ಡೆಂಕಣಕೋಟೆಯಲ್ಲಿ ಬೊಮ್ಮನಹಳ್ಳಿಯ ರೌಡಿ ಶೀಟರ್‌ ಬರ್ಬರ ಹತ್ಯೆ

Team Udayavani, Mar 12, 2019, 3:09 PM IST

ಬೆಂಗಳೂರು: ಬೊಮ್ಮನಹಳ್ಳಿಯಲ್ಲಿ ರೌಡಿ ಶೀಟರ್‌ ಆಗಿದ್ದ ಇಸ್ಮಾಯಿಲ್‌ನನ್ನು ತಮಿಳುನಾಡಿನ ಹೊಸೂರಿನ ಡೆಂಕಣಕೋಟೆಯಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. 

ಇಸ್ಮಾಯಿಲ್‌ ಬಂಡೇಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯ ರೌಡಿ ಶೀಟರ್‌ ಆಗಿದ್ದು ,ಕಳೆದ ಬಿಬಿಎಂಪಿ  ಚುನಾವಣೆಗೆ ಸ್ಪರ್ಧೆ ಮಾಡಿದ್ದ ಎಂದು ತಿಳಿದು ಬಂದಿದೆ. ಹಳೇ ದ್ವೇಷದಲ್ಲಿ ಹತ್ಯೆಗೈಯಲಾಗಿದೆ ಎನ್ನಲಾಗಿದೆ. 

ಡೆಂಕಣಕೋಟೆಯಲ್ಲಿ ಸ್ನೇಹಿತನ ಮನೆಗೆ ತೆರಳುವಾಗ ಕಾರಿನಲ್ಲಿ ಹಿಂಬಾಲಿಸಿದ 7 ಮಂದಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ. 

ಹತ್ಯೆಗೈಯುವ ವೇಳೆ ದುಷ್ಕರ್ಮಿಗಳು ಮಂಕಿ ಕ್ಯಾಪ್‌ ಧರಿಸಿದ್ದರು  ಎಂದು ತಿಳಿದು ಬಂದಿದೆ. 

ಡೆಂಕಣಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

https://beta.udayavani.com/news-section/national-news/if-the-loan-does-not-pay-the-situation-tough-jet-airways

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ