9 ವರ್ಷಗಳ ನಂತರ ಮೊದಲ ಬಾಲ್ ಗೆ ಔಟ್ ಆದ ಧೋನಿ

Team Udayavani, Mar 5, 2019, 10:57 AM IST

ನಾಗ್ಪುರ: ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ನಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಎದುರಿಸಿದ ಮೊದಲ ಬಾಲ್ ಗೆ ಔಟ್ ಆಗಿದ್ದಾರೆ. ಧೋನಿ ಈ ಹಿಂದೆ ಮೊದಲ ಎಸೆತಕ್ಕೆ ಔಟ್ ಆಗಿರುವುದು 2010ರಲ್ಲಿ. ಅಂದರೆ ಬರೋಬ್ಬರಿ 9 ವರ್ಷಗಳ ಹಿಂದೆ.

ಇಂದಿನ ಪಂದ್ಯದ 32 ನೇ ಓವರ್ ಬೌಲಿಂಗ್ ಮಾಡುತ್ತಿದ್ದ ಆಸೀಸ್ ಸ್ಪಿನ್ನರ್ ಆಡಂ ಜಾಂಪಾ, ಓವರ್ ನ ಎರಡನೇ ಎಸೆತಕ್ಕೆ ಕೇದಾರ್ ಜಾಧವ್ ಔಟ್ ಆದರು. ನಂತರ ಬ್ಯಾಟ್ ಹಿಡಿದು ಬಂದ ಮಹೇಂದ್ರ ಸಿಂಗ್ ಧೋನಿ ತಾನೆದುರಿಸಿದ ಮೊದಲ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಸ್ಲಿಪ್ ನಲ್ಲಿದ್ದ ಖ್ವಾಜಾಗೆ ಕ್ಯಾಚ್ ನೀಡಿದ ಗೋಲ್ಡನ್ ಡಕ್ ಗೆ ಬಲಿಯಾದರು.

2010ರ ವಿಶಾಖಪಟ್ಟಣ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಧೋನಿ ಈ ಹಿಂದೆ ಡಕ್ ಔಟ್ ಆಗಿದ್ದರು. ಮತ್ತೊಂದು ವಿಶೇಷವೇನೆಂದರೆ, ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ  ಗೋಲ್ಡನ್ ಡಕ್ ಗೆ ಬಲಿಯಾಗಿದ್ದರು. ಆ ಪಂದ್ಯ 2004ರಲ್ಲಿ ಬಾಂಗ್ಲಾದೇಶ ತಂಡದ ಎದುರು ಚಿತ್ತಗಾಂಗ್ ನಲ್ಲಿ ನಡೆದಿತ್ತು.

https://beta.udayavani.com/news-section/sports-news/virat-scored-40th-hundred-in-odi

ಈ ವಿಭಾಗದಿಂದ ಇನ್ನಷ್ಟು

  • ಹೊಸದಿಲ್ಲಿ: ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ, ಕಿರಿಯ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟನ್ನು ಅದ್ಧೂರಿಯಾಗಿ ಆರಂಭಿಸಿದ್ದರು....

  • ಹೈದರಾಬಾದ್‌: "ಸಾಯ್‌ ಗೋಪಿಚಂದ್‌ ಬ್ಯಾಡ್ಮಿಂಟನ್‌ ಅಕಾಡೆಮಿ'ಯಿಂದ 9 ತಿಂಗಳು ದೂರವಿದ್ದ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು ಮನಸ್ಸು ಬದಲಾಯಿಸಿದ್ದಾರೆ. ತಮ್ಮ...

  • ಜೊಹಾನ್ಸ್‌ಬರ್ಗ್‌: "ಚೋಕರ್' ಎಂದೇ ಗುರುತಿಸಲ್ಪಡುವ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡ ಈ ಬಾರಿಯ ವಿಶ್ವಕಪ್‌ನ ಫೇವರಿಟ್‌ ಅಲ್ಲವಂತೆ. ಹೀಗೆಂದು ಸ್ವತಃ ಆ ನಾಡಿನ...

  • ದುಬಾೖ: ಶನಿವಾರ ನಡೆದ ದ್ವಿತೀಯ ಟಿ20 ಮುಖಾಮುಖಿಯಲ್ಲಿ ಯುಎಇ ತಂಡ ಅಮೆರಿಕ ವಿರುದ್ಧ 24 ರನ್ನುಗಳ ಜಯ ಸಾಧಿಸಿ 2 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಮೊದಲು...

  • ಬಾಕು: 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದ್ದ ಭಾರತದ ಭರವಸೆಯ ಜಿಮ್ನಾಸ್ಟ್‌ ದೀಪಾ ಕರ್ಮಾಕರ್‌ ಗಂಟು ನೋವಿ ನಿಂದಾಗಿ "ಆರ್ಟಿಸ್ಟಿಕ್‌...

ಹೊಸ ಸೇರ್ಪಡೆ