ಮುಂಬಯಿ ಶೇರು 196 ಅಂಕ ಜಿಗಿತ; ನಿಫ್ಟಿ 10,863ರ ಮಟ್ಟಕ್ಕೆ

Team Udayavani, Mar 1, 2019, 10:53 AM IST

ಮುಂಬಯಿ : ಮಾರ್ಚ್‌ ತಿಂಗಳ ವಾಯಿದೆ ವಹಿವಾಟು ಸರಣಿಗೆ ಶುಭಾರಂಭ ದೊರಕಿರುವುದರ ಸೂಚನೆಯಾಗಿ ಇಂದು ಶುಕ್ರವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 196.37 ಅಂಕಗಳ ಜಿಗಿತದೊಂದಿಗೆ 36,063.81 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 71 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,863.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಭಾರತ – ಪಾಕ್‌ ಉದ್ವಿಗ್ನತೆಯ ಹೊರತಾಗಿಯೂ ವಿದೇಶಿ ಬಂಡವಾಳ ಭಾರತೀಯ ಶೇರು ಮಾರುಕಟ್ಟೆಗೆ ಹರಿದು ಬರುತ್ತಿರುವ ಕಾರಣ ಬ್ಯಾಂಕಿಂಗ್‌, ಮೆಟಲ್‌, ಐಟಿ ಮುಂತಾದ ರಂಗಗಳ ಶೇರುಗಳು ಇಂದು ಉತ್ತಮ ಖರೀದಿಯನ್ನು ಕಂಡವು. 

ಇಂದಿನ ಟಾಪ್‌ ಗೇನರ್‌ಗಳು : ಝೀ ಎಂಟರ್‌ಟೇನ್‌ಮೆಂಟ್‌, ಎಚ್‌ಪಿಸಿಎಲ್‌, ಎಸ್‌ ಬ್ಯಾಂಕ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಇಂಡಿಯಾ ಬುಲ್ಸ್‌  ಹೌಸಿಂಗ್‌; ಟಾಪ್‌ ಲೂಸರ್‌ಗಳು : ಭಾರ್ತಿ ಏರ್‌ಟೆಲ್‌, ಬಜಾಜ್‌ ಆಟೋ, ಎಕ್ಸಿಸ್‌ ಬ್ಯಾಂಕ್‌, ಏಶ್ಯನ್‌ ಪೇಂಟ್ಸ್‌, ಯುಪಿಎಲ್‌. 

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು  2,706 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,906 ಶೇರುಗಳು ಮುನ್ನಡೆ ಸಾಧಿಸಿದವು; 666 ಶೇರುಗಳು ಹಿನ್ನಡೆಗೆ ಗುರಿಯಾದವು; 134 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

https://beta.udayavani.com/news-section/business-news/gst-equity-to-rs-97247-crore

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ