ದೆಹಲಿ ಖಾಸಗಿ ಹೋಟೇಲ್ ನಲ್ಲಿ ಬೆಂಕಿ ಅವಘಡ : 10 ಸಾವು

Team Udayavani, Feb 12, 2019, 7:50 AM IST

ದೆಹಲಿ: ಇಲ್ಲಿನ ಕರೋಲಾಬಾಗ್ ಪ್ರದೇಶದಲ್ಲಿರುವ ಖಾಸಗಿ ಹೊಟೇಲೊಂದರಲ್ಲಿ ಇಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇದುವರೆಗೆ 10 ಮಂದಿ ಮೃತಪಟ್ಟಿರುವ ಕುರಿತಾಗಿ ಮಾಹಿತಿ ಸಿಕ್ಕಿದೆ. ಹೊಟೇಲ್ ಒಳಗಡೆ ಇನ್ನಷ್ಟು ಜನರು ಸಿಲುಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ. ಹೊಟೇಲ್ ನ ಒಳಗಡೆ ಸಿಲುಕಿರುವವರನ್ನು ರಕ್ಷಿಸುವ ಕಾರ್ಯವನ್ನು ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಾಡುತ್ತಿದ್ದಾರೆ. ಇದುವರೆಗೆ 25ಕ್ಕೂ ಹೆಚ್ಚು ಜನರನ್ನು ಹೊಟೇಲ್ ಒಳನಿಗಿಂದ ರಕ್ಷಿಸಲಾಗಿದೆ ಎಂದು ತಿಳಿದುಬಂದಿದ್ದು, ಇದುವರೆಗೂ ಯಾವುದೇ ಪ್ರಾಣಹಾನಿ ಸಂಭವಿಸಿದ ಕುರಿತಾಗಿ ವರದಿಯಾಗಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದು ಬಂದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ