ಮಸೂದ್‌ ಅಜರ್‌ ನಿಷೇಧ: UNSC ಸದಸ್ಯರನ್ನು ಸಂಪರ್ಕಿಸುತ್ತಿರುವ ಭಾರತ

Team Udayavani, Mar 6, 2019, 7:00 AM IST

ಹೊಸದಿಲ್ಲಿ : ಭಾರತದ ಮೇಲಿನ ಹಲವಾರು ಉಗ್ರ ದಾಳಿಗಳ ಮಾಸ್ಟರ್‌ ಮೈಂಡ್‌, ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಮುಖ್ಯಸ್ಥ, ಮಸೂದ್‌ ಅಜರ್‌ ನನ್ನು ನಿಷೇಧಿಸಲು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎಲ್ಲ ಸದಸ್ಯರನ್ನು ಸಂಪರ್ಕಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸಬೇಕೆಂದು ಕೋರುವ ಪ್ರಸ್ತಾವವನ್ನು ಕಳೆದ ವಾರ ಭದ್ರತಾ ಮಂಡಳಿಗೆ ಅಮೆರಿಕ, ಫ್ರಾನ್ಸ್‌ ಮತ್ತು ಬ್ರಿಟನ್‌ ಸಲ್ಲಿಸಿವೆ. 

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ದೇಶಗಳಾಗಿರುವ ಚೀನ ಮತ್ತು ಇತರ 14 ರಾಷ್ಟ್ರಗಳನ್ನು ಭಾರತ ಸಂಪರ್ಕಿಸುತ್ತಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. 

https://beta.udayavani.com/news-section/national-news/pakistan-violates-cease-fire-in-rajouri

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ