ಮುಂಬಯಿ ಶೇರು 379 ಅಂಕ ಜಂಪ್‌, ನಿಫ್ಟಿ 11,000ಕ್ಕೆ ನಿಕಟ

Team Udayavani, Mar 5, 2019, 11:35 AM IST

ಮುಂಬಯಿ : ದೇಶದ ಸ್ಥೂಲ ಆರ್ಥಿಕತೆ ಧನಾತ್ಮಕವಾಗಿರುವುದು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ತಕ್ಕಮಟ್ಟಿಗೆ ನಿವಾರಣೆಯಾಗಿರುವುದೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ವಹಿವಾಟನ್ನು 379 ಅಂಕಗಳ ಜಿಗಿತದೊಂದಿಗೆ 36,442 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.

ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 124 ಅಂಕಗಳ ಏರಿಕೆಯನ್ನು ದಾಖಲಿಸಿ 11,000 ಮನೋ ಪ್ರಾಬಲ್ಯದ ಮಟ್ಟಕ್ಕೆ ನಿಕಟವಾಗಿ ದಿನದ ವಹಿವಾಟನ್ನು ಮುಗಿಸಿತು.

ಇಂದಿನ ಟಾಪ್‌ ಗೇನರ್‌ಗಳಲ್ಲಿ ಟಾಟಾ ಮೋಟರ್‌ ಶೇ.7.72ರಷ್ಟು ಮತ್ತು ಹೀರೋ ಮೋಟೋ ಕಾರ್ಪ್‌ ಶೇ.5.82ರಷ್ಟು ಏರಿದರೆ ಎಕ್ಸಿಸ್‌ ಬ್ಯಾಂಕ್‌ ಶೇರು ಶೇ.4.12ರಷ್ಟು ಏರಿತು.

ಇನ್‌ಫೋಸಿಸ್‌ ಶೇರು ಶೇ.115ರಷ್ಟು ಕುಸಿದರೆ ಎಚ್‌ಯುಎಲ್‌ ಶೇ.0.62 ಮತ್ತು ಟಿಸಿಎಸ್‌ ಶೇ.0.19ರಷ್ಟು ಕುಸಿದವು. 

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು  2,784 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 2,121 ಶೇರುಗಳು ಮುನ್ನಡೆ ಸಾಧಿಸಿದವು; 563 ಶೇರುಗಳು ಹಿನ್ನಡೆಗೆ ಗುರಿಯಾದವು; 190 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

https://beta.udayavani.com/news-section/business-news/indian-stocks-further-gains-in-early-trade

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ