ಖಾಸಗಿತನ ಮೂಲಭೂತ ಹಕ್ಕು; ಸುಪ್ರೀಂಕೋರ್ಟ್ ತೀರ್ಪಿಗೆ ಕೇಂದ್ರದ ಸ್ವಾಗತ

Team Udayavani, Aug 24, 2017, 5:00 PM IST

ನವದೆಹಲಿ: ಖಾಸಗಿತನ ಸಂವಿಧಾನದ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕೇಂದ್ರ ಸರ್ಕಾರ ಸ್ವಾಗತಿಸುವುದಾಗಿ ಗುರುವಾರ ಕೇಂದ್ರ ಸಚಿವ ರವಿಶಂಕರ ಪ್ರಸಾದ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಖಾಸಗಿತನ ಸಂವಿಧಾನದ ಮೂಲಭೂತ ಹಕ್ಕು. ನಾವು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ ಎಂದರು.

ಆದರೂ ಖಾಸಗಿತನಕ್ಕೂ ಕೆಲವು ಸಕಾರಣದ ನಿರ್ಬಂಧಗಳನ್ನು ಸಂವಿಧಾನದ ಚೌಕಟ್ಟಿನಲ್ಲಿಯೇ ವಿಧಿಸಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಆಧಾರ್ ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಖಾಸಗಿತನದ ಕುರಿತು ನೀಡಿದ ತೀರ್ಪನ್ನು ಸಚಿವರು ಓದಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ