ಧೈರ್ಯವಿದ್ದರೆ ನನ್ನ ವಿರುದ್ಧ ಕೇಸು ಹಾಕಿ: PMಗೆ ದಿಗ್ವಿಜಯ್‌

Team Udayavani, Mar 6, 2019, 6:45 AM IST

ಹೊಸದಿಲ್ಲಿ : ”ನಾನು ರಾಷ್ಟ್ರ ವಿರೋಧಿ ಮತ್ತು ಪಾಕಿಸ್ಥಾನ ಬೆಂಬಲಿಗ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಹಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಧೈರ್ಯವಿದ್ದರೆ  ನನ್ನ ವಿರುದ್ದ ಕೇಸು ದಾಖಲಿಸಲಿ ನೋಡೋಣ” ಎಂದು ಹಿರಿಯ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌  ಸವಾಲು ಹಾಕಿದ್ದಾರೆ.

ದಿಗ್ವಿಜಯ್‌ ಸಿಂಗ್‌ ಅವರು ನಿನ್ನೆ ಮಂಗಳವಾರ ತಮ್ಮ ಸರಣಿ ಟ್ವೀಟ್‌ ಮೂಲಕ ಪುಲ್ವಾಮಾ ಘಟನೆಯನ್ನು ಒಂದು ಆಕಸ್ಮಿಕ ಎಂದು ಕರೆದಿದ್ದರು. ಮಾತ್ರವಲ್ಲದೆ ಇದೊಂದು ದುರ್ಘ‌ಟನೆ ಎಂದು ಪ್ರಧಾನಿ ಮೋದಿ ಸಹಿತ ಮೂವರು ಕೇಂದ್ರ ಸಚಿವರು ಹೇಳಿರುವುದನ್ನು ಪ್ರಶ್ನಿಸಿದ್ದರು. 

”ನನ್ನನ್ನು ದೇಶ ವಿರೋಧಿ, ಪಾಕ್‌ ಬೆಂಬಲಿಗ ಎಂದು ಆರೋಪಿಸುವ ಟ್ವೀಟ್‌ಗಳನ್ನು ಪ್ರಧಾನಿ ಮೋದಿ ಮತ್ತು ಅವರ ಸಚಿವರು ದಿಲ್ಲಿಯಿಂದಲೇ ಮಾಡಿದ್ದಾರೆ. ದಿಲ್ಲಿ ಪೊಲೀಸ್‌ ದಳ ಕೇಂದ್ರ ಸರಕಾರದ ಕೈಯಲ್ಲಿದೆ; ಹಾಗಿರುವಾಗಿ ನೀವು ಧೈರ್ಯವಿದ್ದರೆ ನನ್ನ ವಿರುದ್ಧ ಕೇಸು ದಾಖಲಿಸಿ ನೋಡೋಣ” ಎಂದು ದಿಗ್ವಿಜಯ್‌ ಚ್ಯಾಲೆಂಜ್‌ ಹಾಕಿದ್ದಾರೆ.

https://beta.udayavani.com/news-section/national-news/indias-all-out-effort-to-get-jem-chief-masood-azhar-banned

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ