ಮಹದಾಯಿ: ಗೋವಾ ವಿಶೇಷ ಯೋಜನೆ

Team Udayavani, Mar 6, 2019, 1:37 AM IST

ಪಣಜಿ: ಇಷ್ಟು ದಿನ ಪೋಲಾಗುತ್ತಿದ್ದ ಮಹದಾಯಿ ನೀರನ್ನು ಸಂಪೂರ್ಣ ಬಳಸಲು ಯೋಜನೆ ಆರಂಭಿಸಲಾಗುತ್ತಿದೆ ಎಂದು ಗೋವಾ ಆರೋಗ್ಯ ಮಂತ್ರಿ ವಿಶ್ವಜಿತ್‌ ರಾಣೆ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಯೋಜನೆಗಾಗಿ ಸುಮಾರು 100 ಕೋಟಿ ರೂ. ಖರ್ಚಾಗಲಿದೆ. 110 ಎಂಎಲ್‌ಡಿ ನೀರು ಸಂಸ್ಕರಣಾ ಸಾಮರ್ಥ್ಯದ ಘಟಕ ಸ್ಥಾಪಿಸಲಾಗುವುದು. ಇದರಿಂದಾಗಿ ಬಹುತೇಕ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಲಭಿಸಲಿದೆ. ಗಾಂಜೆ ಎಂಬಲ್ಲಿ ಒಂದು ದೊಡ್ಡ ಬಾಂದಾರ್‌ ನಿರ್ಮಿಸಿ ಅಲ್ಲಿಂದ ಖಾಂಡೆಪಾರ್‌ ನದಿಗೆ ಹರಿಬಿಡಲಾಗುತ್ತದೆ. ಅಲ್ಲಿಂದ ಓಪಾ ನೀರಿನ ಸಂಸ್ಕರಣಾ ಘಟಕದ ಮೂಲಕ ಗೋವಾದ ವಿವಿಧೆಡೆ ಕುಡಿಯುವ ನೀರು ಪೂರೈಕೆಯಾಗಲಿದೆ. ಇದರಿಂದಾಗಿ ಗೋವಾದಲ್ಲಿ ಬಹುತೇಕ ಪ್ರಮಾಣದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಲಭಿಸಲಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ