ಉಗ್ರ ಅಜರ್‌ ಸ್ಥಳಾಂತರ?

Team Udayavani, Mar 5, 2019, 1:00 AM IST

ಇಸ್ಲಾಮಾಬಾದ್‌: ಜೈಶ್‌-ಎ-ಮೊಹಮ್ಮದ್‌ ಸಂಸ್ಥಾಪಕ ಮಸೂದ್‌ ಅಜರ್‌ ಮೃತಪಟ್ಟಿದ್ದಾನೆ ಎಂಬ ವದಂತಿ ಹಬ್ಬಿರುವ ನಡುವೆಯೇ ಆತನನ್ನು ಪಾಕಿಸ್ಥಾನ ಸರಕಾರವೇ ಬೇರೆಡೆಗೆ ಸ್ಥಳಾಂತರ ಮಾಡಿದೆ ಎಂಬ ಸುದ್ದಿ ಯೊಂದು ಹೊರಬಿದ್ದಿದೆ. ಗುಪ್ತಚರ ಮೂಲಗಳು ಸೋಮವಾರ ಈ ಮಾಹಿತಿ ನೀಡಿದ್ದು, ರವಿವಾರ ಬೆಳಗ್ಗೆಯೇ ಅಜರ್‌ನನ್ನು ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಿಂದ ಬಹವಾಲ್ಪುರದ ಗೋಥ್‌ಗನ್ನಿ ಎಂಬಲ್ಲಿರುವ ಉಗ್ರರ ಶಿಬಿರಕ್ಕೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ.

ಇದೇ ವೇಳೆ, ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಕಿಡಿಕಾರಿರುವ ಜೈಶ್‌ ಸಂಘಟನೆ, ಭಾರತ ಮತ್ತು ಅಂತಾ ರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಮಣಿದಿರುವುದು ನಾಚಿಕೆಗೇಡು ಎಂದಿದೆ ಎಂದೂ ಮೂಲಗಳು ತಿಳಿಸಿವೆ.
ಕಣ್ಣೊರೆಸುವ ತಂತ್ರ: ಈ ನಡುವೆ, ಮುಂಬೈ ದಾಳಿಯ ಮಾಸ್ಟರ್‌ವೆುçಂಡ್‌ ಹಫೀಜ್‌ ಸಯೀದ್‌ ನೇತೃತ್ವದ ಜೆಯುಡಿ ಮತ್ತು ಅದರ ಅಂಗಸಂಸ್ಥೆ ಫ‌ಲಾಹ್‌-ಇ-ಇನ್ಸಾನಿಯತ್‌ಗೆ ನಿಷೇಧ ಹೇರಲಾಗಿದೆ ಎಂದು ಪಾಕ್‌ ಸರಕಾರ ಘೋಷಿಸಿರುವುದು ಕೇವಲ ಕಣ್ಣೊರೆಸುವ ತಂತ್ರ ಎಂಬ ಮಾಹಿತಿ ಹೊರಬಿದ್ದಿದೆ. ಈ ಸಂಘಟನೆಗಳು ಇನ್ನೂ ನಿಷೇಧವಾಗಿಲ್ಲ. ಕಣ್ಗಾವಲಿನಲ್ಲಿರುವ ಸಂಘಟನೆಗಳ ಪಟ್ಟಿಯಲ್ಲಿವೆ ಅಷ್ಟೆ ಎಂದು ಪಾಕ್‌ ರಾಷ್ಟ್ರೀಯ ಉಗ್ರ ನಿಗ್ರಹ ಪ್ರಾಧಿಕಾರದ ವೆಬ್‌ಸೈಟ್‌ನಲ್ಲೇ ಮಾಹಿತಿ ನೀಡಲಾಗಿದೆ.

https://beta.udayavani.com/news-section/world-news/discovery-of-aids-elimination-way

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ