ಎರಡನೇ T20 : ಟೀಂ ಇಂಡಿಯಾ ಗೆಲುವಿನ ಗುರಿ 159 ರನ್ನುಗಳು

Team Udayavani, Feb 8, 2019, 7:47 AM IST

ಆಕ್ಲಂಡ್: ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ T20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ 159 ರನ್ನುಗಳ ಗುರಿ ನಿಗದಿಯಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲ್ಯಾಂಡ್ ನಿಗದಿತ 20 ಓವರುಗಳಲ್ಲಿ 8 ವಿಕೆಟುಗಳನ್ನು ಕಳೆದುಕೊಂಡು 158 ರನ್ನುಗಳನ್ನು ಗಳಿಸಿತು.

ಕಿವೀಸ್ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. 8 ಓವರ್ ಗಳಾಗುವಷ್ಟರಲ್ಲಿ 50 ರನ್ನುಗಳಿಗೆ 4 ವಿಕೆಟ್ ಪತನವಾಗಿತ್ತು. ಆದರೆ ಬಳಿಕ ಚೇತರಿಸಿಕೊಂಡ ಆತಿಥೇಯರು ವಿಲಿಯಮ್ಸನ್ (20), ರಾಸ್ ಟೈಲರ್ (42) ಮತ್ತು ಕೊಲಿನ್ ಡಿ ಗ್ರ್ಯಾಂಡ್ ಹೋಮ್ ಅವರ ಅರ್ಧಶತಕದ ನೆರವಿನಿಂದ 158 ರನ್ನುಗಳ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಿತು.

ಭಾರತದ ಪರ ಕೃಣಾಲ್ ಹಿಮಾಂಶು ಪಾಂಡ್ಯ ಅವರು 3 ವಿಕೆಟ್ ಪಡೆದರು. ವೇಗಿ ಖಲೀಲ್ ಅಹಮ್ಮದ್ ಅವರು 2 ವಿಕೆಟ್ ಪಡೆದರು, ಭುವನೇಶ್ವರ್ ಕುಮಾರ್ ಮತ್ತು ಹಾರ್ಧಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ