ ತಲೆಬಿಸಿ ತಪ್ಪದು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವೂ ನಿಧಾನಗತಿಯಲ್ಲಿ ನಡೆಯಲಿದೆ. ಆರೋಗ್ಯದಲ್ಲಿ ಏರುಪೇರು ಕಂಡುಬರುವುದು. ಶುಭವಾರ: ಮಂಗಳ, ಬುಧ, ಶುಕ್ರವಾರ.

 • ಕುಂಭ

  ಸಾಂಸಾರಿಕವಾಗಿ ಕೆಲವೊಂದು ವಿಚಾರಗಳ ಅನವಶ್ಯಕತೆ ಯೋಚಿಸು ವಂತಾಗಲಿದೆ. ಹಿರಿಯರ ಜಂಜಾಟದಿಂದ ಆಗಾಗ ಮಾನಸಿಕ ಕಿರಿಕಿರಿಯನ್ನು ಅನುಭವಿಸುವ ಪರಿಸ್ಥಿತಿ ಇದ್ದೇ ಇರುತ್ತದೆ. ತಾಳ್ಮೆ ಸಮಾಧಾನ ಇಲ್ಲದೆ ಎದುರಿಸುವ ಛಾತಿತನ ತೋರಿಸಬೇಕಾಗುತ್ತದೆ. ಯೋಗ್ಯ ಸಂಬಂಧಗಳು ಅವಿವಾಹಿತರ ಕಂಕಣಬಲಕ್ಕೆ ಪ್ರಾಪ್ತಿಯಾಗುತ್ತವೆ. ಹೊಸ ವ್ಯಾಪಾರ, ವ್ಯವಹಾರಗಳು ಸದ್ಯದ ಸ್ಥಿತಿಯಲ್ಲಿ ಫ‌ಲಕಾರಿಯಲ್ಲ. ಆರ್ಥಿಕವಾಗಿ ಖರ್ಚು-ವೆಚ್ಚಗಳ ಬಗ್ಗೆ ಕಡಿವಾಣ ಹಾಕಿಕೊಳ್ಳಬೇಕಾಗುತ್ತದೆ. ಶುಭವಾರ: ಗುರು, ಶುಕ್ರ, ಶನಿವಾರ.

 • ಮೀನ

  ಅವಿಭಕ್ತ ಕುಟುಂಬದವರಿಗೆ ಹೊಂದಾಣಿಕೆ ಅಗತ್ಯವಿದೆ. ನಿರುದ್ಯೋಗಿಗಳಿಗೆ ಅನಿಶ್ಚಿತತೆ ದೂರವಾಗಲಿದೆ. ಅವಿವಾಹಿತರಿಗೆ ತಪ್ಪಿ ಹೋದ ಸಂಬಂಧಗಳು ಪುನಃ ಒದಗಿಬಂದಾವು. ಸಾಂಸಾರಿಕವಾಗಿ ಆಗಾಗ ಕಿರಿಕಿರಿಯೆನಿಸಿದರೂ ದೈವಾನುಗ್ರಹದಿಂದ ಉಪಶಮನವಾಗುತ್ತದೆ. ಆಕಸ್ಮಿಕ ಖರ್ಚು-ವೆಚ್ಚಗಳು ಆತಂಕ ತಂದಾವು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರ್ಲಕ್ಷ್ಯ ಹಂತ ಹಂತವಾಗಿ ಕಡಿಮೆಯಾಗಲಿದೆ. ಮುಖ್ಯವಾಗಿ ವಾಹನ ಸಂಚಾರದಲ್ಲಿ ಚಾಲನೆ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ.ಶುಭವಾರ: ಬುಧ, ಶುಕ್ರ, ಶನಿವಾರ.

ಹೊಸ ಸೇರ್ಪಡೆ