ಆರಂಭಿಕ ಹಿನ್ನಡೆಯ ಬಳಿಕ ಚೇತರಿಕೆ: ಸೆನ್ಸೆಕ್ಸ್‌ 47 ಅಂಕ ಏರಿಕೆ

Team Udayavani, Mar 5, 2019, 5:32 AM IST

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 50ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.

ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದ ದುರ್ಬಲ ಪ್ರವೃತ್ತಿ, ಚೀನ ಆರ್ಥಿಕತೆಯಲ್ಲಿನ ನಿಧಾನ ಗತಿ ಮತ್ತು ಅಮೆರಿಕ – ಚೀನ ವಾಣಿಜ್ಯ ಮಾತುಕತೆಗಳಲ್ಲಿ ತೋರಿಬಂದಿರುವ ಎಚ್ಚರಿಕೆಯ ನಡೆ ಇವೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆಯಲ್ಲಿ ಇಂದು ಹಿನ್ನಡೆ ಕಂಡು ಬಂತು.

ಬೆಳಗ್ಗೆ 10.50ರ ಸುಮಾರಿಗೆ ಸೆನ್ಸೆಕ್ಸ್‌  ಸ್ವಲ್ಪ ಮಟ್ಟಿನ ಸುಧಾರಣೆಯನ್ನು ಕಂಡು 47.50 ಅಂಕಗಳ ಏರಿಕೆಯೊಂದಿಗೆ 37.113/1 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 25.90 ಅಂಕಗಳ ಏರಿಕೆಯೊಂದಿಗೆ 10,889.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 11 ಪೈಸೆಗಳ ಏರಿಕೆಯನ್ನು ದಾಖಲಿಸಿ 70.81 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. 

https://beta.udayavani.com/news-section/business-news/bse-jumps-379-points-nifty-nears-11000-level

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ