ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ 157, ನಿಫ್ಟಿ 53 ಅಂಕ ಜಿಗಿತ

Team Udayavani, Mar 6, 2019, 5:31 AM IST

ಮುಂಬಯಿ : ಮುಂಬಯಿ ಶೇರು ಪೇಟೆಯ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಸೂಚ್ಯಂಕ 157 ಅಂಕಗಳ ಏರಿಕೆಯನ್ನು ದಾಖಲಿಸಿದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 53 ಅಂಕಗಳ ಜಿಗಿತವನ್ನು ದಾಖಲಿಸಿದೆ.

ಏಶ್ಯನ್‌ ಶೇರು ಪೇಟೆಗಳಲ್ಲಿನ ತೇಜಿಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯಲ್ಲಿಂದು ಹಣಕಾಸು, ಮೆಟಲ್‌ ಮತ್ತು ಕ್ಯಾಪಿಟಲ್‌ ಗೂಡ್ಸ್‌ ರಂಗದ ಶೇರುಗಳ ಚುರುಕಿನ ಖರೀದಿ ಕಂಡು ಬಂತು.

ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್‌  137.07 ಅಂಕಗಳ ಏರಿಕೆಯೊಂದಿಗೆ 36,579.61 ಅಂಕಗಳ ಮಟ್ಟದಲ್ಲೂ ನಿಫ್ಟಿ 47.20 ಅಂಕಗಳ ಏರಿಕೆಯೊಂದಿಗೆ 11,034.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಇಂದಿನ ಆರಂಭಿಕ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್‌, ರಿಲಯನ್ಸ್‌, ವಿಪ್ರೋ, ಎಸ್‌ ಬ್ಯಾಂಕ್‌, ಐಟಿಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

ಟಾಪ್‌ ಗೇನರ್‌ಗಳು : ವಿಪ್ರೋ, ಭಾರ್ತಿ ಇನ್‌ಫ್ರಾಟೆಲ್‌, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಬಜಾಜ್‌ ಫಿನಾನ್ಸ್‌; ಟಾಪ್‌ ಲೂಸರ್‌ಗಲು : ಝೀ ಎಂಟರ್‌ಟೇನ್‌ಮೆಂಟ್‌, ಎಕ್ಸಿಸ್‌ ಬ್ಯಾಂಕ್‌, ಎಚ್‌ ಸಿ ಎಲ್‌ ಟೆಕ್‌, ಹೀರೋ ಮೋಟೋ ಕಾರ್ಪ್‌, ಎಸ್‌ ಬ್ಯಾಂಕ್‌. 

ಡಾಲರ್‌ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 11 ಪೈಸೆಗಳ ಕುಸಿತವನ್ನು 70.60 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತು. 

https://beta.udayavani.com/news-section/business-news/bse-spurts-193-points-nifty-closes-above-11000-mark

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ