ಮುಂಬಯಿ ಶೇರು 237 ಅಂಕ ನಷ್ಟ, ಟಾಟಾ ಮೋಟರ್‌ ಶೇರು ಶೇ.14 ಕುಸಿತ

Team Udayavani, Feb 8, 2019, 5:26 AM IST

ಮುಂಬಯಿ: ಅಮೆರಿಕ – ಚೀನ ವಾಣಿಜ್ಯ ಸುಂಕ ಸಮರ ಮತ್ತೆ ಜಗತ್ತನ್ನು ಕಾಡಲಿರುವ ಭೀತಿಯ ನಡುವೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.

ಇಂದಿನ ಆರಂಭಿಕ ವಹಿವಾಟಿನಲ್ಲಿ ಟಾಟಾ ಮೋಟರ್‌ ಶೇರು ಧಾರಣೆ  ಶೇ.14ರಷ್ಟು ಕುಸಿದು ಮಾರುಕಟ್ಟೆಗೆ ಶಾಕ್‌ ನೀಡಿತು.

ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್‌  237.27 ಅಂಕಗಳ ನಷ್ಟದೊಂದಿಗೆ 36,733.82 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 72.90 ಅಂಕಗಳ ನಷ್ಟದೊಂದಿಗೆ 10,996.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಇಂದಿನ ಆರಂಭಿಕ ವಹಿವಾಟಿನಲ್ಲಿ ಟಾಟಾ ಮೋಟರ್‌, ರಿಲಯನ್ಸ್‌, ಬಜಾಜ್‌ ಆಟೋ, ಎಸ್‌ ಬ್ಯಾಂಕ್‌, ಟೆಕ್‌ ಮಹೀಂದ್ರ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

ಡಾಲರ್‌ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 13 ಪೈಸೆಗಳ ಜಿಗಿತವನ್ನು ದಾಖಲಿಸಿ 71.32 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಬ್ರೆಂಟ್‌ ಕಚ್ಚಾ ತೈಲ ಶೇ.0.57ರ ಇಳಿಕೆಯೊಂದಿಗೆ ಬ್ಯಾರಲ್‌ಗೆ 62.33 ಡಾಲರ್‌ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು. 

ಮತ್ತೆ ಕಾಡಿದ ವಾಣಿಜ್ಯ ಸುಂಕ ಸಮರ: ಸೆನ್ಸೆಕ್ಸ್‌ 200 ಅಂಕ ಕುಸಿತ

Team Udayavani, Dec 5, 2018, 10:39 AM IST

ಮುಂಬಯಿ : ಅಮೆರಿಕ – ಚೀನ ವಾಣಿಜ್ಯ ಸುಂಕ ಸಮರ ಮತ್ತೆ ಕಾಡಲಾರಂಭಿಸಿದ ಕಾರಣ ಜಾಗತಿಕ ಶೇರು ಪೇಟೆಗಳಲ್ಲಿ ಇಂದು ಬುಧವಾರ ಭಾರೀ ಶೇರು ಮಾರಾಟ ನಡೆದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.

ಇಂದು ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್‌ 154.35 ಅಂಕಗಳ ನಷ್ಟದೊಂದಿಗೆ 35,979.96 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 60.30 ಅಂಕಗಳ ನಷ್ಟದೊಂದಿಗೆ 10,809.20 ಅಂಕಗಳ ಮಟ್ಟದಲ್ಲೂ  ವ್ಯವಹಾರ ನಿರತವಾಗಿದ್ದವು. 

ಇಂದಿನ ಆರಂಭಿಕ ವಹಿವಾಟಿನಲ್ಲಿ ಸನ್‌ ಫಾರ್ಮಾ, ಎಸ್‌ ಬ್ಯಾಂಕ್‌, ಎಚ್‌ ಡಿ ಎಫ್ ಸಿ, ರಿಲಯನ್ಸ್‌, ಎಚ್‌ ಡಿ ಎಫ್ ಸಿ ಬ್ಯಾಂಕ್‌ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

ಡಾಲರ್‌ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 26 ಪೈಸೆಗಳ ನಷ್ಟಕ್ಕೆ ಗುರಿಯಾಗಿ 70.75 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. 

ಇಂದು ಬೆಳಗ್ಗಿನ ವಹಿವಾಟಿನ ಟಾಪ್‌ ಗೇನರ್‌ಗಳು : ಭಾರ್ತಿ ಇನ್‌ಫ್ರಾಟೆಲ್‌, ಎಚ್‌ ಡಿ ಎಫ್ ಸಿ ಬ್ಯಾಂಕ್‌, ಎಚ್‌ಯುಎಲ್‌, ಎನ್‌ಟಿಪಿಸಿ; ಟಾಪ್‌ ಲೂಸರ್‌ಗಳು : ಗ್ರಾಸಿಂ, ಹಿಂಡಾಲ್ಕೊ, ಟಾಟಾಮೋಟರ್‌, ಇಂಡಿಯಾ ಬುಲ್ಸ್‌ ಹೌಸಿಂಗ್‌, ಜೆಎಸ್‌ಡಬ್ಲ್ಯು ಸ್ಟೀಲ್‌. 

ಆರ್‌ಬಿಐ-ಕೇಂದ್ರ ಬಿಕ್ಕಟ್ಟು: ಸೆನ್ಸೆಕ್ಸ್‌ 200ಕ್ಕೂ ಅಧಿಕ ಅಂಕ ನಷ್ಟ

Team Udayavani, Oct 31, 2018, 10:56 AM IST

ಮುಂಬಯಿ : ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರಕಾರದ ನಡುವೆ ಬಿಕ್ಕಟ್ಟು, ಉದ್ರಿಕ್ತತೆ ತಲೆದೋರಿರುವ ಕಾರಣಕ್ಕೆ ಕಂಗೆಟ್ಟಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು. 

ಮೇಲಾಗಿ ಡಾಲರ್‌ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 40 ಪೈಸೆಯ ಕಸಿತವನ್ನು ಕಂಡು 74.08 ರೂ. ಮಟ್ಟಕ್ಕೆ ಇಳಿದದ್ದು ಕೂಡ ಶೇರು ಪೇಟೆಗೊಂದು ಹೊಡೆತವಾಯಿತು. 

ಬೆಳಗ್ಗೆ 10.50 ರ ಹೊತ್ತಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ 169.72 ಅಂಕಗಳ ನಷ್ಟದೊಂದಿಗೆ 33,721.41 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 50.50 ಅಂಕಗಳ ನಷ್ಟದೊಂದಿಗೆ 10,147.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಇಂದು ಬೆಳಗ್ಗಿನ ವಹಿವಾಟಿನಲ್ಲಿ ಎಸ್‌ ಬ್ಯಾಂಕ್‌,ರಿಲಯನ್ಸ್‌, ಟೆಕ್‌ ಮಹೀಂದ್ರ, ಮಾರುತಿ ಸುಜುಕಿ ಮತ್ತು ಐಸಿಐಸಿಐ ಬ್ಯಾಂಕ್‌ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

ಟಾಪ್‌ ಗೇನರ್‌ಗಳು : ಟೆಕ್‌ ಮಹೀಂದ್ರ, ಇಂಡಿಯಾ ಬುಲ್ಸ್‌ ಹೌಸಿಂಗ್‌, ಇನ್‌ಫೋಸಿಸ್‌, ಎಚ್‌ ಡಿ ಎಫ್ ಸಿ, ಯುಪಿಎಲ್‌; ಟಾಪ್‌ ಲೂಸರ್‌ಗಳು : ಟಾಟಾ ಸ್ಟೀಲ್‌, ಭಾರ್ತಿ ಏರ್‌ಟೆಲ್‌, ಡಾ. ರೆಡ್ಡಿ, ಕೋಲ್‌ ಇಂಡಿಯಾ, ಹಿಂಡಾಲ್ಕೋ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ