ನಾಗ್ಪುರ ಏಕದಿನ: ಟಾಸ್ ಗೆದ್ದ ಆಸೀಸ್ ಬೌಲಿಂಗ್ ಆಯ್ಕೆ

Team Udayavani, Mar 5, 2019, 8:04 AM IST

ನಾಗ್ಪುರ: ಭಾರತ- ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಮೊದಲು ಬೌಲಿಂಗ್ ಮಾಡುವ ಆಯ್ಕೆ ಮಾಡಿದೆ. ಮೊದಲ ಪಂದ್ಯದಲ್ಲಿ ಆಡಿದ ಬಳಗವನ್ನೇ ಭಾರತ ಈ ಪಂದ್ಯದಲ್ಲಿ ಆಡಲಿದೆ.

ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸೀಸ್ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಟರ್ನರ್ ಮತ್ತು ಬೆಹ್ರಂಡಾಫ್ ಬದಲಿಗೆ ಶಾನ್ ಮಾರ್ಶ್ ಮತ್ತು ನಾಥನ್ ಲಿಯೋನ್ ಅವಕಾಶ ಪಡೆದಿದ್ದಾರೆ. 

ಟಾಸ್ ಸೋತ ನಂತರ ಮಾತನಾಡಿದ ಭಾರತೀಯ ನಾಯಕ ಕೊಹ್ಲಿ, ನಾವು ಟಾಸ್ ಗೆದ್ದಿದ್ದರೆ ಬ್ಯಾಟಿಂಗ್ ಮಾಡುತ್ತಿದ್ದೆ. ಹಾಗಾಗಿ ಟಾಸ್ ಸೋತು ಏನು ನಷ್ಟವಾಗಿಲ್ಲ ಎಂದರು. ವಿಶಾಖಪಟ್ಟಣದಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಭಾರತ ಆರು ವಿಕೆಟ್ ಗಳಿಂದ ಗೆದ್ದಿತ್ತು. 

ತಂಡಗಳು: 
ಭಾರತ:
ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾ), ಅಂಬಾಟಿ ರಾಯುಡು, ಎಂಎಸ್ ಧೋನಿ (ಕೀ), ಕೇದಾರ ಜಾಧವ್, ವಿಜಯ್ ಶಂಕರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.
 

ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ಆರನ್ ಫಿಂಚ್ (ನಾ), ಶಾನ್ ಮಾರ್ಷ್, ಮೋರಿಸ್ ಸ್ಟೊಯಿನಿಸ್, ಪೀಟರ್ ಹ್ಯಾಂಡ್ಸ್ ಕಾಂಬ್, ಗ್ಲೆನ್ ಮ್ಯಾಕ್ಸ್ ವೆಲ್, ಅಲೆಕ್ಸ್ ಕ್ಯಾರಿ (ಕೀ ), ನಾಥನ್ ಕೌಲ್ಟರ್-ನೈಲ್, ಪ್ಯಾಟ್ ಕಮ್ಮಿನ್ಸ್, ನಾಥನ್ ಲಿಯಾನ್

https://beta.udayavani.com/news-section/sports-news/dhoni-got-out-for-the-first-ball-after-9-years

ಈ ವಿಭಾಗದಿಂದ ಇನ್ನಷ್ಟು

  • ಹೊಸದಿಲ್ಲಿ: ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ, ಕಿರಿಯ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟನ್ನು ಅದ್ಧೂರಿಯಾಗಿ ಆರಂಭಿಸಿದ್ದರು....

  • ಹೈದರಾಬಾದ್‌: "ಸಾಯ್‌ ಗೋಪಿಚಂದ್‌ ಬ್ಯಾಡ್ಮಿಂಟನ್‌ ಅಕಾಡೆಮಿ'ಯಿಂದ 9 ತಿಂಗಳು ದೂರವಿದ್ದ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು ಮನಸ್ಸು ಬದಲಾಯಿಸಿದ್ದಾರೆ. ತಮ್ಮ...

  • ಜೊಹಾನ್ಸ್‌ಬರ್ಗ್‌: "ಚೋಕರ್' ಎಂದೇ ಗುರುತಿಸಲ್ಪಡುವ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡ ಈ ಬಾರಿಯ ವಿಶ್ವಕಪ್‌ನ ಫೇವರಿಟ್‌ ಅಲ್ಲವಂತೆ. ಹೀಗೆಂದು ಸ್ವತಃ ಆ ನಾಡಿನ...

  • ದುಬಾೖ: ಶನಿವಾರ ನಡೆದ ದ್ವಿತೀಯ ಟಿ20 ಮುಖಾಮುಖಿಯಲ್ಲಿ ಯುಎಇ ತಂಡ ಅಮೆರಿಕ ವಿರುದ್ಧ 24 ರನ್ನುಗಳ ಜಯ ಸಾಧಿಸಿ 2 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಮೊದಲು...

  • ಬಾಕು: 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದ್ದ ಭಾರತದ ಭರವಸೆಯ ಜಿಮ್ನಾಸ್ಟ್‌ ದೀಪಾ ಕರ್ಮಾಕರ್‌ ಗಂಟು ನೋವಿ ನಿಂದಾಗಿ "ಆರ್ಟಿಸ್ಟಿಕ್‌...

ಹೊಸ ಸೇರ್ಪಡೆ