ಜಿಎಸ್‌ಟಿ ಸಂಗ್ರಹ 97,247 ಕೋಟಿ ರೂ.ಗೆ ಇಳಿಕೆ

Team Udayavani, Mar 2, 2019, 12:30 AM IST

ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ ಫೆಬ್ರವರಿ ತಿಂಗಳಲ್ಲಿ 97,247 ಕೋಟಿ ರೂ.ಗೆ ಇಳಿಕೆ ಕಂಡಿದೆ. ಕಳೆದ ತಿಂಗಳು 1.02 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಆದರೆ ಜಿಎಸ್‌ಟಿ ಪಾವತಿದಾರರ ಸಂಖ್ಯೆ ಹೆಚ್ಚಾಗಿದೆ ಮತ್ತು ಜಿಎಸ್‌ಟಿಆರ್‌ 3ಬಿ ಫೈಲ್‌ ಮಾಡಿದವರ ಸಂಖ್ಯೆ ಫೆಬ್ರವರಿಯಲ್ಲಿ 73.48 ಲಕ್ಷ  ಆಗಿದೆ. ಜನವರಿಯಲ್ಲಿ ಇದು 73.3 ಲಕ್ಷ ಆಗಿತ್ತು. ಹಲವು ಪ್ರಮುಖ ಸಾಮಗ್ರಿಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಿದ್ದರಿಂದಾಗಿ ಈ ಇಳಿಕೆಯಾಗಿದೆ ಎನ್ನಲಾಗಿದೆ. ವಾಹನ ಉದ್ಯಮಗಳಿಗೆ ಸಂಬಂಧಿಸಿದ ಹಲವು ಸಾಮಗ್ರಿಗಳ ಜಿಎಸ್‌ಟಿಯನ್ನು ಶೇ. 28 ರಿಂದ ಶೇ. 18 ಕ್ಕೆ ಇಳಿಸಲಾಗಿದೆ. ಪ್ರಸ್ತುತ ತ್ತೈಮಾಸಿಕದಲ್ಲಿ ಜಿಎಸ್‌ಟಿ ಸಂಗ್ರಹವು 10.70 ಲಕ್ಷ ಕೋಟಿ ರೂ. ಆಗಿತ್ತು. ಫೆಬ್ರವರಿಯಲ್ಲಿ ಸಂಗ್ರಹವಾದ ಒಟ್ಟು 97,247 ಕೋಟಿ ರೂ. ಪೈಕಿ ಕೇಂದ್ರೀಯ ಜಿಎಸ್‌ಟಿ 17,626 ಕೋಟಿ ರೂ ಹಾಗೂ ರಾಜ್ಯ ಜಿಎಸ್‌ಟಿ 24,192 ಕೋಟಿ ರೂ. ಆಗಿದೆ. ಸಂಚಿತ ಜಿಎಸ್‌ಟಿ 46,953 ಕೋಟಿ ರೂ. ಸೆಸ್‌ 8476 ಕೋಟಿ ರೂ. ಆಗಿದೆ.

https://beta.udayavani.com/news-section/business-news/bse-slips-over-50-pts-in-early-trade-on-weak-global-cues

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ