ಏಕದಿನ ತಂಡದಲ್ಲಿ  ಕ್ರಿಸ್‌ ಗೇಲ್‌

Team Udayavani, Feb 8, 2019, 12:30 AM IST

ಸೇಂಟ್‌ ಲೂಸಿಯಾ: ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಇಂಗ್ಲೆಂಡ್‌ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಿಗಾಗಿ “ಬಿಗ್‌ ಹಿಟ್ಟರ್‌’ ಕ್ರಿಸ್‌ ಗೇಲ್‌ ಅವರಿಗೆ ತಂಡದಲ್ಲಿ ಸ್ಥಾನ ನೀಡಿದೆ.
 
ಕಳೆದ ಜುಲೈಯಲ್ಲಿ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಸರಣಿ ಬಳಿಕ ಮೊದಲ ಸಲ ವೆಸ್ಟ್‌ ಇಂಡೀಸ್‌ ತಂಡದಲ್ಲಿ ಕಾಣಿಸಿಕೊಂಡಿದ್ದ ಕ್ರಿಸ್‌ ಗೇಲ್‌, ಎವಿನ್‌ ಲೆವಿಸ್‌ ಅವರೊಂದಿಗೆ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆಗಳಿವೆ. ಲೆವಿಸ್‌ ಮತ್ತು ಗೇಲ್‌ ಕಳೆದ ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿ ದ್ದರು. ಆದರೆ ವಿಶ್ವಕಪ್‌ ಗಮನ ದಲ್ಲಿರಿಸಿಕೊಂಡು ವಿಂಡೀಸ್‌ ಕ್ರಿಕೆಟ್‌ ಮಂಡಳಿ ಕ್ರಿಸ್‌ ಗೇಲ್‌ ಅವರನ್ನು ತಂಡಕ್ಕೆ  ಸೇರಿಸಿಕೊಂಡಿದೆ. ಎಡಗೈ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರಣ್‌ ಅವರನ್ನು ಮೊದಲ ಬಾರಿಗೆ ಆಯ್ಕೆ ಮಾಡಿದೆ.

ಟೆಸ್ಟ್‌ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆಯಲ್ಲಿರುವ ವೆಸ್ಟ್‌ ಇಂಡೀಸ್‌ ಫೆ. 9ರಿಂದ ಅಂತಿಮ ಟೆಸ್ಟ್‌ ಆಡಲಿದೆ. ಇದಾದ ಬಳಿಕ 5 ಏಕದಿನ ಸರಣಿ ಆರಂಭವಾಗಲಿದೆ. ಫೆ. 20ರಂದು ಬ್ರಿಜ್‌ಟೌನ್‌ನಲ್ಲಿ ಮೊದಲ ಪಂದ್ಯ ನಡೆಯಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ