ವೈಟ್‌ವಾಶ್‌ ತಪ್ಪಿಸಿಕೊಂಡ ಪಾಕ್‌

Team Udayavani, Feb 8, 2019, 12:30 AM IST

ಸೆಂಚುರಿಯನ್‌: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯವನ್ನು 27 ರನ್ನುಗಳಿಂದ ಗೆದ್ದ ಪಾಕಿಸ್ಥಾನ ವೈಟ್‌ವಾಶ್‌ ಅವಮಾನದಿಂದ ಪಾರಾಗಿದೆ. ಸೆಂಚುರಿಯನ್‌ನಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 9 ವಿಕೆಟಿಗೆ 168 ರನ್‌ ಗಳಿಸಿದರೆ, ದಕ್ಷಿಣ ಆಫ್ರಿಕಾ 9 ವಿಕೆಟಿಗೆ 141 ರನ್‌ ಮಾಡಿ ಶರಣಾಯಿತು. 

ಕೊನೆಯ ಹಂತದಲ್ಲಿ ಸಿಡಿದು ನಿಂತ ಕ್ರಿಸ್‌ ಮಾರಿಸ್‌ 29 ಎಸೆತಗಳಿಂದ ಅಜೇಯ 55 ರನ್‌ ಬಾರಿಸಿದರೂ (5 ಬೌಂಡರಿ, 3 ಸಿಕ್ಸರ್‌) ತಂಡವನ್ನು ದಡ ಮುಟ್ಟಿಸುವಲ್ಲಿ ವಿಫ‌ಲರಾದರು. ಅವರಿಗೆ ಇನ್ನೊಂದು ತುದಿಯಿಂದ ಬೆಂಬಲ ಸಿಗಲೇ ಇಲ್ಲ. ಪಾಕ್‌ ಪರ ಮೊಹಮ್ಮದ್‌ ಆಮಿರ್‌ 3, ಶಾದಾಬ್‌ ಖಾನ್‌ ಮತ್ತು ಫಾಹಿಮ್‌ ಅಶ್ರಫ್ ತಲಾ 2 ವಿಕೆಟ್‌ ಉರುಳಿಸಿದರು.

ಪಾಕಿಸ್ಥಾನ ಸವಾಲಿನ ಮೊತ್ತ 
ಪೇರಿಸಿದರೂ ಯಾರಿಂದಲೂ ದೊಡ್ಡ ಇನ್ನಿಂಗ್ಸ್‌ ಕಂಡು ಬರಲಿಲ್ಲ. 26 ರನ್‌ ಮಾಡಿದ ಮೊಹಮ್ಮದ್‌ ರಿಜ್ವಾನ್‌ ಅವರದೇ ಹೆಚ್ಚಿನ ಗಳಿಕೆ. ಆಸಿಫ್ ಅಲಿ 25, ಬಾಬರ್‌ ಆಜಂ 23, ಶಾದಾಬ್‌ ಖಾನ್‌ ಔಟಾಗದೆ 22 ರನ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-20 ಓವರ್‌ಗಳಲ್ಲಿ 9 ವಿಕೆಟಿಗೆ 168 (ರಿಜ್ವಾನ್‌ 26, ಆಸಿಫ್ 25, ಆಜಂ 23, ಶಾದಾಬ್‌ ಔಟಾಗದೆ 22, ಹೆಂಡ್ರಿಕ್ಸ್‌ 14ಕ್ಕೆ 4, ಮಾರಿಸ್‌ 27ಕ್ಕೆ 2). ದಕ್ಷಿಣ ಆಫ್ರಿಕಾ-20 ಓವರ್‌ಗಳಲ್ಲಿ 9 ವಿಕೆಟಿಗೆ 141 (ಮಾರಿಸ್‌ ಔಟಾಗದೆ 55, ಡ್ಯುಸೆನ್‌ 41, ಆಮಿರ್‌ 27ಕ್ಕೆ 3, ಶಾದಾಬ್‌ 34ಕ್ಕೆ 2, ಫಾಹಿಮ್‌ 35ಕ್ಕೆ 2). ಪಂದ್ಯಶ್ರೇಷ್ಠ: ಶಾದಾಬ್‌ ಖಾನ್‌. ಸರಣಿಶ್ರೇಷ್ಠ: ಡೇವಿಡ್‌ ಮಿಲ್ಲರ್‌.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ