ಏಡ್ಸ್‌ ನಿವಾರಣೆ ಮಾರ್ಗ ಆವಿಷ್ಕಾರ

Team Udayavani, Mar 5, 2019, 7:52 PM IST

ಲಂಡನ್‌: ಇಲ್ಲಿನ ಆಸ್ಪತ್ರೆಯೊಂದರಲ್ಲಿ ಏಡ್ಸ್‌ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಸದ್ಯದಲ್ಲೇ ಆ ರೋಗದಿಂದ ಗುಣಮುಖರಾಗಲಿದ್ದಾರೆಂಬ ಆಶಯವನ್ನು ಅವರಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು ವ್ಯಕ್ತ ಪಡಿಸಿದ್ದಾರೆ. ಇದು ಸಾಧ್ಯವಾದಲ್ಲಿ, ಅವರು ಏಡ್ಸ್‌ನಿಂದ ಮುಕ್ತರಾದ ವಿಶ್ವದ 2ನೇ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅಮೆರಿಕ ಮೂಲದ ಟಿಮೋಥಿ ಬ್ರೌನ್‌ 2007ರಲ್ಲಿ ಏಡ್ಸ್‌ನಿಂದ ಗುಣಮುಖರಾಗಿದ್ದು, ಈ ರೋಗದಿಂದ ಪಾರಾದ ವಿಶ್ವದ ಮೊದಲ ವ್ಯಕ್ತಿ ಎಂಬ ಖ್ಯಾತಿ ಹೊಂದಿದ್ದಾರೆ.

ಚಿಕಿತ್ಸೆ  ಹೇಗೆ?
ಲಂಡನ್‌ ರೋಗಿಯ ಹೆಸರನ್ನು ವೈದ್ಯರ ತಂಡ ಬಹಿರಂಗಗೊಳಿಸಿಲ್ಲ. 2003ರಲ್ಲಿ ಅವರಿಗೆ ಏಡ್ಸ್‌ ಇರುವುದು ತಿಳಿದುಬಂದಿತ್ತು. ಅವರಲ್ಲಿ ಹೊಸ ಅಸ್ಥಿ ಮಜ್ಜೆಯಿಂದ ಉತ್ಪತ್ತಿಯಾಗಿರುವ ರಕ್ತ ಕಣಗಳಲ್ಲಿ ಎಚ್‌ಐವಿ ಕಾಣಿಸಿಲ್ಲ. ಇದು ಅವರು ಶಾಶ್ವತವಾಗಿ ಗುಣಮುಖರಾಗುವ ಲಕ್ಷಣ ಎಂಬುದು ವೈದ್ಯ ರವೀಂದ್ರ ಗುಪ್ತಾ ತಂಡದ ಅಭಿಮತ.

ಲಂಡನ್‌ ರೋಗಿಯನ್ನು ಈಗಲೇ ರೋಗ ಮುಕ್ತನೆಂದು ಘೋಷಿಸಲಾಗದು. ಇನ್ನೂ ಹಲವಾರು ಹೈ ಸೆನ್ಸಿಟಿವಿಟಿ ಪರೀಕ್ಷೆಗಳಲ್ಲಿ ಅವರು ಉತ್ತೀರ್ಣರಾಗಬೇಕಿದೆ. ಆದರೆ ವಿಶ್ವವನ್ನು ಏಡ್ಸ್‌ ಮುಕ್ತವಾಗಿಸುವ ದಿನ ಹತ್ತಿರದಲ್ಲೇ ಇದೆ ಎಂದು ಹೇಳಬಲ್ಲೆ.
– ರವೀಂದ್ರ ಗುಪ್ತಾ, ವೈದ್ಯರು

https://beta.udayavani.com/news-section/world-news/thinking-back-to-the-status-of-the-preferred-merchant-country

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ