- Monday 18 Feb 2019
-
UPDATED : IST
ಪೈಪೋಟಿಯಲ್ಲಿ ಭೋಜನಕೂಟ
Team Udayavani, Feb 8, 2019, 1:06 AM IST

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪೈಪೋಟಿಯಲ್ಲಿ ಶಾಸಕರು ಹಾಗೂ ಸಚಿವರಿಗೆ ಭೋಜನ ಕೂಟ ಏರ್ಪಡಿಸುತ್ತಿದ್ದಾರೆ. ಇದು ಕಾಂಗ್ರೆಸ್ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಪ್ರತಿ ಬಾರಿ ಸಂಪುಟ ಸಭೆಗೂ ಮುನ್ನ ಕಾಂಗ್ರೆಸ್ ಸಚಿವರಿಗೆ ಭೋಜನ ಕೂಟ ಏರ್ಪಡಿಸಬೇಕೆಂಬ ಹಿನ್ನೆಲೆಯಲ್ಲಿ ಎರಡು ಬಾರಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉಪಾಹಾರ ಕೂಟ ಏರ್ಪಡಿಸಿದ್ದರು. ಅದು ಪರಮೇಶ್ವರ್ ಶಕ್ತಿ ಪ್ರದರ್ಶನ ಎಂಬ ವ್ಯಾಖ್ಯಾನಕ್ಕೆ ಕಾರಣವಾಗಿತ್ತು. ಅದಾದ ಬಳಿಕ, ಇತ್ತೀಚೆಗೆ ಜಂಟಿ ಅಧಿವೇಶನ ಆರಂಭಕ್ಕೂ ಮುನ್ನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ಸಚಿವರಿಗೆ ಭೋಜನ ಕೂಟ ಏರ್ಪಡಿಸಿ, ಸದನದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಅದಾದ ಮಾರನೇ ದಿನವೇ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಎರಡೂ ಪಕ್ಷಗಳ ಶಾಸಕರಿಗೆ ಜಂಟಿ ಭೋಜನ ಕೂಟ ಏರ್ಪಡಿಸಿ, ಮೈತ್ರಿ ಸರ್ಕಾರದಲ್ಲಿ ಸಮನ್ವಯತೆ ತರುವ ಪ್ರಯತ್ನ ನಡೆಸಿದ್ದರು. ಈಗ ಸಿದ್ದರಾಮಯ್ಯ ಕೂಡ ಅದೇ ಮಾರ್ಗ ಅನುಸರಿಸುತ್ತಿದ್ದು, ಫೆಬ್ರವರಿ 12 ರಂದು ಮೈತ್ರಿ ಸರ್ಕಾರದ ಎರಡೂ ಪಕ್ಷಗಳ ಶಾಸಕರಿಗೆ ಔತಣಕೂಟ ಏರ್ಪಡಿಸಿ, ಎಲ್ಲರ ವಿಶ್ವಾಸಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಬ್ಬರು ನಾಯಕರ ಭೋಜನ ಕೂಟದ ರಾಜಕೀಯ ಎರಡೂ ಪಕ್ಷದ ಶಾಸಕರಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು: ‘ಆಡಿಯೋ ಟೇಪ್’ ಪ್ರಕರಣವು ಇದೀಗ ನಾನಾ ರೂಪವನ್ನು ಪಡೆದುಕೊಳ್ಳುತ್ತಿದೆ. ಬುಧವಾರದವರೆಗೆ ಈ ಪ್ರಕರಣದಿಂದ ಹೇಗೆ ಬಚಾವ್ ಆಗುವುದು ಎಂದು ತಲೆಕೆಡಿಸಿಕೊಂಡಿದ್ದ...
-
ಬೆಂಗಳೂರು: ‘ಆಡಿಯೋ ಪ್ರಕರಣ’ ಕುರಿತಾದಂತೆ ಮಂಗಳವಾರವೂ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ಪ್ರಕರಣವನ್ನು ಮೂರೂ ಪಕ್ಷಗಳು ಬಿಡುವಂತೆ ಕಾಣುತ್ತಿಲ್ಲ....
-
ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ವಿವಿಧೆಡೆಗಳಲ್ಲಿ ಇಂದು ಹಲವಾರು ಉದ್ಯಮಿಗಳ ಮನೆ ಮತ್ತು ಕಛೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ...
-
ಬೆಂಗಳೂರು: ಕಾಂಗ್ರೆಸ್ – ಜೆ.ಡಿ.ಎಸ್. ದೋಸ್ತಿ ಸರಕಾರದ ವಿರುದ್ಧ ಮುನಿಸಿಕೊಂಡು ಕಳೆದ ಕೆಲವು ದಿನಗಳಿಂದ ಅಜ್ಞಾತ ಸ್ಥಳದಲ್ಲಿರುವ ನಾಲ್ವರು ಕಾಂಗ್ರೆಸ್ ಶಾಸಕರಿಗೆ...
-
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ್ದ ಬಜೆಟ್ ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಗೆ ಘೋಷಿಸಿರುವ ಅನುದಾನದ ವಿವರ...
ಹೊಸ ಸೇರ್ಪಡೆ
-
ಪಟ್ನಾ: ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಲ್ಲಿ ಬಿಹಾರ ರಾಜ್ಯದ ಇಬ್ಬರು ಸಿ.ಆರ್.ಪಿ.ಎಫ್. ಯೋಧರೂ ಸೇರಿದ್ದಾರೆ. ರತನ್ ಕುಮಾರ್...
-
ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಯಶಸ್ವೀ ನಾಯಕರಲ್ಲೊಬ್ಬರಾಗಿರುವ ಮತ್ತು ವಿಶ್ವದ ಅತ್ಯುತ್ತಮ ಫಿನಿಶರ್ ಗಳಲ್ಲಿ ಒಬ್ಬರಾಗಿರುವ ಮಹೇಂದ್ರ...
-
ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಮತ್ತು ತನ್ನ ಪಕ್ಷ ಸ್ಪರ್ಧಿಸುವುದು ಶತಪ್ರತಿಶತ ಖಚಿತ ಎಂದು ನಟ ಮತ್ತು ‘ಮಕ್ಕಳ್ ನೀದಿ ಮೈಯಂ’ ಪಕ್ಷದ ಸ್ಥಾಪಕ...
-
ಜಮೈಕಾ: ವೆಸ್ಟ್ ಇಂಡೀಸ್ ಕ್ರಿಕೆಟ್ ನ ದೈತ್ಯ ಪ್ರತಿಭೆ ಕ್ರಿಸ್ಟೋಫರ್ ಹೆನ್ರಿ ಗೇಲ್ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಗೆ ವಿದಾಯ ಹೇಳಲಿದ್ದಾರೆ. ಇದೇ ವರ್ಷದ...
-
ನವದೆಹಲಿ: ಮಾಜೀ ಸಂಸದೆ ಮತ್ತು ಕಾಂಗ್ರೆಸ್ ನಾಯಕಿ ರಮ್ಯಾ ಅವರು ಮತ್ತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಮತ್ತೆ ‘ಭಾರತೀಯ ಜೂಟಿ ಪಾರ್ಟಿ’ (ಭಾರತೀಯ...
-
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ವೇದಿಕೆಯೊಂದರ ಚಪ್ಪರ ಕುಸಿದು ಬಿದ್ದು ಹಲವರು ಗಾಯಗೊಂಡಿರುವ...