ಶಾಸಕ ಕುಮಠಳ್ಳಿ ನಾಪತ್ತೆ: ಪೊಲೀಸರಿಗೆ ದೂರು

Team Udayavani, Feb 8, 2019, 1:10 AM IST

ಅಥಣಿ: ಕಳೆದ ಹಲವಾರು ದಿನಗಳಿಂದ ಪಕ್ಷದ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರಿಗೆ ಸಿಗದೆ ಅಥಣಿ ಶಾಸಕ ಮಹೇಶ ಕುಮಠಳ್ಳಿ ಕಾಣೆಯಾಗಿದ್ದಾರೆಂದು ಅಥಣಿ ಪೊಲೀಸ್‌ ಠಾಣೆಯಲ್ಲಿ ನ್ಯಾಯವಾದಿ ಪ್ರಮೋದ ಹಿರೇಮನಿ ಎಂಬುವರು ದೂರು ದಾಖಲಿಸಿದ್ದಾರೆ.

50 ದಿನಗಳಿಂದ ಅಥಣಿ ಕ್ಷೇತ್ರದ ಶಾಸಕ ಮಹೇಶ ಕುಮಠಳ್ಳಿ ಪಕ್ಷದ ಕಾರ್ಯಕ್ರಮಗಳು ಹಾಗೂ 2 ದಿನಗಳಿಂದ ಜಂಟಿ ಅಧಿವೇಶನಕ್ಕೂ ಹಾಜರಾಗದ ಹಿನ್ನೆಲೆಯಲ್ಲಿ ಶಾಸಕ ಕುಮಠಳ್ಳಿ ಅವರನ್ನು ಯಾರೋ ಅಪಹರಿಸಿರುವ ಶಂಕೆಯಿದೆ. ಶಾಸಕರು ಗಣರಾಜೋತ್ಸವ ದಿನದಂದು ಏಕಾಏಕಿಯಾಗಿ ಕಾರ್ಯಕ್ರಮದ ಮಧ್ಯದಿಂದ ಎದ್ದು ಹೋಗುವ ಮೂಲಕ ಕಾಣೆಯಾಗಿದ್ದಾರೆ. ಅವರು ಕಾಣೆಯಾಗಿರುವ ಕುರಿತು ಇಲ್ಲಿವರೆಗೆ ಕಾರಣ ತಿಳಿದು ಬಂದಿಲ್ಲ. ಅಲ್ಲದೆ, ಅವರ ಮೊಬೈಲ್‌ ಸ್ವೀಚ್ ಆಫ್‌ ಆಗಿರುವುದು ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ