ರಾಜ್ಯ ಬಜೆಟ್ 2019; ಕೃಷಿ ವಲಯ, ರೈತರಿಗೆ ಸಿಕ್ಕಿದ್ದೇನು?

Team Udayavani, Feb 8, 2019, 8:54 AM IST

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ 12.30ಕ್ಕೆ ವಿಧಾನಮಂಡಲದಲ್ಲಿ ಮಂಡಿಸಿದ್ದ 2019-20ನೇ ಸಾಲಿನ ಅಯವ್ಯಯದಲ್ಲಿ ರೈತರಿಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಲಾಗಿದೆ.

1)ಇಸ್ರೇಲ್ ಮಾದರಿ ಕೃಷಿ ಯೋಜನೆಗೆ 145 ಕೋಟಿ ರೂಪಾಯಿ

2)ಸಿರಿಧಾನ್ಯ ಬೆಳೆಗಾರರಿಗೆ ರೈತ ಸಿರಿ ಯೋಜನೆಯಡಿಯಲ್ಲಿ ನೇರ ನಗದು

3)ಕರಾವಳಿ ಮತ್ತು ಮಲೆನಾಡಿನ ರೈತರ ಬತ್ತ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 7,500 ರೂಪಾಯಿ ಪ್ರೋತ್ಸಾಹ ಧನ

4)ಮೆಣಸು, ಹೆಸರುಕಾಳು ಸಂಸ್ಕರಣಾ ಘಟಕಾ ಸ್ಥಾಪನೆಗೆ 160 ಕೋಟಿ

5)ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿ ಉದ್ಯಮಕ್ಕೆ ಶೇ.50ರಷ್ಟು ಸಹಾಯಧನ

6) ಪ್ರೋತ್ಸಾಹ ಧನ 5 ರೂಪಾಯಿಯಿಂದ 6 ರೂಪಾಯಿಗೆ ಏರಿಕೆ.

7)ನಾಟಿ ಕೋಳಿ ಸಾಕಾಣೆಗೆ 2 ಕೋಟಿ ರೂಪಾಯಿ, ಸಿರಿ ಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ. ನಗದು

8) ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೋಗೆ ಬೆಂಬಲ ಬೆಲೆ 50 ಕೋಟಿ, ಪ್ರಮುಖ 6 ಸಿರಿಧಾನ್ಯಗಳಿಗೆ ಬೆಂಬಲ ಬೆಲೆ 10 ಕೋಟಿ ರೂಪಾಯಿ ಅನುದಾನ.

9) ರೇಷ್ಮೆ ಮಾರುಕಟ್ಟೆ ಬಲವರ್ಧನೆಗೆ 10 ಕೋಟಿ ರೂಪಾಯಿ, ರೇಷ್ಮೆ ಕಾರ್ಮಿಕರ ಹೊಸ ತಾಂತ್ರಿಕತೆಹೆ 2 ಕೋಟಿ ರೂ., 15 ಜಿಲ್ಲೆಗಳಿಗೆ ಸುಸಜ್ಜಿತ ಪಶು ಚಿಕಿತ್ಸೆ ಕೇಂದ್ರ. ಮಂಗನ ಕಾಯಿಲೆ ಲಸಿಕೆ ತಯಾರಿಕೆಗೆ ಆದ್ಯತೆ. ನಾಟಿ ಕೋಳಿ ಸಾಕಾಣಿಗೆ 5 ಕೋಟಿ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ