ಬಿಜೆಪಿ ಪಾಳಯ ಸೇರಿದ ಜಾಧವ್, ಕಲಬುರಗಿಗೆ ಪ್ರಧಾನಿ ಮೋದಿ ಆಗಮನ

Team Udayavani, Mar 6, 2019, 6:45 AM IST

ಕಲಬುರಗಿ: ನಿರೀಕ್ಷೆಯಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಮುಖಂಡ ಡಾ.ಉಮೇಶ್ ಜಾಧವ್ ಅವರು ಬುಧವಾರ ಕಲಬುರಗಿ ನಗರದ ಎಸ್ ವಿ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿಯ ಬೃಹತ್ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಭದ್ರಕೋಟೆಯಾದ ಕಲಬುರಗಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಯುತ್ತಿದೆ. ಹೆಲಿಕಾಪ್ಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಮಧ್ಯಾಹ್ನ 12ಗಂಟೆಗೆ ಆಗಮಿಸಿದ್ದರು. ಇದಕ್ಕೂ ಮುನ್ನ ಆರಂಭಗೊಂಡಿದ್ದ ಬಿಜೆಪಿ ಸಮಾವೇಶದಲ್ಲಿ ಡಾ.ಉಮೇಶ್ ಜಾಧವ್ ಅವರನ್ನು ಪಕ್ಷಕ್ಕೆ ಬಿಎಸ್ ಯಡಿಯೂರಪ್ಪ ಬರಮಾಡಿಕೊಂಡರು.

ಪ್ರಧಾನಿ ಮೋದಿ ಅವರು ಬಿಪಿಸಿಎಲ್ ಡಿಪೋಗೆ ಭೂಮಿಪೂಜೆ, ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ನೂತನ ವಿದ್ಯಾಲಯದ ಮೈದಾನದಲ್ಲಿ ಬೃಹತ್ ಸಭೆಯಲ್ಲಿ ಮಾತನಾಡಲಿದ್ದಾರೆ.

ನಮ್ಮ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು: ಜಾಧವ್

ನಿಮ್ಮ ಭರವಸೆ ಮೇಲೆ ಬಂದಿದ್ದೇನೆ. ಏನಾದ್ರೂ ಮಾಡಿ ನಮಗೆ ಐತಿಹಾಸಿಕ ಗೆಲುವು ಸಾಧಿಸುವಂತೆ ಮಾಡಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಬಹಿರಂಗ ಸಭೆಯಲ್ಲಿ ಜಾಧವ್ ವಿನಂತಿಸಿಕೊಂಡರು.

https://beta.udayavani.com/homepage-karnataka-edition/breakingnews-karnataka-edition/congress-loses-sleep-whenever-they-hear-56-says-pm

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ