ರಫೇಲ್‌ ಡೀಲ್‌ : ಪಿಎಂಓ ಮೇಲೆ ಸ್ವತಂತ್ರ ಸಿಬಿಐ ದಾಳಿ: ಕೇಜ್ರಿ ಆಗ್ರಹ

Team Udayavani, Feb 8, 2019, 11:44 AM IST

ಹೊಸದಿಲ್ಲಿ : ರಫೇಲ್‌ ಫೈಟರ್‌ ಜೆಟ್‌ ಡೀಲ್‌ ನ ಸತ್ಯಾಂಶಗಳನ್ನು ಹೊರತಲು ‘ಸ್ವತಂತ್ರ ಸಿಬಿಐ’ ಪ್ರಧಾನಿ ಕಾರ್ಯಾಲಯದ ಮೇಲೆ ದಾಳಿ ನಡೆಸಿ ಬಂಧನಗಳನ್ನು ನಡೆಸಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಇಂದು ಶುಕ್ರವಾರ ಹೇಳಿದ್ದಾರೆ.

ಕೇಜ್ರಿವಾಲ್‌ ಅವರ ಪಕ್ಷದ ಸಹೋದ್ಯೋಗಿ, ರಾಜ್ಯಸಭಾ ಸಂಸದ ಸಂಜಯ್‌ ಸಿಂಗ್‌ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಫೇಲ್‌ ಡೀಲ್‌ ನಲ್ಲಿ ಈಗ ಹೊಸ ವಿಷಯ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ತಾನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೇಸು ದಾಖಲಿಸುವುದಾಗಿ ಹೇಳಿದ್ದಾರೆ.

ಭಾರತ – ಫ್ರಾನ್ಸ್‌ ನಡುವಿನ 59,000 ಕೋಟಿ ರಫೇಲ್‌ ಡೀಲ್‌ ಕುರಿತು ರಕ್ಷಣಾ ಇಲಾಖೆ ಮಾತುಕತೆ ನಡೆಯತ್ತಿದ್ದ ವೇಳೆ ಪ್ರಧಾನಿ ಕಾರ್ಯಾಲಯ ಸಮಾನಾಂತರ ಮಾತುಕತೆ ನಡೆಸುತ್ತಿತ್ತು ಎಂಬ ‘ದಿ ಹಿಂದೂ’ ಪತ್ರಿಕೆ ವರದಿಯ ಹಿನ್ನೆಲೆಯಲ್ಲಿ  ಕೇಜ್ರಿವಾಲ್‌, ಮತ್ತು ಸಂಜಯ್‌ ಸಿಂಗ್‌ ಅವರಿಂದ ಈ ಹೇಳಿಕೆಗಳು ಬಂದಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ