ನಾಗ್ಪುರ 2ನೇ ಏಕದಿನ ಪಂದ್ಯ:ಆಸೀಸ್‌ ವಿರುದ್ಧ ಭಾರತಕ್ಕೆ ರೋಚಕ ಗೆಲುವು

Team Udayavani, Mar 5, 2019, 4:03 PM IST

ನಾಗ್ಪುರ: ಮಂಗಳವಾರ ನಡೆದ ಏಕದಿನ ಸರಣಿಯ 2ನೇ ರೋಚಕ ಪಂದ್ಯದಲ್ಲಿ ಪ್ರವಾಸಿ ಆಸೀಸ್‌ ವಿರುದ್ಧ ಭಾರತ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. 

ಭಾರತದ 251 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ  242 ರನ್‌ಗಳಿಸಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಸೋಲನ್ನು ಒಪ್ಪಿತು. 

ಕೊನೆಯ ಓವರ್‌ನಲ್ಲಿ 6 ಎಸೆತದಲ್ಲಿ 11 ರನ್‌ ಅಗತ್ಯವಿತ್ತು. ಕೊನೆಯ ಓವರ್‌ ಎಸೆದ ವಿಜಯ್‌ ಶಂಕರ್‌ 52ರನ್‌ಗಳಿಸಿದ್ದ ಸ್ಟೋಯ್ನಿಸ್‌ ಅವರನ್ನು ಎಲ್‌ಬಿಡಬ್ಲ್ಯೂ ಮೂಲಕ ಪೆವಿಲಿಯನ್‌ಗೆ ಕಳುಹಿಸಿ ಆಸೀಸ್‌ಗೆ ಭಾರೀ ಅಘಾತ ನೀಡಿದರು. ಮೂರನೇ ಎಸೆತದಲ್ಲಿ ಝಂಪಾ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡುವ ಮೂಲಕ ತಂಡಕ್ಕೆ ಜಯ ತಂದಿಟ್ಟರು. 

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್‌ಪಟ್ಟ ಭಾರತ ನಾಯಕ ವಿರಾಟ್‌ ಕೊಹ್ಲಿ ಅವರ ಭರ್ಜರಿ ಶತಕದ ನೆರವಿನಿಂದ 250 ರನ್‌ಗಳನ್ನು ಗಳಿಸಿತ್ತು. 48.2 ಒವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಭಾರತ ತಂಡ ಕಳೆದುಕೊಂಡಿತ್ತು. 

https://beta.udayavani.com/news-section/sports-news/australia-india

ಈ ವಿಭಾಗದಿಂದ ಇನ್ನಷ್ಟು

  • ಹೊಸದಿಲ್ಲಿ: ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ, ಕಿರಿಯ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟನ್ನು ಅದ್ಧೂರಿಯಾಗಿ ಆರಂಭಿಸಿದ್ದರು....

  • ಹೈದರಾಬಾದ್‌: "ಸಾಯ್‌ ಗೋಪಿಚಂದ್‌ ಬ್ಯಾಡ್ಮಿಂಟನ್‌ ಅಕಾಡೆಮಿ'ಯಿಂದ 9 ತಿಂಗಳು ದೂರವಿದ್ದ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು ಮನಸ್ಸು ಬದಲಾಯಿಸಿದ್ದಾರೆ. ತಮ್ಮ...

  • ಜೊಹಾನ್ಸ್‌ಬರ್ಗ್‌: "ಚೋಕರ್' ಎಂದೇ ಗುರುತಿಸಲ್ಪಡುವ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡ ಈ ಬಾರಿಯ ವಿಶ್ವಕಪ್‌ನ ಫೇವರಿಟ್‌ ಅಲ್ಲವಂತೆ. ಹೀಗೆಂದು ಸ್ವತಃ ಆ ನಾಡಿನ...

  • ದುಬಾೖ: ಶನಿವಾರ ನಡೆದ ದ್ವಿತೀಯ ಟಿ20 ಮುಖಾಮುಖಿಯಲ್ಲಿ ಯುಎಇ ತಂಡ ಅಮೆರಿಕ ವಿರುದ್ಧ 24 ರನ್ನುಗಳ ಜಯ ಸಾಧಿಸಿ 2 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಮೊದಲು...

  • ಬಾಕು: 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದ್ದ ಭಾರತದ ಭರವಸೆಯ ಜಿಮ್ನಾಸ್ಟ್‌ ದೀಪಾ ಕರ್ಮಾಕರ್‌ ಗಂಟು ನೋವಿ ನಿಂದಾಗಿ "ಆರ್ಟಿಸ್ಟಿಕ್‌...

ಹೊಸ ಸೇರ್ಪಡೆ