ದಿಲ್ಲಿಗೆ ಶೀಘ್ರವೇ ವಿಶ್ವ ಮಟ್ಟದ ಇನ್ನೊಂದು ರೈಲು ನಿಲ್ದಾಣ

Team Udayavani, Feb 8, 2019, 11:26 AM IST

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿ ಶೀಘ್ರವೇ ವಿಶ್ವ ಮಟ್ಟದ ಇನ್ನೊಂದು ರೈಲು ನಿಲ್ದಾಣವನ್ನು ಪಡೆಯಲಿದೆ.

ರೈಲು ನಿಲ್ದಾಣಗಳ ಮರು ಅಭಿವೃದ್ದಿ ಕಾರ್ಯಕ್ರಮದಡಿ ದಿಲ್ಲಿಯ ಬಿಜ್ವಾಸಾನ್‌ ರೈಲು ನಿಲ್ದಾಣವನ್ನು ವಿಶ್ವ ದರ್ಜೆಗೇರಿಸಲು ಆಯ್ಕೆ ಮಾಡಲಾಗಿದೆ.

ಪ್ರಕೃತ ಬಿಜ್ವಾಸಾನ್‌ ರೈಲು ನಿಲ್ದಾಣ ಸ್ಥಳೀಯ ರೈಲುಗಳನ್ನು ನಿರ್ವಹಿಸುತ್ತಿದೆ. ಈ ರೈಲು ನಿಲ್ದಾಣವು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವೇ ಇರುವುದರಿಂದ ಇದನ್ನು ವಿಶ್ವ ದರ್ಜೆಯ ರೈಲು ನಿಲ್ದಾಣವಾಗಿ ಅಭಿವೃದ್ದಿ ಪಡಿಸಿದರೆ ರೈಲು-ವಿಮಾನ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.

ಮೇಲಾಗಿ ಇದನ್ನು ದಿಲ್ಲಿ ಮೆಟ್ರೋ ಮೂಲಕ ನಗರದ ವಿವಿಧ ಪ್ರದೇಶಗಳಿಗೆ ಜೋಡಿಸುವುದು ಕೂಡ ಸುಲಭವಿರುತ್ತದೆ.  ಈ ಎಲ್ಲ ಗುಣಾಂಶಗಳನ್ನು ಪರಿಗಣಿಸಿ ಈ ರೈಲು ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸಲಾಗುವುದು ಎಂದು ರೈಲ್ವೇ ಮೂಲಗಳು ಹೇಳಿವೆ.

https://beta.udayavani.com/news-section/national-news/independent-cbi-raid-on-pmo-kejriwal-demands

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ