ವನಿತೆಯರ ಟಿ-ಟ್ವೆಂಟಿ: ಕಿವೀಸ್ ವಿರುದ್ಧ ಸರಣಿ ಸೋತ ಭಾರತ

Team Udayavani, Feb 8, 2019, 6:36 AM IST

ಆಕ್ಲಂಡ್: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಚುಟುಕು ಪಂದ್ಯವನ್ನು ಸೋತ ಭಾರತೀಯ ಮಹಿಳೆಯರು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಸೋತಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಹರ್ಮನ್ ಪ್ರೀತ್  ಕೌರ್ ಪಡೆ ಕೊನೆಯ ಎಸೆತದಲ್ಲಿ ಸೊತಿದೆ. 

ಈಡನ್ ಪಾರ್ಕ್ನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ನ್ಯೂಜಿಲ್ಯಾಂಡ್ ಭಾರತವನ್ನು 135  ರನ್ ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದರು. ಸ್ಟಾರ್ ಆಟಗಾರ್ತಿ ಸ್ನೃತಿ ಮಂಧನಾ (36) ಮತ್ತು ಜೆಮಿಮಾ ರೋಡ್ರಿಗಸ್ ( 72) ದ್ವಿತೀಯ ವಿಕೆಟ್ ಗೆ ಉತ್ತಮ ಜೊತೆಯಾಟ ನಡೆಸಿದರು. ವೇಗವಾಗಿ ರನ್ ಪೇರಿಸಿದ ಈ ಜೋಡಿ 63 ರನ್ ಜೊತೆಯಾಟ ನಡೆಸಿದಾಗ ಮಂದನಾ ಔಟ್ ಆದರು. ನಂತರ ಬಂದ ಯಾವ ಆಟಗಾರರು ಕೂಡಾ ಕ್ರೀಸ್ ಕಚ್ಚಿ ಆಡುವಲ್ಲಿ ವಿಪಲರಾದರು. ರೋಡ್ರಿಗಸ್ ಅರ್ಧಶತಕ ಬಾರಿಸಿದರೂ ಕೂಡಾ ಯಾವುದೇ ಜೊತೆಯಾಟ ನಡೆಯದ ಕಾರಣ ಭಾರತ 20 ಓವರ್ ನಲ್ಲಿ ಕೇವಲ 135  ರನ್ ಗಳಿಸಲಷ್ಟೇ ಶಕ್ತವಾಯಿತು. 


ಗುರಿ ಬೆನ್ನತ್ತಿದ ಕಿವೀಸ್ ವನಿತೆಯರು ಉತ್ತಮ ಆರಂಭ ಪಡೆದರೂ ಕೊನೆಯಲ್ಲಿ ಸ್ವಲ್ಪ ಎಡವಿದರು. ಅಂತಿಮ ಎಸೆತದಲ್ಲಿ ವಿಜಯದ ರನ್ ಗಳಿಸಿದರು. ನುಭವಿ ಸೂಜಿ ಬೇಟ್ಸ್ 62 ರನ್ ಗಳಿಸಿದರೆ ನಾಯಕಿ ಆಮಿ ಸ್ಯಾಟರ್ ವೈಟ್  23 ರನ್ ಗಲಿಸಿದರು. ಭಾರತದ ಪರ ರಾಧ ಯಾದವ್ ಮತ್ತು ಅರುಂಧತಿ ರೆಡ್ಡಿ ತಲಾ ಎರಡು ವಿಕೆಟ್ ಪಡೆದರು. 


ಈ ವಿಭಾಗದಿಂದ ಇನ್ನಷ್ಟು

  • ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಯಶಸ್ವೀ ನಾಯಕರಲ್ಲೊಬ್ಬರಾಗಿರುವ ಮತ್ತು ವಿಶ್ವದ ಅತ್ಯುತ್ತಮ ಫಿನಿಶರ್ ಗಳಲ್ಲಿ ಒಬ್ಬರಾಗಿರುವ ಮಹೇಂದ್ರ...

  • ಆಕ್ಲಂಡ್: ಭಾರತದ ಚುಟುಕು ಮಾದರಿಯ ನಿಯೋಜಿತ ನಾಯಕ ರೋಹಿತ್ ಶರ್ಮಾ ಈಗ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮೂಡಿ ಬಂದಿದ್ದಾರೆ....

  • ಆಕ್ಲಂಡ್: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ದ್ವಿತೀಯ ಟಿ-ಟ್ವೆಂಟಿ ಪಂದ್ಯದಲ್ಲಿ ಆತಿಥೇಯ ಕಿವೀಸ್ ವಿರುದ್ಧ...

  • ಆಕ್ಲಂಡ್: ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ T20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ 159 ರನ್ನುಗಳ ಗುರಿ ನಿಗದಿಯಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ...

  • ಸೇಂಟ್‌ ಲೂಸಿಯಾ: ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಇಂಗ್ಲೆಂಡ್‌ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಿಗಾಗಿ "ಬಿಗ್‌ ಹಿಟ್ಟರ್‌' ಕ್ರಿಸ್‌ ಗೇಲ್‌ ಅವರಿಗೆ...

ಹೊಸ ಸೇರ್ಪಡೆ